Bangladesh Hindus Attack: ಬಾಂಗ್ಲಾದೇಶದಲ್ಲಿ ಆಗಸ್ಟ 5 ರಿಂದ 20 ಈ ಕಾಲಾವಧಿಯಲ್ಲಿ ಹಿಂದೂಗಳ ಸಾವಿರಾರು ಸ್ಥಳಗಳ ಮೇಲೆ ದಾಳಿ!

ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ‘ಪ್ರಥಮ್ ಅಲೋ’ ಬಹಿರಂಗ

ಢಾಕಾ (ಬಾಂಗ್ಲಾದೇಶ) – ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಆಗಸ್ಟ್ 5 ರಂದು ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದರು. ಅದರ ನಂತರ ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ ಕನಿಷ್ಠ 50 ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ ದೊಡ್ಡ ಪ್ರಮಾಣದ ದಾಳಿಗಳು ನಡೆದವು. ಹಲವು ವಿದೇಶಿ ಮತ್ತು ಕಮ್ಯುನಿಸ್ಟ್ ಮಾಧ್ಯಮಗಳು ಹಿಂದೂಗಳನ್ನು ಗುರಿ ಮಾಡಿಲ್ಲ ಎಂದು ಹೇಳುತ್ತಿರುವಾಗಲೇ ಇದೀಗ ‘ಪ್ರಥಮ್ ಅಲೋ’ ಎಂಬ ಬಂಗಾಳಿ ದೈನಿಕ ಈ ಕುರಿತ ಅಂಕಿ-ಅಂಶಗಳನ್ನು ಮಂಡಿಸಿದೆ. ಆಗಸ್ಟ್ 5 ರಿಂದ 20ರ ಈ ಹದಿನೈದು ದಿನಗಳಲ್ಲಿ, ಮುಸ್ಲಿಮರು ಹಿಂದೂಗಳ ದೇವಸ್ಥಾನಗಳು, ಮನೆಗಳು ಅಥವಾ ಅಂಗಡಿಗಳಂತಹ ಒಟ್ಟು 1,068 ಸ್ಥಳಗಳ ಮೇಲೆ ದಾಳಿ ನಡೆಸಿದರು. ಕಟ್ಟಡಗಳ ವಿಧ್ವಂಸ, ಲೂಟಿ, ದೇವತೆಗಳ ವಿಡಂಬನೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ಈ ದಾಳಿಗಳನ್ನು ನಡೆಸಲಾಯಿತು ಎಂದು ಈ ಪತ್ರಿಕೆ ಹೇಳಿದೆ.

1.ಈ ವರದಿಯಲ್ಲಿ ಜಿಲ್ಲಾವಾರು ಅಂಕಿಅಂಶಗಳನ್ನು ನೀಡಲಾಗಿದೆ. ಸದ್ಯ ಬಾಂಗ್ಲಾದೇಶದ ಹಲವು ಜಿಲ್ಲೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಇದ್ದರೂ ನಾವು ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ನಮ್ಮ ಓದುಗರ ಮುಂದಿಡುತ್ತಿದ್ದೇವೆ ಎಂದು ದಿನಪತ್ರಿಕೆ ಹೇಳಿದೆ. ನಾವು ದೇಶದಾದ್ಯಂತ ನಡೆದ ಪ್ರತಿಯೊಂದು ಘಟನೆಯನ್ನು ಪರಿಶೀಲಿಸಿದ ನಂತರವೇ ಈ ಅಂಕಿ-ಅಂಶಗಳನ್ನು ಮಂಡಿಸಿದ್ದೇವೆ ಎಂದು ಹೇಳಿದೆ.

2. ಈ ಹಿಂದೆ ಸುಮಾರು 300ರಷ್ಟು ದಾಳಿಗಳು ನಡೆದಿದ್ದವು ಎಂದು ಹೇಳಲಾಗಿತ್ತು. ಆದರೆ ಈಗ ದಾಳಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿವೆ ಎಂದು ಈ ಸುದ್ದಿಯಿಂದ ತಿಳಿದುಬಂದಿದೆ.

ಸುದ್ದಿಯಲ್ಲಿ 42 ಜಿಲ್ಲೆಗಳಲ್ಲಿ ನಡೆದ ದಾಳಿಯ ಪ್ರಸ್ತಾಪ!

ರಾಜಶಾಹಿ, ಖುಲನಾ, ಬಾರಿಸಾಲ್, ರಂಗಪುರ್, ಸಿಲ್ಹೆಟ್, ಮೈಮೆನ್‌ಸಿಂಗ್, ನಾಗಾಂವ್, ಚಪಾಯಿನವಾಬ್‌ಗಂಜ್, ಪಟುವಾಖಾಲಿ, ನೊವಾಖಾಲಿ, ಪಂಚಗಡ್, ಬರ್ಗುನಾ, ಠಾಕುರ್‌ಗಾಂವ್, ಪಿರೋಜ್‌ಪುರ್, ದಿನಾಜ್‌ಪುರ, ಝೆನಾಯಿದಾ, ಝಾಲಾಕಾಠಿ, ಕೊಮಿಲಾ, ನಿಲಫಾಮರಿ, ಮೆಹೆರಪುರ,ಫರೀದಪೂರ, ಚಾಂದಪೂರ, ಲಾಲಮೊನಿರಹಾಟ, ಚುಆಡಾಂಗಾ, ರಾಜಬಾರಿ, ಮೌಲ್ವಿಬಜಾರ್, ಗಾಯಬಾಂಧಾ, ಜೆಸ್ಸೋರ್, ಟಂಗೈಲ್, ಜೋಯ್‌ಪುರಹಾಟ, ಮಗೂರಾ, ಸಾತಖಿಡಾ, ಕಿಶೋರ್‌ಗಂಜ್,ಬೋಗರಾ,ಮಾಣಿಕಗಂಜ,ಜಮಾಲಪೂರ,ಸಿರಾಜಗಂಜ, ಮುಂಶಿಗಂಜ, ಶೇರಪೂರ,ಬಾಗೆರಹಾಟ, ನರಸಿಂಗಡಿ ಮತ್ತು ನಾರಾಯಣಗಂಜ ಈ 42 ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿದೆ ಎಂದು ಈ ವರದಿ ಹೇಳಿದೆ.

ಸಂಪಾದಕೀಯ ನಿಲುವು

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದೇ ಇಲ್ಲ’ ಎಂದು ಕೂಗಾಡುವ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಇತರ ಜಾತ್ಯಾತೀತ ಪಕ್ಷಗಳು ಈ ಬಗ್ಗೆ ಏನು ಹೇಳಲು ಬಯಸುತ್ತವೆ? ಈ ಹಿಂದೂ ದ್ವೇಷಿ ಪಕ್ಷಗಳನ್ನು ಈಗ ರಾಜಕೀಯವಾಗಿ ನಿರ್ನಾಮ ಮಾಡಬೇಕು, ಇಲ್ಲವಾದರೆ ಹಿಂದೂಗಳ ಸರ್ವನಾಶ ದೂರವಿಲ್ಲ!