|
ಬೀದರ್ – ಸೆಪ್ಟೆಂಬರ್ 11 ರ ರಾತ್ರಿ ಇಲ್ಲಿ ನಡೆದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪೊಲೀಸರು ಹಿಂದೂಗಳನ್ನು ಧ್ವನಿವರ್ಧಕವನ್ನು ನಿಲ್ಲಿಸುವಂತೆ ಅನಿವಾರ್ಯಗೊಳಿಸಿದರು. ಪೊಲೀಸರ ಈ ನಿರ್ಧಾರವನ್ನು ವಿರೋಧಿಸಿ ಗಣೇಶ ಮಂಡಳದ ಕಾರ್ಯಕರ್ತರು ಗಣೇಶ ಮೂರ್ತಿಗಳ ಮೆರವಣಿಗೆ ನಿಲ್ಲಿಸಿ ಮಧ್ಯರಾತ್ರಿ ರಸ್ತೆಯಲ್ಲಿ ಧರಣಿ ಕುಳಿತರು. ಈ ವೇಳೆ ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಲಾಯಿತು. ಅದರ ನಂತರ ಹಿಂದೂಗಳು ‘ಜೈ ಶ್ರೀ ರಾಮ್’ ಎಂದು ಘೋಷನೆ ಕೂಗುತ್ತಾ ಶ್ರೀರಾಮನ ಭಜನೆಗಳನ್ನು ಹಾಡಲು ಪ್ರಾರಂಭಿಸಿದರು. ಪರಿಸ್ಥಿತಿಯನ್ನು ಗಮನಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದರು, ಆದರೆ ಎಲ್ಲಾ ಚರ್ಚೆಗಳು ವ್ಯರ್ಥವಾಯಿತು.
ಉದ್ಧಟತನದ ನಿಲುವು ತಳೆದ ಪೊಲೀಸರು ರಾತ್ರಿ 3 ಗಂಟೆವರೆಗೂ ಸೌಂಡ್ ಸಿಸ್ಟಂ ಅನ್ನು ಶುರು ಮಾಡಲು ಹಿಂದೂಗಳಿಗೆ ಅವಕಾಶ ನೀಡಲಿಲ್ಲ. ಇದಾದ ನಂತರ ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಯಿತು. ಈ ವೇಳೆ ಗಣೇಶ ಮಂಡಲಗಳ ಸೌಂಡ್ ಸಿಸ್ಟಂ ಸ್ಥಳದಿಂದ ಸ್ಥಳಾಂತರಿಸಿ ಮೂರ್ತಿ ವಿಸರ್ಜನಕ್ಕೆ ಸಿದ್ಧತೆ ನಡೆಸಬೇಕು ಎಂದು ಪೊಲೀಸರು ಸೂಚಿಸಿದರು. ಇದರಿಂದ ಅಸಮಾಧಾನಗೊಂಡ ಗಣೇಶ ಮಂಡಳದ ಕಾರ್ಯಕರ್ತರು ಅಲ್ಲಿಂದ ತೆರಳಲು ಮುಂದಾದರು. ಮುಂಜಾನೆ 4 ಗಂಟೆಗೆ ವಾತಾವರಣ ಶಾಂತವಾಯಿತು.
ಸಂಪಾದಕೀಯ ನಿಲಿವುಮಧ್ಯರಾತ್ರಿ ಸೌಂಡ್ ಸಿಸ್ಟಂ ಬಂದ್ ಮಾಡುವ ಕರ್ನಾಟಕ ಪೊಲೀಸರು ಪ್ರತಿದಿನ ಮುಂಜಾನೆ 5 ಗಂಟೆಗೆ ರಣಕರ್ಕಷವಾಗಿರುವ ಅಜಾನ್ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ? ಕರ್ನಾಟಕದ ರಜಾಕಾರಿ ಪೋಲೀಸರನ್ನು ಎಷ್ಟೇ ಖಂಡಿಸಿದರೂ ಕಡಿಮೆಯೇ ! |