ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಗೊಬ್ಬರವನ್ನು ಬಳಸದೆ, ಜೀವಾಮೃತವನ್ನು ಬಳಸಿ ಗಿಡಗಳನ್ನು ಬೆಳೆಸಲು (ಕೈದೋಟಕ್ಕಾಗಿ) ಫಲವತ್ತಾದ ಮಣ್ಣನ್ನು ಹೇಗೆ ತಯಾರಿಸಬೇಕು ?
‘ಜೀವಾಮೃತ’ವು ಗಿಡಗಳಿಗೆ ಮಣ್ಣಿನಿಂದ ಆಹಾರದ್ರವ್ಯವನ್ನು ಲಭ್ಯಮಾಡಿಕೊಡುವ ಜೀವಾಣುಗಳ ಮಿಶ್ರಣವಾಗಿದೆ. ನೈಸರ್ಗಿಕ ಕಸವನ್ನು ಬೇಗನೆ ಕೊಳೆಸಿ ಅದರಲ್ಲಿನ ಆಹಾರದ್ರವ್ಯವನ್ನು ಗಿಡಗಳಿಗೆ ಲಭ್ಯಮಾಡಿಕೊಡುವ ಅಸಂಖ್ಯಾತ ಜೀವಾಣುಗಳು ದೇಶಿ ಹಸುವಿನ ಸೆಗಣಿಯಲ್ಲಿರುತ್ತದೆ.