ಪಾಕಿಸ್ತಾನ: ಅಪ್ರಾಪ್ತ ಹಿಂದೂ ಬಾಲಕಿಯ ಅಪಹರಣ; ಬಲವಂತದ ಮತಾಂತರ; ಹಿರಿ ವಯಸ್ಸಿನ ವ್ಯಕ್ತಿಯೊಂದಿಗೆ ಮದುವೆ!

ಕರಾಚಿ (ಪಾಕಿಸ್ತಾನ) – ನೆರೆ ರಾಜ್ಯದ ಸಿಂಧ್ ಪ್ರಾಂತ್ಯದಲ್ಲಿ ಓರ್ವ 16 ವರ್ಷದ ಹಿಂದೂ ಯುವತಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ. ಸಂತ್ರಸ್ತ ಬಾಲಕಿಯ ಕುಟುಂಬ ಮತಾಂತರ ತಡೆಯಲು ಮದರಸಾ ತಲುಪಿದಾಗ ಅವರನ್ನು ಅಲ್ಲಿಂದ ಗದರಿಸಿ ಓಡಿಸಲಾಯಿತು.

ಈ ಕುರಿತ ಬಂದ ವರದಿಯ ಪ್ರಕಾರ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹುಂಗೂರು ಗ್ರಾಮದಿಂದ ಸೆಪ್ಟೆಂಬರ್ 11 ರಂದು ಅಪ್ರಾಪ್ತ ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಲಾಗಿತ್ತು. ಸಂತ್ರಸ್ತ ಬಾಲಕಿಯ ಕುಟುಂಬದವರು ಆಕೆಯನ್ನು ಹುಡುಕಲು ಆರಂಭಿಸಿದಾಗ ಅವರಿಗೆ ತಮ್ಮ ಮಗಳನ್ನು ಅವಳಿಗಿಂತ ಅತಿ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಂದಿಗೆ ತರಾತುರಿಯಲ್ಲಿ ವಿವಾಹ ಮಾಡಿದ್ದಾರೆ ಎಂದು ತಿಳಿಯಿತು. ಸೆಪ್ಟೆಂಬರ್ 12 ರಂದು ಸಂತ್ರಸ್ತ ಬಾಲಕಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಮದರಸಾಕ್ಕೆ ಕರೆತರಲಿರುವುದಾಗಿ ಆಕೆಯ ಕುಟುಂಬಕ್ಕೆ ತಿಳಿಯಿತು. ತಮ್ಮ ಮಗಳನ್ನು ಉಳಿಸಲು ಕುಟುಂಬದವರು ಮದರಸಾವನ್ನು ತಲುಪಿದರು; ಆದರೆ ಇಸ್ಲಾಮಿಕ್ ಮೂಲಭೂತವಾದಿಗಳು ಅವರನ್ನು ಅಲ್ಲಿಂದ ಓಡಿಸಿದರು.

ಪಾಕಿಸ್ತಾನ ಇತ್ತೆಹಾದ್ ಸಂಘಟನೆಯ ಮುಖ್ಯಸ್ಥ ಶಿವ ಫಕೀರ್ ಕಾಚಿ ಅವರು ಈ ಬಗ್ಗೆ ಮಾತನಾಡಿ ಹಿಂದೂ ಹೆಣ್ಣುಮಕ್ಕಳೊಂದಿಗೆ ಇಂತಹ ಗಂಭೀರ ಘಟನೆಗಳು ನಡೆಯುವುದು ಈಗ ಅಲ್ಲಿ ಸಾಮಾನ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಬಡ ಹಿಂದೂಗಳನ್ನು ಜಿಹಾದಿಗಳು ಗುರಿಯಾಗಿಸುತ್ತಿದ್ದಾರೆ

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತರು! ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುವ ದಬ್ಬಾಳಿಕೆಯನ್ನು ತಡೆಯಲು ಭಾರತ ಸರಕಾರವು ಪಾಕಿಸ್ತಾನದ ಮೇಲೆ ಯಾವಾಗ ಒತ್ತಡ ಹೇರುವುದು?