ಸರಕಾರದ ‘ಎಥಿಕ್ಸ್ ಕಮಿಟಿ’ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿಗೆ ನ್ಯಾಯಾಲಯದ ನೊಟೀಸು!
ಪ್ರಯಾಗರಾಜ(ಉತ್ತರಪ್ರದೇಶ)– ಅಲಹಾಬಾದ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಅರುಣ ಕುಮಾರ ಗುಪ್ತಾ ಇವರು ಒಂದು ಸಂಶೋಧನೆಯ ಆಧಾರದಲ್ಲಿ ‘ಗಂಗಾಜಲದಿಂದ ಕೊರೊನಾ ಮೇಲೆ ಉಪಚಾರ ಮಾಡಲು ಸಾಧ್ಯವಿದೆ’, ಎಂದು ವಾದವನ್ನು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ನ್ಯಾಯಾಲಯವು ಅದನ್ನು ವಿಚಾರಣೆಗೆ ಸ್ವೀಕರಿಸಿದೆ. ಈ ದೂರಿನಲ್ಲಿ ‘ಕೊರೊನಾ ಮೇಲೆ ಉಪಚಾರ ನಡೆಸಲು ಗಂಗಾಜಲವನ್ನು ಉಪಯೋಗಿಸಲು ಮಾನ್ಯತೆ ನೀಡಬೇಕು’, ಎಂದು ಮನವಿಯನ್ನು ಸಲ್ಲಿಸಲಾಗಿದೆ. ಈ ದೂರಿನ ಮೇಲೆ ಜರುಗಿದ ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಕೇಂದ್ರ ಸರಕಾರದ ‘ಎಥಿಕ್ಸ್ ಕಮಿಟಿ’ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿಗೆ ನೊಟೀಸು ಕಳುಹಿಸಿದ್ದು, ಇದರ ಬಗ್ಗೆ ಮುಂದಿನ ೬ ವಾರಗಳಲ್ಲಿ ಉತ್ತರಿಸುವಂತೆ ಆದೇಶಿಸಿದೆ. ಸಂಶೋಧನೆ ನಡೆಸುವ ಗುಂಪಿನವರ ಹೇಳಿಕೆಯಂತೆ, ಗಂಗಾಜಲವನ್ನು ಮೂಗಿನ ಮೂಲಕ ಹಾಕಿದರೆ ಅದು ಸಂಪೂರ್ಣ ಶರೀರದಲ್ಲಿ ಹರಡುತ್ತದೆ ಮತ್ತು ಶ್ವಾಸಮಾರ್ಗದಲ್ಲಿ ಅಡಗಿರುವ ವಿಷಾಣುವನ್ನು ನಾಶಪಡಿಸುತ್ತದೆ.
೧. ನ್ಯಾಯವಾದಿ ಅರುಣಕುಮಾರ ಗುಪ್ತಾ ಕೊರೊನಾದ ಮೊದಲ ಅಲೆಯ ಸಮಯದಲ್ಲಿ ಎಪ್ರಿಲ್ ೨೦೨೦ ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದರಿಗೆ ಗಂಗಾಜಲದಿಂದ ಕೊರೊನಾ ಮೇಲಾಗುವ ಪರಿಣಾಮದ ವಿಷಯದ ಸಂಶೋಧನೆಯನ್ನು ಕಳುಹಿಸಿದ್ದರು. ಅಲ್ಲದೇ ‘ಗಂಗಾಜಲದಲ್ಲಿರುವ ಔಷಧೀಯ ಗುಣಗಳ ಸಂಶೋಧನೆಯನ್ನು ನಡೆಸಲು ಪ್ರಯತ್ನಿಸಬೇಕಾಗಿದೆ’, ಎಂದು ತಿಳಿಸಿದ್ದರು. ಈ ಸಂಶೋಧನೆಯನ್ನು ಆ ಸಮಯದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿಗೂ ಕಳುಹಿಸಲಾಗಿತ್ತು; ಆದರೆ ಅದು ‘ಇದರಲ್ಲಿ ಯಾವುದೇ ವಿಜ್ಞಾನವಿಲ್ಲ’ ಎಂದು ತಿಳಿಸಿ ಸಂಶೋಧನೆಯನ್ನು ತಿರಸ್ಕರಿಸಿತ್ತು. ಈ ಸಂಶೋಧನೆಯನ್ನು ತಿರಸ್ಕರಿಸಿದ ಬಳಿಕ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ೫ ಹಿರಿಯ ಡಾಕ್ಟರರ ಗುಂಪಿಗೆ ಇದರ ಮೇಲೆ ಪುನಃ ಸಂಶೋಧನೆ ನಡೆಸುವಂತೆ ತಿಳಿಸಲಾಯಿತು. ಈ ಸಂಶೋಧನೆಯ ವರದಿಯನ್ನು ಅಂತರರಾಷ್ಟ್ರೀಯ ಜರ್ನಲ್‍ನಲ್ಲಿ ಸಪ್ಟೆಂಬರ ೨೦೨೦ ರಲ್ಲಿ ಪ್ರಕಟಿಸಲಾಗಿದೆ.
