ರಾಸಾಯನಿಕ, ಸಾವಯವ ಮತ್ತು ನೈಸರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ!

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ

‘ಗಿಡಗಳನ್ನು ಬೆಳೆಸಲು ಅವುಗಳಿಗೆ ಗೊಬ್ಬರವನ್ನು ಹಾಕಬೇಕಾಗುತ್ತದೆ ಮತ್ತು ರೋಗ ಹಾಗೂ ಕೀಟಗಳಿಂದ ರಕ್ಷಿಸಲು ಔಷಧಿಗಳನ್ನು ಸಿಂಪಡಿಸಬೇಕಾಗುತ್ತದೆ. ಗಿಡಗಳಿಗೆ ನಾವು ಯಾವ ರೀತಿಯ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತೇವೆಯೋ, ಅದರಿಂದ ಕೃಷಿ ರಾಸಾಯನಿಕ, ಸಾವಯವ ಅಥವಾ ನೈಸರ್ಗಿಕ ಎಂಬುದು ನಿರ್ಧರಿತವಾಗುತ್ತದೆ.

ರಾಸಾಯನಿಕ ಕೃಷಿ 

ಎರಡನೇ ಮಹಾಯುದ್ಧದ ನಂತರ ವಿದೇಶಗಳಲ್ಲಿ ಕೃಷಿಗಾಗಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಲು ಪ್ರಾರಂಭಿಸಲಾಯಿತು ಮತ್ತು ನಂತರ ಭಾರತದಲ್ಲಿ ಅದರ ಪ್ರಸಾರವಾಯಿತು. ರಾಸಾಯನಿಕ ಕೃಷಿಯಲ್ಲಿ ಮನುಷ್ಯರು ತಯಾರಿಸಿದ ವಿಷಕಾರಿ ರಾಸಾಯನಿಕ ಗೊಬ್ಬರ ಮತ್ತು ಔಷಧಗಳನ್ನು ಬಳಸಲಾಗುತ್ತದೆ. ಇವುಗಳನ್ನು ಉಪಯೋಗಿಸುವುದರಿಂದ ವಾತಾವರಣದ ಮೇಲೆ, ಹಾಗೆಯೇ ನಮ್ಮ ಆರೋಗ್ಯದ ಮೇಲೆಯೂ ಅನೇಕ ಭೀಕರ ದುಷ್ಪರಿಣಾಮಗಳಾಗುತ್ತವೆ. ವಿಷಕಾರಿ ರಾಸಾಯನಿಕ ಗೊಬ್ಬರಗಳನ್ನು ಮತ್ತು ಔಷಧಗಳನ್ನು ದೊಡ್ಡ ದೊಡ್ಡ ಕಾರಖಾನೆಗಳಲ್ಲಿ ತಯಾರಿಸುತ್ತಾರೆ. ಆದುದರಿಂದ ಆಪತ್ಕಾಲದಲ್ಲಿ ಅವು ಸಿಗಲಾರವು, ಹಾಗೆಯೇ ಆರೋಗ್ಯದ ದೃಷ್ಟಿಯಿಂದ ಈ ಪದ್ಧತಿಯು ಅಯೋಗ್ಯವಾಗಿದೆ.

