Gyanvapi Belongs Only Hindus : ಜ್ಞಾನವಾಪಿ ಪ್ರದೇಶದಲ್ಲಿ ಬೇಕಂತಲೇ ನಮಾಜ್ ಮಾಡುತ್ತಿರುವುದು ದೊಡ್ಡ ತಪ್ಪು ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್

ನವದೆಹಲಿ – ಜ್ಞಾನವಾಪಿ ಪ್ರದೇಶದಲ್ಲಿ 2022ರ ಮೇ 16ರಂದು ಶಿವಲಿಂಗ ಕಂಡು ಬಂದಿದೆ. ಜ್ಞಾನವಾಪಿ ಪ್ರದೇಶವು ಹಿಂದೂಗಳ ಸ್ಥಳವಾಗಿದೆಯೆಂದು ಕೂಗಿ ಹೇಳುತ್ತಿದೆ. ಜ್ಞಾನವಾಪಿ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ನಮಾಜ್ ಮಾಡಲಾಗುತ್ತಿರುವುದು ದೊಡ್ಡ ತಪ್ಪಾಗಿದೆ. ಅಲ್ಲಿ ಹಿಂದೂಗಳ ಆರಾಧ್ಯ ದೇವ ಮಹಾದೇವನ ಸ್ಥಾನವಾಗಿದೆ. ಇದು ಹಿಂದೂಗಳ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ನಮಗೆ ನ್ಯಾಯವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಈ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಲಿದೆಯೆಂದು ನಾವು ಆಶಿಸುತ್ತೇವೆ ಎಂದು ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪರ ಹೋರಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಹೇಳಿದರು.

ವಿಷ್ಣು ಶಂಕರ್ ಜೈನ್ ಹೇಳಿದ್ದು:

1. ‘ಜ್ಞಾನವಾಪಿಯು ಸಾಕ್ಷಾತ್ ಶ್ರೀ ವಿಶ್ವನಾಥನ ನಿವಾಸಸ್ಥಾನವಾಗಿದೆ. ಹೀಗಿರುವಾಗ ಜ್ಞಾನವಾಪಿಯನ್ನು ‘ಮಸೀದಿ’ ಎಂದು ಕರೆಯುವುದು ದುರದೃಷ್ಟಕರ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಅವರ ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ.

2. ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಪ್ರದೇಶದಲ್ಲಿ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಈ ಅರ್ಜಿಯನ್ನು ಉಚ್ಚ ನ್ಯಾಯಾಲಯ ಅಂಗೀಕರಿಸಿದೆ. ಉಚ್ಚ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ಪ್ರಶ್ನಿಸಲಾಗಿತ್ತು.

3. ಶ್ರೀ ಕೃಷ್ಣ ಜನ್ಮಭೂಮಿಯ ಸಮೀಕ್ಷೆ ನಡೆಸಿದಾಗ, ಅಲ್ಲಿ ಈದ್ಗಾ ಮಸೀದಿ ಇರಲಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ನಮ್ಮ ದೇವಸ್ಥಾನಗಳ ಜಾಗವನ್ನು ಆಕ್ರಮಿಸಿ ಅಲ್ಲಿ ಮಸೀದಿ ಮಾಡುವ ಪ್ರಯತ್ನ ಮಾಡಲಾಗಿದೆ.

ವಕ್ಫ್ ವಶಪಡಿಸಿಕೊಂಡಿರುವ ಭೂಮಿಗಳ ತನಿಖೆಯಾಗಬೇಕು! – ವಿಷ್ಣು ಶಂಕರ್ ಜೈನ್

ವಕ್ಫ್ ಭೂಮಿ ಎಂದು ಕಬಳಿಸಿದ ಭೂಮಿಯನ್ನು ವಾಪಸ್ ಪಡೆಯುವ ಪ್ರಕ್ರಿಯೆ ತುಂಬಾ ಕಷ್ಟಕರವಾಗಿದೆ. ಇಂತಹ ಪ್ರಕರಣಗಳಲ್ಲಿ ತನಿಖೆಗೆ ಆದೇಶಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಯಾರ ಆದೇಶದಂತೆ ಕೆಲಸ ಮಾಡುತ್ತಾರೆ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ವಕ್ಫ್ ಮಂಡಳಿಯ ಬಳಿಯ ಸಂಪತ್ತಿನ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಮಟ್ಟದಲ್ಲಿ ಆಯೋಗವನ್ನು ಸ್ಥಾಪಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ವಕ್ಫ್ ಬೋರ್ಡ್ ಅಪಾರ ಪ್ರಮಾಣದ ಭೂಮಿಯನ್ನು ಕಬಳಿಸಿದೆ. ಈ ಭೂಮಿಯನ್ನು ಅವರ ಮಾಲೀಕರಿಗೆ ಹಿಂತಿರುಗಿಸುವುದು ಆವಶ್ಯಕವಾಗಿದೆ ಎಂದು ಜೈನ್ ಹೇಳಿದರು.