೨೦೨೫ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ ! – ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆ

‘ಜಗತ್ತಿನ ಘಟನೆಗಳು ಈಶ್ವರನ ಆಯೋಜನೆಯಂತೆಯೇ ಘಟಿಸುತ್ತಿರುತ್ತದೆ. ಈಶ್ವರನ ಈ ಆಯೋಜನೆಯು ಸಂತರಿಗೆ ತಿಳಿಯುತ್ತದೆ, ಅದೇ ರೀತಿ ಕೆಲವು ಸ್ಥೂಲ-ಸೂಕ್ಷ್ಮಅನುಮಾನಗಳ ಆಧಾರದಲ್ಲಿ ಭವಿಷ್ಯವನ್ನು ನುಡಿಯುವರಿಗೂ ತಿಳಿಯುತ್ತದೆ. ಅದಕ್ಕನುಸಾರ ಅವರು ಭವಿಷ್ಯ ನುಡಿಯುತ್ತಾರೆ. ಎಲ್ಲವೂ ದೇವರ ಆಯೋಜನೆಯಂತೆಯೇ ಆಗುತ್ತಿದ್ದರೂ ದೇವರು ಮನುಷ್ಯನ ಕ್ರಿಯಮಾಣಕ್ಕಾಗಿ ಸ್ವಲ್ಪಭಾಗವನ್ನು ಮೀಸಲಿಟ್ಟಿದ್ದಾನೆ. ಮನುಷ್ಯನು ತನ್ನ ಕ್ರಿಯಮಾಣವನ್ನು ಒಳ್ಳೆಯ ಕಾರ್ಯಕ್ಕಾಗಿ ಉಪಯೋಗಿಸಿದರೆ, ಕೆಲವು ಸಲ ಘಟಿಸಬಾರದ್ದು ಸಹ ತಡೆಯಲ್ಪಡುತ್ತದೆ, ಉದಾ. ಸಮಾಜವು ಸಾಧನೆ ಮಾಡಲಾರಂಭಿಸಿದ್ದರಿಂದ ಸಾತ್ತ್ವಿಕತೆ ಹೆಚ್ಚಾಗುತ್ತದೆ, ಇದರಿಂದ ತಮೋಗುಣ ಕಡಿಮೆಯಾಗಿ ಅದರಿಂದ ಘಟಿಸುವ ದುಷ್ಪರಿಣಾಮ ತನ್ನಷ್ಟಕ್ಕೆ ತಪ್ಪುತ್ತದೆ. ಕೆಲವು ವರ್ಷಗಳಿಂದ ಅನೇಕ ಸಂತರು ಮತ್ತು ಭವಿಷ್ಯಕಾರರು ‘೨೦೨೩ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು’ ಎಂದಿದ್ದರು.

ಸದ್ಯ ಜಗತ್ತಿನ ಸ್ಥಿತಿ ನೋಡಿದರೆ, ಕಳೆದ ಕೆಲವು ವರ್ಷಗಳಿಂದ ಜಗತ್ತು ಮೂರನೆಯ ಮಹಾಯುದ್ಧದ ಹೊಸ್ತಿಲಿನಲ್ಲಿದೆ. ಯಾವುದೇ ಸಮಯದಲ್ಲಿ ಯುದ್ಧವಾಗಿ ಅನೇಕ ದೇಶಗಳು ಧ್ವಂಸವಾಗಬಹುದು. ಹೀಗಿದ್ದರೂ ಅನೇಕ ಸಂತರು ನರಮೇಧವನ್ನು ತಪ್ಪಿಸಲು ಆಧ್ಯಾತ್ಮಿಕ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಪ್ರಯತ್ನದಲ್ಲಿ ಯಶಸ್ವಿ ಸಹ ಆಗುತ್ತಿದ್ದಾರೆ. ಇದರ ಸ್ಥೂಲದ ಅನುಭವವೆಂದರೆ ‘ಕಳೆದ ೩-೪ ವರ್ಷಗಳಲ್ಲಿ ಅನೇಕ ದೇಶಗಳಲ್ಲಿ ಯುದ್ಧಜನ್ಯ ಸ್ಥಿತಿ ಉದ್ಭವಿಸಿ ಅದು ಕಣ್ಮರೆಯಾಗಿದೆ.’ ಇದೇ ಕಾರಣಕ್ಕಾಗಿ ಸದ್ಯದ ಕಾಲದಲ್ಲಿ ಬರುವ ಆಪತ್ಕಾಲವು ಸ್ವಲ್ಪ ಕಾಲಾವಧಿಗಾಗಿ ಮುಂದೆ ಹೋಗಿದೆ. ೨೦೨೫ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು.

ಪೂರ್ವಾನುಮಾನದಿಂದ ಸಂತರು ಹೇಳಿದಂತೆ ಆಪತ್ಕಾಲ ಮುಂದೆ ಹೋದರೂ ಇದು ಯಾವುದೇ ಸಮಯದಲ್ಲಾದರೂ ಪ್ರಾರಂಭವಾಗಬಹುದು. ಕೊರೊನಾದಂತಹ ಸಾಂಕ್ರಾಮಿಕ ರೋಗಗಳ ಮಾಧ್ಯಮದಿಂದ ನಾವೆಲ್ಲರೂ ಇದನ್ನು ಅನುಭವಿಸಿದ್ದೇವೆ. ಮೂರನೇಯ ಮಹಾಯುದ್ಧವು ಯಾವುದೇ ಸಮಯದಲ್ಲಿ ಆಗಬಹುದು. ಆದ್ದರಿಂದ ಸಾಧಕರು ಆಪತ್ಕಾಲದ ಸಿದ್ಧತೆಯನ್ನು ಮುಂದುವರಿಸಬೇಕು.’

– (ಪರಾತ್ಪರ ಗುರು) ಡಾ. ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ. (೧.೧೨.೨೦೨೧)