೨. ನ್ಯಾಯವಾದಿ ಅರುಣ ಗುಪ್ತಾ ಮಾತನಾಡುತ್ತಾ ‘ಬ್ಯಾಕ್ಟೀರಿಯೋಫೇಜ್’ (ಬ್ಯಾಕ್ಟೀರಿಯಾ ಭಕ್ಷಿಸುವ) ಇವುಗಳ ಮಾಧ್ಯಮದಿಂದ ಕೊರೊನಾ ಸೋಂಕನ್ನು ಎರಡು ಪದ್ಧತಿಗಳಿಂದ ಉಪಚರಿಸಬಹುದಾಗಿದೆ. ಕೊರೊನಾ ಮೂಗಿನ ಮೂಲಕ ಆಕ್ರಮಣ ನಡೆಸುತ್ತದೆ. ಗಂಗೋತ್ರಿಯ ಮುಂದಿನ ೨೦ ಕಿ.ಮಿ. ಅಂತರದ ಗಂಗಾಜಲವನ್ನು ತರಲಾಗಿತ್ತು. ಆ ಗಂಗಾಜಲದ ‘ಕೋರೋನಾ ನೆಜಲ್ ಸ್ಪ್ರೇ’ ತಯಾರಿಸಿ ೬೦೦ ಜನರಿಗೆ ಮೂಗಿನ ಮೂಲಕ ನೀಡಲಾಯಿತು. ಅವರ ವರದಿ ನಕಾರಾತ್ಮಕ (ನೆಗಟ್ಹಿವ್) ಬಂದಿತು. ಹಾಗೆಯೇ ಯಾರಿಗೆ ನೀಡಲಾಗಿರಲಿಲ್ಲವೋ, ಅವರು ಕೊರೊನಾಬಾಧಿತರಾಗಿರುವುದು ಕಂಡು ಬಂದಿತ್ತು ಎಂದರು
೩. ನ್ಯಾಯವಾದಿ ಅರುಣ ಕುಮಾರ ಗುಪ್ತಾ ದೂರಿನ ಕುರಿತು ಮಾತನಾಡುತ್ತಾ, ಗಂಗಾಜಲ ಎಂದಿಗೂ ಹಾಳಾಗುವುದಿಲ್ಲ. ಇದು ನಮ್ಮ ಸಾವಿರಾರು ವರ್ಷಗಳ ಶ್ರದ್ಧೆಯಾಗಿದೆ. ಇದರಲ್ಲಿ ಎಂದಿಗೂ ವಿಷಾಣು ನಿರ್ಮಾಣವಾಗುವುದಿಲ್ಲ. ಗಂಗಾನದಿಯಲ್ಲಿ ೧ ಸಾವಿರ ೩೦೦ ವಿವಿಧ ರೀತಿಯ ‘ಬ್ಯಾಕ್ಟೀರಿಯೋಫೇಜ’ (ಬ್ಯಾಕ್ಟೀರಿಯಾ ಭಕ್ಷಿಸುವ) ಕಂಡು ಬಂದಿದೆ. ಈಗ ಹೊಸ ಸಂಶೋಧನೆಯಿಂದ ಗಂಗಾಜಲವು ಕೊರೊನಾ ಸೋಂಕಿನ ಮೇಲೆ ಉಪಚರಿಸಲು ಪರಿಣಾಮಕಾರಿಯಾಗಿದೆ. ಕೇವಲ ೩೦ ರೂಪಾಯಿಯಲ್ಲಿ ನೇಜಲ್ ಸ್ಪ್ರೇ ಸಿದ್ಧಪಡಿಸಬಹುದು ಮತ್ತು ತನ್ಮೂಲಕ ಕೊರೊನಾ ಪೀಡಿತರಿಗೆ ಉಪಚರಿಸಬಹುದು. ಹೀಗಿರುವಾಗ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಇದನ್ನು ಏಕೆ ತಿರಸ್ಕರಿಸುತ್ತಿದೆ? ಕೇಂದ್ರ ಸರಕಾರವು ಇದರ ಮೇಲೆ ಸ್ವತಃ ಸಂಶೋಧನೆಯನ್ನು ನಡೆಸಬೇಕಾಗಿದೆ ಎಂದರು.