ಸಾವಯವ ಕೃಷಿ

ನಿರುಪಯುಕ್ತ ನೈಸರ್ಗಿಕ ಪದಾರ್ಥಗಳ ಮೇಲೆ ಅನೇಕ ಪ್ರಕ್ರಿಯೆಗಳನ್ನು ಮಾಡಿ ಸಾವಯವ ಗೊಬ್ಬರಗಳನ್ನು ತಯಾರಿಸಲಾಗುತ್ತದೆ. ಕಂಪೋಸ್ಟ್ ಗೊಬ್ಬರ, ಎರೆಹುಳ ಗೊಬ್ಬರ, ಮಾರುಕಟ್ಟೆಯಲ್ಲಿನ ತರಕಾರಿಗಳ ಕಸ, ನಗರಗಳಲ್ಲಿನ ಕಸ, ಪಶುವಧಗೃಹಗಳಲ್ಲಿನ ನಿರುಪಯುಕ್ತ ಪದಾರ್ಥಗಳು, ಪ್ರಾಣಿಗಳ ಎಲುಬಿನ ಚೂರುಗಳು, ಮೀನಿನ ಗೊಬ್ಬರ, ಕೋಳಿಯ ಗೊಬ್ಬರ, ಪೇಟೆಯಲ್ಲಿ ಸಿಗುವ ಸಾವಯವ ಗೊಬ್ಬರಗಳು ಸಾವಯವ ಕೃಷಿಗಾಗಿ ಉಪಯೋಗಿಸಲಾಗುವ ಗೊಬ್ಬರಗಳ ಉದಾಹರಣೆಗಳಾಗಿವೆ. ಪೇಟೆಯಲ್ಲಿ ದೊರಕುವ ಎಲ್ಲಕ್ಕಿಂತ ಪ್ರಚಲಿತ ಸಾವಯವ ಗೊಬ್ಬರವೆಂದರೆ ‘ಸ್ಟೆರಾಮೀಲ್’. ಇದರಲ್ಲಿ ಎಲುಬುಗಳ ಪುಡಿಯೂ ಇರುತ್ತದೆ. ‘ಕಂಪೋಸ್ಟ್ ಗೊಬ್ಬರ’ ಎಂದರೆ ಬೇರೆಬೇರೆ ಕಸವನ್ನು ಒಂದರಮೇಲೊಂದು ಹಾಕಿ ಅದನ್ನು ಕೊಳೆಸಿ ತಯಾರಿಸಿದ ಪದಾರ್ಥ ಎಂದು ಹೇಳಬಹುದು.

ಸಾವಯವ ಕೃಷಿಗಳಲ್ಲಿ ಈ ರೀತಿ ಹೆಚ್ಚು ಪ್ರಕ್ರಿಯೆಯನ್ನು ಮಾಡಿದ ಗೊಬ್ಬರಗಳನ್ನು ಬಳಸುವುದರಿಂದ ಆ ಗೊಬ್ಬರಗಳು ತುಂಬಾ ದುಬಾರಿ ಆಗಿರುತ್ತವೆ, ಹಾಗೆಯೇ ಅವುಗಳಲ್ಲಿ ಆರ್ಸೆನಿಕ್, ಸೀಸಗಳಂತಹ ವಿಷಕಾರಿ ಧಾತುಗಳ ಪ್ರಮಾಣವೂ ಹೆಚ್ಚಿರುತ್ತದೆ. ಈ ಧಾತುಗಳಿಂದ ಶರೀರದ ಮೇಲೆ ದುಷ್ಪರಿಣಾಮವಾಗಬಹುದು. ಈ ಪದ್ಧತಿಯೂ ಪರಾವಲಂಬಿಯಾಗಿರುವುದರಿಂದ ಆಪತ್ಕಾಲಕ್ಕಾಗಿ ಉಪಯುಕ್ತವಾಗಿಲ್ಲ.

ರಾಸಾಯನಿಕ ಕೃಷಿಯ ಭೀಕರ ದುಷ್ಪರಿಣಾಮಗಳು ಗಮನಕ್ಕೆ ಬಂದ ನಂತರ ವಿದೇಶಗಳಲ್ಲಿ ಸಾವಯವ ಕೃಷಿ ಪ್ರಾರಂಭವಾಯಿತು. ಅನಂತರ ಈ ಪದ್ಧತಿಯು ಭಾರತದಲ್ಲಿ ಬಂದಿತು. ಇದು ಮೂಲ ಭಾರತೀಯ ಪದ್ಧತಿಯಲ್ಲ !

