ಆರೋಪಿಯ ವಿರೋಧದ ‘ಕೊಕಾ’ವನ್ನು ರದ್ದು ಪಡಿಸಿದ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು !

ಗೌರಿ ಲಂಕೇಶ ಹತ್ಯೆ ಪ್ರಕರಣ

ನವ ದೆಹಲಿ – ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ೬ ನೇ ಆರೋಪಿ ಮೊಹನ ನಾಯಕ್ ಇವರ ಮೇಲಿನ ‘ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜ್ಡ್ ಕ್ರೈಮ್ ಆಕ್ಟ'(ಕೊಕಾ) ಅಡಿಯಲ್ಲಿನ ಅಪರಾಧವನ್ನು ರದ್ದುಪಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು. ಅದಕ್ಕೆ ಗೌರಿ ಲಂಕೇಶ ಅವರ ಸಹೋದರಿ ಕವಿತಾ ಲಂಕೇಶ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.