Yogi Adityanath Statement : ಭಾರತಕ್ಕೆ ಶ್ರೀ ಕೃಷ್ಣನ ‘ಮುರಳಿ’ ಅಲ್ಲ, ‘ಸುದರ್ಶನ ಚಕ್ರ’ ಕೂಡ ಅಗತ್ಯವಿದೆ ! – ಯೋಗಿ ಆದಿತ್ಯನಾಥ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಅಗರ್ತಲಾ (ತ್ರಿಪುರ) – ಇಂದು ಭಾರತಕ್ಕೆ ಭಗವಾನ್ ಕೃಷ್ಣನ ‘ಮುರಳಿ’ ಮಾತ್ರವಲ್ಲ, ಭದ್ರತೆಗಾಗಿ ‘ಸುದರ್ಶನ’ ಚಕ್ರದ ಕೂಡ ಅಗತ್ಯವಿದೆ. ಪಾಕಿಸ್ತಾನ ಮಾನವೀಯತೆಯ ಕ್ಯಾನ್ಸರ್ ಆಗಿದೆ. ಅದರ ವಿರುದ್ಧ ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲು ವಿಶ್ವದ ಶಕ್ತಿಗಳು ಒಗ್ಗೂಡಬೇಕಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅವರು ರಾಜಧಾನಿ ಅಗರ್ತಲಾ ಸಮೀಪದ ಮೋಹನಪುರ ಗ್ರಾಮದಲ್ಲಿ ಸಿದ್ಧೇಶ್ವರಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಶ್ರೇಷ್ಠ ಸಂತರಾದ ಸ್ವಾಮಿ ಚಿತ್ತರಂಜನ್ ಮಹಾರಾಜ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ, ತ್ರಿಪುರಾದ ಶಾಹಿ ಮನೆತನದ ಮುಖ್ಯಸ್ಥ ಬುಬಾಗರ ಪ್ರದ್ಯೋತ್ ವಿಕ್ರಮ್ ಮಾಣಿಕ್ಯ ಕೂಡ ಉಪಸ್ಥಿತರಿದ್ದರು.

ಯೋಗಿ ಆದಿತ್ಯನಾಥ ಮಂಡಿಸಿದ ಪ್ರಮುಖ ಅಂಶಗಳು !

1. ಉತ್ತರ ಪ್ರದೇಶದ ಅಯೋಧ್ಯೆ, ಮಥುರಾ ಮತ್ತು ಕಾಶಿ ಈ ಮೂರು ದೇವಾಲಯಗಳು ಸನಾತನ ಹಿಂದೂ ಧರ್ಮದ ಪ್ರಮುಖ ಸ್ತಂಭಗಳಾಗಿವೆ. ಅವು ನಮಗೆ ಬಹಳ ಅಮೂಲ್ಯವಾಗಿವೆ.

2. ಉತ್ತರ ಪ್ರದೇಶದಲ್ಲಿ ‘ಡಬಲ್ ಇಂಜಿನ್’ ಸರಕಾರ (ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ) ಬಂದಿದೆ. ಹಾಗಾಗಿಯೇ ರಾಜ್ಯದಲ್ಲಿ ಸುರಕ್ಷಿತ ವಾತಾವರಣವಿದೆ. ಗಲಭೆಕೋರರನ್ನು ನಿಗ್ರಹಿಸಲು ಬುಲ್ಡೋಜರ್‌ಗಳನ್ನು ಬಳಸಲಾಯಿತು ಮತ್ತು ಅದೇ ವೇಳೆ ಭಕ್ತರಿಗಾಗಿ ಶ್ರೀರಾಮ ಮಂದಿರವನ್ನು ಸಹ ನಿರ್ಮಿಸಲಾಯಿತು.

3. ಯಾರು ಸಮರ್ಥರಾಗಿರುತ್ತಾರೋ ಮತ್ತು ಶತ್ರುಗಳಿಗೆ ತಮ್ಮ ಬಲದ ಅರಿವು ಮಾಡಿಸಿಕೊಡುತ್ತಾರೋ ಅವರು ಯಾವಾಗಲೂ ಸುರಕ್ಷಿತವಾಗಿರುತ್ತಾರೆ.

4. ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ದೇಶ ವಿಭಜನೆಯನ್ನು ಒಪ್ಪಿಕೊಂಡಿತು.

5. ಭಾಜಪ ಸರಕಾರವು ‘ಅಭಿವೃದ್ಧಿ ಮತ್ತು ಪರಂಪರೆ’ ಅಭಿಯಾನವನ್ನು ನಿರಂತರವಾಗಿ ಮುನ್ನಡೆಸುತ್ತಿದೆ. ಶ್ರೀ ಅಯೋಧ್ಯಾ ಧಾಮದಲ್ಲಿ ಭಗವಾನ್ ಶ್ರೀರಾಮನ ದೇವಾಲಯದ ನಿರ್ಮಾಣವಾಗಲಿ ಅಥವಾ ತ್ರಿಪುರಾದ ಮಾ ತ್ರಿಪುರಸುಂದರಿಯ ದೇವಾಲಯದ ಸೌಂದರ್ಯೀಕರಣ ಮತ್ತು ಪುನರುಜ್ಜೀವನದ ಕೆಲಸವಾಗಲಿ, ಇವೆಲ್ಲವೂ ನಮ್ಮ ಅಭಿಯಾನದ ಜೀವಂತ ಉದಾಹರಣೆಗಳಾಗಿವೆ ಎಂದು ಹೇಳಿದರು.