ನೈಸರ್ಗಿಕ ಕೃಷಿ

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನೈಸರ್ಗಿಕ ಕೃಷಿಯನ್ನೇ ಮಾಡಲಾಗುತ್ತಿತ್ತು. ಈ ಪದ್ಧತಿಯಲ್ಲಿ ನೈಸರ್ಗಿಕ ಪದಾರ್ಥಗಳ ಮೇಲೆ ಅತ್ಯಲ್ಪ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಆಪತ್ಕಾಲದಲ್ಲಿ ರಾಸಾಯನಿಕ ಅಥವಾ ಸಾವಯವ ಗೊಬ್ಬರಗಳು ದೊರಕುವುದು ಕಠಿಣವಾಗಿದೆ. ನೈಸರ್ಗಿಕ ಕೃಷಿಯು ಸಂಪೂರ್ಣ ಸ್ವಾವಲಂಬಿ ಕೃಷಿಯಾಗಿದ್ದು ಆಪತ್ಕಾಲಕ್ಕಾಗಿ, ಹಾಗೆಯೇ ಇತರ ಸಮಯದಲ್ಲಿಯೂ ಅತ್ಯಂತ ಉಪಯುಕ್ತವಾಗಿದೆ. ನೈಸರ್ಗಿಕ ಪದ್ಧತಿಯಿಂದ ಬೆಳೆಸಿದ ತರಕಾರಿ, ಹಣ್ಣುಗಳು, ಹಾಗೆಯೇ ಔಷಧಿ ವನಸ್ಪತಿಗಳು ಸಂಪೂರ್ಣ ವಿಷರಹಿತ ಮತ್ತು ಆರೋಗ್ಯಕರವಾಗಿರುತ್ತವೆ. ಪದ್ಮಶ್ರೀ ಪುರಸ್ಕಾರದಿಂದ ಸನ್ಮಾನಿತ ಶ್ರೀ. ಸುಭಾಷ ಪಾಳೇಕರ ಇವರು ‘ಸುಭಾಷ ಪಾಳೇಕರ ನೈಸರ್ಗಿಕ ಕೃಷಿ’ ಈ ಕೃಷಿತಂತ್ರವನ್ನು ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಿದರು.ಇದರಲ್ಲಿ ದೇಶಿ ಹಸುವಿನ ಸೆಗಣಿ ಮತ್ತು ಗೊಮೂತ್ರ, ಹಾಗೆಯೇ ಸಹಜವಾಗಿ ದೊರಕುವ ನೈಸರ್ಗಿಕ ವಿಷಯಗಳನ್ನು ಉಪಯೋಗಿಸಿ ಜೀವಾಮೃತ, ಬೀಜಾಮೃತ ಇವುಗಳಂತಹ ಗೊಬ್ಬರ ಮತ್ತು ಔಷಧಿಗಳನ್ನು ತಯಾರಿಸಿ ಉಪಯೋಗಿಸಲಾಗುತ್ತದೆ.’  – ಓರ್ವ ಕೃಷಿತಜ್ಞರು, ಪುಣೆ (೧೭. ೧೧. ೨೦೨೧ )

ಸನಾತನದ ಜಾಲತಾಣದಲ್ಲಿ ಕೈದೋಟದ ವಿವರವನ್ನು ಓದಿರಿ

https://www.sanatan.org/kannada/94049.html (ಈ ಲಿಂಕ್‍ಗೆ ಹೋಗಲು ಈ `QR ಕೋಡ’ ಸ್ಕ್ಯಾನ್’ ಮಾಡಿ !) 

ಈ ಮಾರ್ಗಿಕೆಯಲ್ಲಿ ನೀಡಿರುವ ವಿವಿಧ ವಿಡಿಯೋಗಳಿಂದ ವಿಷಯ ಸ್ಪಷ್ಟವಾಗಲು ಸಹಾಯವಾಗುವುದು. ಕೃಷಿಗೆ ಸಂಬಂಧಿಸಿದ ಏನಾದರೂ ಸಂದೇಹಗಳಿದ್ದರೆ ಈ ಮಾರ್ಗಿಕೆಯಲ್ಲಿ ಕೇಳಬಹುದು.

