ಬ್ರಿಟನ್‌ನಲ್ಲಿ 16 ವರ್ಷಗಳ ಕಾಲಾವಧಿಯಲ್ಲಿ 1 ಸಾವಿರದ 400 ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ

  • ಕಾಮುಕರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಮೂಲದ ಮುಸ್ಲಿಮರು

  • ಇದುವರೆಗೆ 37 ಜನರು ಅಪರಾಧಿಗಳು

ಲಂಡನ್ – ಸಧ್ಯ ಬ್ರಿಟನ್‌ನ ರೋದರ್‌ಹ್ಯಾಮ್ ನಗರದಲ್ಲಿ 20 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಇದರ ಅಡಿಯಲ್ಲಿ 20 ವರ್ಷಗಳ ಹಿಂದೆ 14 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 42 ವರ್ಷದ ವಲೀದ್ ಅಲಿ ಎಂಬಾತನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

1. ಬ್ರಿಟನ್ನಿನ ಈ ತನಿಖಾ ದಳದ ಪ್ರಕಾರ, ವಲೀದ್ ಅಲಿ 2003 ಮತ್ತು 2004 ರ ನಡುವೆ ರೋದರ್‌ಹ್ಯಾಮ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ಬರ್ಬರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು.

2. ಈ ಭಿಕರ ಘಟನೆಯ ನಂತರ, ಸಂತ್ರಸ್ತೆ ಸುಮಾರು 20 ವರ್ಷಗಳ ಕಾಲ ತನ್ನ ಮೇಲೆ ಆಗಿರುವ ಆಘಾತವನ್ನು ಮುಚ್ಚಿಟ್ಟಿದ್ದಳು. ಆದಾಗ್ಯೂ, 2021 ರಲ್ಲಿ, ಅವಳು ‘ಆಪರೇಷನ್ ಸ್ಟವ್‌ವುಡ್’ ತಂಡದ ಮುಂದೆ ತನ್ನ ಮೇಲಾಗಿದ್ದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದಳು.

3. ಸೆಪ್ಟೆಂಬರ್ 11 ಮತ್ತು 12 ರಂದು, ಶೆಫೀಲ್ಡ್ ಕ್ರೌನ್ ನ್ಯಾಯಾಲಯವು ಆಪರೇಷನ್ ಸ್ಟೊವುಡ್ ಅಡಿಯಲ್ಲಿ 7 ಜನರನ್ನು ಅಪರಾಧಿ ಎಂದು ಘೋಷಿಸಿದೆ. ಈ ಕಾಮುಕರು 20 ವರ್ಷಗಳ ಹಿಂದೆ 11 ರಿಂದ 15 ವರ್ಷ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ತನಿಖೆಗೆ ‘ಆಪರೇಷನ್ ಸ್ಟೋವ್ ವುಡ್’

1997 ರಿಂದ 2013 ರವರೆಗಿನ 16 ವರ್ಷಗಳ ಅವಧಿಯಲ್ಲಿ, ರೋದರ್‌ಹ್ಯಾಮ್‌ನಲ್ಲಿ ಸರಿಸುಮಾರು 1 ಸಾವಿರದ 400 ಹುಡುಗಿಯರ ಲೈಂಗಿಕ ದೌರ್ಜನ್ಯ ಹಾಗೆಯೇ ಅವರನ್ನು ಕಳ್ಳಸಾಗಣೆ ಮಾಡಿದ್ದರು ಮತ್ತು ಕೆಲವರ ಹತ್ಯೆ ಮಾಡಿದ್ದರು. ಈ ಪ್ರಕರಣದ ಬಗ್ಗೆ ಅಲೆಕ್ಸಿಸ್ ಜೆ ಅವರ ಅಧ್ಯಕ್ಷತೆಯಲ್ಲಿ ಸ್ವತಂತ್ರ ತನಿಖೆಯನ್ನು ನಡೆಸಲಾಯಿತು. ಈ ಪ್ರಕರಣದಲ್ಲಿ ಇದುವರೆಗೆ 37 ಮಂದಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಇದರಲ್ಲಿ ಮುಖ್ಯವಾಗಿ ಪಾಕಿಸ್ತಾನಿ ಮೂಲದ ಮುಸ್ಲಿಮರಿದ್ದಾರೆ. ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಪ್ರಕರಣಗಳ ತನಿಖೆಗಾಗಿ ಪೊಲೀಸ್ ಪಡೆ ‘ಆಪರೇಷನ್ ಸ್ಟೋವ್‌ವುಡ್’ ಚಳುವಳಿಯನ್ನು ಪ್ರಾರಂಭಿಸಿದೆ.

ಸಂಪಾದಕೀಯ ನಿಲುವು

ಈಗ ಯುರೋಪಿಯನ್ ದೇಶಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಕಾಮುಕ ಮುಸ್ಲಿಮರ ಬಲಿಪಶುಗಳಾಗುತ್ತಿದ್ದಾರೆ ಎಂಬುದನ್ನು ಗಮನಿಸಿರಿ !