೪. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಸಂಶೋಧನೆಯನ್ನು ತಿರಸ್ಕರಿಸುತ್ತಾ, ‘ನ್ಯಾಯವಾದಿ ಅರುಣ ಗುಪ್ತಾರವರ ಬಳಿ ‘ಕ್ಲಿನಿಕಲ್ ಡೇಟಾ’ ಇರಲಿಲ್ಲ, ಇದರಿಂದ ಅವರ ಸಂಶೋಧನೆಯನ್ನು ತಿರಸ್ಕರಿಸಲಾಗಿದೆ’. ಎಂದು ತಿಳಿಸಿದೆ. ತದನಂತರ `ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಡಾಕ್ಟರರ ಗುಂಪು ಸಂಶೋಧನೆಯನ್ನು ನಡೆಸಿದ ಬಳಿಕವೂ ಸರಕಾರವು ಯಾವುದೇ ಕ್ರಮ ಕೈಕೊಂಡಿಲ್ಲ. ಈ ಕಾರಣದಿಂದ ನಾನು ನ್ಯಾಯಾಲಯದ ಮೊರೆ ಹೋಗಬೇಕಾಯಿತು’ ಎಂದು ನ್ಯಾಯವಾದಿ ಗುಪ್ತಾ ಸ್ಪಷ್ಟ ಪಡಿಸಿದರು.
೫. ನ್ಯಾಯವಾದಿ ಗುಪ್ತಾರವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ‘ಎಥಿಕ್ಸ್ ಕಮಿಟಿ’ ಬಳಿ ಹೋದಾಗ ಅವರು ಗಂಗಾಜಲವನ್ನು ನೀಡುವುದು ‘ಅನ್ ಎಥಿಕಲ್’ (ಅನೈತಿಕ) ಆಗಿದೆ ಎಂದು ಹೇಳಿದರು. ಈ ಕುರಿತು ನ್ಯಾಯವಾದಿ ಗುಪ್ತಾ ಮಾತನಾಡುತ್ತಾ, ಅದು ಹೇಗೆ ‘ಅನ್ ಎಥಿಕಲ್’ ಆಗುವುದು? ಅನೇಕ ಯುಗಗಳಿಂದ ಗಂಗಾಜಲದಲ್ಲಿ ತಥ್ಯ ಮತ್ತು ಔಷಧೀಯ ಗುಣಗಳಿವೆ. ಅದರಲ್ಲಿ ವಿಷಾಣುಗಳನ್ನು ಕೊಲ್ಲುವ ಕ್ಷಮತೆಯಿದೆ; ಹೀಗಿರುವಾಗ ಇದರ ಮೇಲೆ ಸಂಶೋಧನೆ ಮಾಡುವುದರ ಬದಲಾಗಿ ಮಾಡಿರುವ ಸಂಶೋಧನೆಯನ್ನು ಏಕೆ ತಿರಸ್ಕರಿಸಲಾಗುತ್ತದೆ? ಎಂದು ಕೇಳಿದರು.