ಟಿಪ್ಪಣಿ – ಜಾಲತಾಣದಲ್ಲಿ ಪ್ರಶ್ನೆಗಳನ್ನು ಕೇಳುವ ಪದ್ಧತಿ ಪುಟದ ಕೊನೆಗೆ ‘Leave a Comment’ ಹೀಗೆ ಬರೆದಿರುವ ಜಾಗದಲ್ಲಿ ‘ಕ್ಲಿಕ್’ ಮಾಡಬೇಕು. ಅನಂತರ ಇಲ್ಲಿ ತಮ್ಮ ಪ್ರಶ್ನೆಗಳನ್ನು ಬೆರಳಚ್ಚು ಮಾಡಬೇಕು. ತಮ್ಮ ಹೆಸರು ಮತ್ತು ಈಮೇಲ್ ವಿಳಾಸವನ್ನು ಬರೆಯಬೇಕು. Save my name.. ಈ ಪರ್ಯಾಯವನ್ನು ಆಯ್ಕೆ ಮಾಡಬೇಕು. ಹೀಗೆ ಮಾಡಿದರೆ ಮುಂದಿನ ಸಲ ಹೆಸರು ಮತ್ತು ಈಮೇಲ್ ವಿಳಾಸವನ್ನು ಪುನಃ ಬರೆಯುವ ಅವಶ್ಯಕತೆ ಇಲ್ಲ.  ‘Post Comment’ ಹೀಗೆ ಬರೆದಿರುವ ಜಾಗದಲ್ಲಿ ಕ್ಲಿಕ್ ಮಾಡಬೇಕು. ಹೀಗೆ ಮಾಡಿದ ನಂತರ ಈ ಪ್ರಶ್ನೆಯು ಜಾಲತಾಣದ ನಿರ್ವಾಹಕರ (ಎಡಮಿನ್) ಕಡೆಗೆ ಹೋಗುತ್ತದೆ ಮತ್ತು ಅವರು ಸ್ವೀಕರಿಸಿದ ನಂತರ ಈ ಪ್ರಶ್ನೆಯು ಜಾಲತಾಣದ ಪುಟದಲ್ಲಿ ಕಾಣಿಸುತ್ತದೆ.

ಸಾಧಕರಿಗೆ ಸೂಚನೆ

‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನದ ಅಂತರ್ಗತ ಕೊಟ್ಟಿರುವ ಸಮಯಮಿತಿಯಲ್ಲಿ ಕೃಷಿಯನ್ನು ಮಾಡಲು ಪ್ರಾರಂಭಿಸಿರಿ !

ವೈದ್ಯ ಮೇಘರಾಜ ಪರಾಡಕರ್

೧. ತಮ್ಮ ತಮ್ಮ ಮನೆಗಳಲ್ಲಿ ಸ್ವಲ್ಪಮಟ್ಟಿಗಾದರೂ ಗಿಡಗಳನ್ನು ಬೆಳೆಸಲು ಪ್ರಾರಂಭಿಸಿರಿ !

‘ಕಾರ್ತಿಕ ಏಕಾದಶಿಯಿಂದ (೧೫. ೧೧. ೨೦೨೧ ರಿಂದ) ಸನಾತನವು ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನವನ್ನು ಹಮ್ಮಿಕೊಂಡಿದೆ. ಆಪತ್ಕಾಲದ ಪೂರ್ವಸಿದ್ಧತೆ ಎಂದು ಎಲ್ಲ ಸಾಧಕರು ತಮ್ಮ ತಮ್ಮ ಮನೆಗಳಲ್ಲಿ ಸ್ವಲ್ಪಮಟ್ಟಿಗಾದರೂ ತರಕಾರಿ, ಹಣ್ಣಿನ ಗಿಡಗಳು ಮತ್ತು ಔಷಧಿ ವನಸ್ಪತಿಗಳನ್ನು ಬೆಳೆಸಬೇಕು, ಎಂಬುದೇ ಈ ಅಭಿಯಾನದ ಹಿಂದಿನ ಉದ್ದೇಶವಾಗಿದೆ. ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನದ ಅಂತರ್ಗತ ಸಾಧಕರಿಗೆ ಮನೆಯ ಸುತ್ತಲು ಇರುವ ಜಾಗದಲ್ಲಿ, ಮೇಲ್ಛಾವಣಿ ಅಥವಾ ಬಾಲ್ಕನಿಯಲ್ಲಿ ಸ್ವಲ್ಪ ಜಾಗದಲ್ಲಿಯೂ ಕೃಷಿಯನ್ನು ಹೇಗೆ ಮಾಡಬೇಕು, ಇದರ ಕುರಿತು ಮಾರ್ಗದರ್ಶನವನ್ನು ನೀಡಲಾಗುವುದು. ಈ ಅಭಿಯಾನದ ವಿವರವಾದ ಮಾಹಿತಿ ಮತ್ತು ಸಮಯಮಿತಿಯನ್ನು ಕನ್ನಡ ‘ಸಾಪ್ತಾಹಿಕ ಸನಾತನ ಪ್ರಭಾತ’ ಸಂಚಿಕೆ ಕ್ರಮಾಕ ೨೩/೧೧ ರಲ್ಲಿ ಕೊಡಲಾಗಿದೆ. ಎಲ್ಲೆಡೆಯ ಸಾಧಕರು ಇದರಲ್ಲಿ ನೀಡಿದ ಸಮಯಮಿತಿಯಲ್ಲಿ ತಮ್ಮತಮ್ಮ ಮನೆಗಳಲ್ಲಿ ಕೃಷಿಯನ್ನು ಮಾಡಲು (ಗಿಡಗಳನ್ನು ಬೆಳೆಸಲು) ಆರಂಭಿಸಬೇಕು.

೨. ಕೃಷಿಗೆ ಸಂಬಂಧಿಸಿದ ಪ್ರಾಯೋಗಿಕ ಬರವಣಿಗೆಯನ್ನು ಕಳುಹಿಸಿರಿ !

ಕೃಷಿಯು ಒಂದು ಪ್ರಾಯೋಗಿಕ ವಿಷಯವಾಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಅನುಭವಗಳಿಗೂ ತುಂಬಾ ಮಹತ್ವವಿರುತ್ತದೆ. ಈಗಾಗಲೇ ಕೃಷಿಯನ್ನು ಮಾಡುತ್ತಿರುವಂತಹ ಸಾಧಕರು ಸಹ ತಾವು ಕೃಷಿ ಮಾಡುವಾಗ ತಮಗೆ ಬಂದ ಅನುಭವಗಳು, ಆಗಿರುವ ತಪ್ಪುಗಳು, ಆ ತಪ್ಪುಗಳಿಂದ ಕಲಿಯಲು ಸಿಕ್ಕಿದ ಅಂಶಗಳು, ಕೃಷಿಗೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಪ್ರಯೋಗಗಳ ವಿಷಯಗಳನ್ನು ತಮ್ಮ ಛಾಯಾಚಿತ್ರ ಸಹಿತ ಬರೆದು ಕಳುಹಿಸಬೇಕು. ಈ ವಿಷಯವನ್ನು ಸಾಪ್ತಾಹಿಕ ಸನಾತನ ಪ್ರಭಾತದಲ್ಲಿ ಮುದ್ರಿಸಲಾಗುವುದು. ಇದರಿಂದ ಇತರರಿಗೂ ಕಲಿಯಲು ಸಿಗುವುದು.