ವರ್ಷ ೧೮೯೬ ರಲ್ಲಿ ಕೈಕೊಂಡ ಸಂಶೋಧನೆ!
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕ ವಿಜಯ ನಾಥ ಮಿಶ್ರಾ ಇವರು ಮಾತನಾಡುತ್ತಾ, ವರ್ಷ ೧೮೯೬ ರಲ್ಲಿ ಕಾಲರಾ ಮಹಾಮಾರಿಯ ಸಮಯದಲ್ಲಿ ಡಾ. ಹ್ಯಾಕಿಂಗ ಇವರು ಒಂದು ಸಂಶೋಧನೆಯನ್ನು ನಡೆಸಿದ್ದರು. ಅದರಲ್ಲಿ ಗಂಗಾನದಿಯ ನೀರನ್ನು ಕುಡಿಯುವ ಜನರಿಗೆ ಕಾಲರಾ ಬರುವುದಿಲ್ಲ ಎಂದು ಕಂಡು ಬಂದಿತ್ತು. ಈ ಸಂಶೋಧನೆಯ ಬಗ್ಗೆ ಬಹಳಷ್ಟು ವರ್ಷಗಳ ವರೆಗೆ ಯಾರೂ ಗಮನ ಹರಿಸಿರಲಿಲ್ಲ. ವರ್ಷ ೧೯೮೦ ರಲ್ಲಿ ಎಲ್ಲ ನದಿಗಳಲ್ಲಿ ಬ್ಯಾಕ್ಟೀರಿಯೋಫೇಜ್ ಇರುತ್ತವೆ. ಗಂಗಾನದಿಯ ನೀರಿಯಲ್ಲಿ ಇಂತಹ ೧ ಸಾವಿರ ೩೦೦ ವಿವಿಧ ರೀತಿಯ ಬ್ಯಾಕ್ಟೀರಿಯೋಫೇಜ ಇರುವುದು ಕಂಡು ಬಂದಿತ್ತು.
ಪ್ರಾಧ್ಯಾಪಕ ಗೋಪಾಲನಾಥ ಇವರು ವರ್ಷ ೧೯೮೦ ರಿಂದ ೧೯೯೦ ರ ಕಾಲಾವಧಿಯಲ್ಲಿ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಬ್ಯಾಕ್ಟೀರಿಯೋಫೇಜ್‍ನ ಸಹಾಯದಿಂದ ರೋಗಿಗಳನ್ನು ಉಪಚರಿಸಿದ್ದರು.
ನ್ಯಾಯವಾದಿ ಅರುಣ ಕುಮಾರ ಗುಪ್ತಾ ಇವರು ನಡೆಸಿದ ಸಂಶೋಧನೆ.
ನ್ಯಾಯವಾದಿ ಅರುಣ ಕುಮಾರ ಗುಪ್ತಾ ಇವರು ಗಂಗಾನದಿಯ ದಡದಲ್ಲಿ ವಾಸಿಸುವ ೪೯೧ ಜನರ ಸಮೀಕ್ಷೆಯನ್ನು ನಡೆಸಿದ್ದರು. ಇದರಲ್ಲಿ ೨೭೪ ಜನರು ಪ್ರತಿದಿನ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿದ್ದು, ಗಂಗಾಜಲವನ್ನು ಕುಡಿಯುತ್ತಿದ್ದರು. ಅವರಿಗೆ ಕೊರೊನಾ ಸೋಂಕು ಬಾಧಿಸಿಲ್ಲ ಎಂಬುದು ಕಂಡು ಬಂದಿತು. ಇನ್ನೊಂದೆಡೆ ೨೧೭ ಜನರು, ಗಂಗಾನದಿಯ ನೀರನ್ನು ಉಪಯೋಗಿಸುತ್ತಿರಲಿಲ್ಲ. ಇವರಲ್ಲಿ ೨೦ ಜನರಿಗೆ ಕೊರೊನಾ ಸೋಂಕು ತಗುಲಿತು ಮತ್ತು ಅವರಲ್ಲಿ ಇಬ್ಬರು ಮರಣ ಹೊಂದಿದರು.