೨ ಅ. ಬರೆದು ಕಳುಹಿಸಲು ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೊಂಡಾ, ಗೋವಾ, ಪಿನ್ – 403401

೨ ಆ. ಗಣಕೀಯ ವಿಳಾಸ (ವಿ-ಅಂಚೆ) : [email protected]

೩. ‘ಮನೆಮನೆಗಳಲ್ಲಿ ಕೈದೋಟ’ ಇದು ಭಗವಂತನ ನಿಯೋಜನೆಯೇ ಆಗಿದೆ, ಎಂಬ ಭಾವವನ್ನಿಟ್ಟುಕೊಂಡು, ಭಾವದ ಸ್ತರದಲ್ಲಿ ಈ ಅಭಿಯಾನದ ಲಾಭವನ್ನು ಮಾಡಿಕೊಳ್ಳಿರಿ !

ಶ್ರೀಕೃಷ್ಣನು ಗೋಪ-ಗೋಪಿಯರನ್ನು ಮಹಾಭಯಂಕರ ಮಳೆಯಿಂದ ರಕ್ಷಿಸಲು ತನ್ನ ಕಿರುಬೆರಳಿನ ಮೇಲೆ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದಿದ್ದನು. ಅದೇ ರೀತಿ ಮುಂಬರುವ ಆಪತ್ಕಾಲದಲ್ಲಿಯೂ ಭಗವಂತನೇ ಭಕ್ತರನ್ನು ಕಾಪಾಡುವವನಿದ್ದಾನೆ. ಭಗವಂತನು ಅವನ ನಿಯೋಜನೆಯಂತೆ ಕಾರ್ಯವನ್ನು ಮಾಡುತ್ತಲೇ ಇರುತ್ತಾನೆ. `ಮನೆಮನೆಗಳಲ್ಲಿ ಕೈದೋಟ’ ಇದೂ ಭಗವಂತನ ನಿಯೋಜನೆಯೇ ಆಗಿದೆ. ಅವನು ಅದನ್ನು ಎಲ್ಲರಿಂದ ಮಾಡಿಸಿಕೊಳ್ಳುವವನೇ ಇದ್ದಾನೆ. ಭಗವಂತನು ಪರ್ವತವನ್ನು ಎತ್ತಿದಾಗ, ಗೋಪಗೋಪಿಯರು ತಮ್ಮ ಸಾಧನೆಯೆಂದು ತಮ್ಮತಮ್ಮ ಕೋಲುಗಳನ್ನು ಪರ್ವತಕ್ಕೆ ತಗಲಿಸಿದ್ದರು. ಅದೇ ರೀತಿ ನಾವೂ ನಮ್ಮ ಸಾಧನೆಯೆಂದು ಈ ಅಭಿಯಾನದಲ್ಲಿ ಮನಃಪೂರ್ವಕವಾಗಿ ಪಾಲ್ಗೊಳ್ಳೋಣ ಮತ್ತು ಭಾವದ ಸ್ತರದಲ್ಲಿ ಅಭಿಯಾನದಿಂದ ಹೆಚ್ಚೆಚ್ಚು ಲಾಭವನ್ನು ಪಡೆಯೋಣ.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦. ೧೧. ೨೦೨೧)

ಕೃಷಿಗೆ ಸಂಬಂಧಿಸಿದ ಸಂದೇಹಗಳ ನಿವಾರಣೆ

ಪ್ರಶ್ನೆ೧ : ‘ನನ್ನ ಬಂಗಲೆಯ ತೋಟದಲ್ಲಿ ಸ್ವಲ್ಪ ಖಾಲಿ ಜಾಗ ಇದೆ; ಆದರೆ ಸಮೀಪ ತೆಂಗಿನ ಮರಗಳು ಮತ್ತು ರಾಮಫಲದ ಗಿಡಗಳಿರುವುದರಿಂದ ನೆರಳು ಬರುತ್ತದೆ. ಆ ಜಾಗದಲ್ಲಿ ಹೆಚ್ಚು ಬಿಸಿಲು ಬರುವುದಿಲ್ಲ. ಆ ಜಾಗದಲ್ಲಿ ತರಕಾರಿಗಳನ್ನು ಬೆಳೆಸಬಹುದೇ ? (ಮೇಲ್ಛಾವಣಿಯ (ಟೆರೇಸ್) ಮೇಲೆಯೂ ತರಕಾರಿಗಳನ್ನು ಬೆಳೆಸಬಹುದು.)’

– ಸೌ. ಸ್ಮಿತಾ ಮಾಯೀಣಕರ (೧೪. ೧೧. ೨೦೨೧)

ಉತ್ತರ : ‘ಪ್ರತಿಯೊಂದು ವನಸ್ಪತಿಯ ಸೂರ್ಯಪ್ರಕಾಶದ ಅವಶ್ಯಕತೆ ಬೇರೆಬೇರೆ ಆಗಿರುತ್ತದೆ. ಹೆಚ್ಚಿನ ಹಣ್ಣಿನ ಗಿಡಗಳಿಗೆ ಮತ್ತು ತರಕಾರಿಗಳಿಗೆ ಒಳ್ಳೆಯ ಬೆಳವಣಿಗೆಯಾಗಲು ಬೆಳಗ್ಗಿನ ಕನಿಷ್ಟಪಕ್ಷ ೪ ರಿಂದ ೫ ಗಂಟೆ ಬಿಸಿಲು ಸಿಗುವುದು ಆವಶ್ಯಕವಾಗಿರುತ್ತದೆ. ಮಸಾಲೆಯ ವನಸ್ಪತಿಗಳಿಗೆ (ಉದಾ. ಮೆಣಸಿನ ಬಳ್ಳಿ) ಹೆಚ್ಚು ಸೂರ್ಯಪ್ರಕಾಶದ ಅವಶ್ಯಕತೆ ಇರುವುದಿಲ್ಲ. ಅವು ನೆರಳಿನಲ್ಲಿ ಅಥವಾ ಸ್ವಲ್ಪ ತೀವ್ರವಿರುವ ಸೂರ್ಯಪ್ರಕಾಶದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಆದುದರಿಂದ ಗಿಡಗಳ ನೆರಳು ಬೀಳುವ ಜಾಗದಲ್ಲಿ ಮಸಾಲೆ ವನಸ್ಪತಿಗಳನ್ನು ಬೆಳೆಸಬಹುದು ಮತ್ತು ಮೇಲ್ಛಾವಣಿಯ (ಟೆರೇಸ್) ಸೂರ್ಯಪ್ರಕಾಶದಲ್ಲಿ ತರಕಾರಿಗಳನ್ನು ಬೆಳೆಸಬಹುದು.’

ಪ್ರಶ್ನೆ ೨ : ‘ಇತ್ತೀಚೆಗೆ ಪ್ಲ್ಯಾಸ್ಟಿಕಿನ ಕುಂಡಗಳು ಸಿಗುತ್ತವೆ. ಅವುಗಳಲ್ಲಿ ಗಿಡಗಳನ್ನು ಬೆಳೆಸಬಹುದೇ ?’ – ಸೌ. ಸ್ಮಿತಾ ಮಾಯೀಣಕರ (೧೪. ೧೧. ೨೦೨೧)

ಉತ್ತರ : ‘ಆದಷ್ಟು ಪ್ಲಾಸ್ಟಿಕನ್ನು ಉಪಯೋಗಿಸಬಾರದು; ಆದರೆ ಹಳೆಯ ಪ್ಲಾಸ್ಟಿಕಿನ ಕುಂಡಗಳು, ಪ್ಲಾಸ್ಟಿಕಿನ ಭರಣಿಗಳು (ಡಬ್ಬಿಗಳು) ಅಥವಾ ಪ್ಲಾಸ್ಟಿಕಿನ ಚೀಲಗಳಿದ್ದರೆ, ಅವುಗಳನ್ನು ಎಸೆಯದೇ ಉಪಯೋಗಿಸಬಹುದು. ಮಣ್ಣಿನ ಕುಂಡಗಳು ಅಥವಾ ಇಟ್ಟಿಗೆಗಳ ಮಡಿಯನ್ನು ಮಾಡುವುದು ಹೆಚ್ಚು ಯೋಗ್ಯವಾಗಿದೆ.’