ಆಪತ್ಕಾಲದ ಪೂರ್ವಸಿದ್ಧತೆಯೆಂದು ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧) ಆರಂಭವಾದ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನದಲ್ಲಿ ಪಾಲ್ಗೊಳ್ಳಿ

ಸಾಧಕರಿಗೆ ಸೂಚನೆ

ಕಾಲದ ವೇಗವನ್ನು ಗಮನದಲ್ಲಿರಿಸಿ ಸಾಧಕರು ಮನೆಯಲ್ಲಿಯೇ ಹಣ್ಣು, ಸೊಪ್ಪುತರಕಾರಿ ಮತ್ತು ಔಷಧಿ ಸಸ್ಯಗಳನ್ನುಶೀಘ್ರದಲ್ಲಿ ಬೆಳೆಸುವುದು ಆವಶ್ಯಕ

೧. ಮನೆಮನೆಗಳಲ್ಲಿ ಸೊಪ್ಪುತರಕಾರಿ, ಹಣ್ಣಿನಗಿಡಗಳು ಮತ್ತು ಔಷಧಿ ಸಸ್ಯಗಳ ಕೈದೋಟವನ್ನು ಮಾಡುವುದರ ಆವಶ್ಯಕತೆ

 ಕೊರೊನಾದ ಕಾಲದಲ್ಲಿ ನಾವು ಆಪತ್ಕಾಲದ ಭೀಕರತೆಯ ಒಂದು ತುಣುಕನ್ನು ಅನುಭವಿಸಿದ್ದೇವೆ. ಆಪತ್ಕಾಲದಲ್ಲಿ ಆಹಾರ ಧಾನ್ಯಗಳು ಮತ್ತು ಸಿದ್ಧ ಔಷಧಿಗಳ ಕೊರತೆಯಾಗಲಿದೆ. ಆದ್ದರಿಂದ ಈಗಿನಿಂದಲೇ ನಾವು ಅದನ್ನು ಎದುರಿಸುವ ಸಿದ್ಧತೆಯನ್ನು ಮಾಡಬೇಕಾಗಿದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಹಣ್ಣು ಇತ್ಯಾದಿಗಳ ಮೇಲೆ ಹಾನಿಕರ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಇಂತಹ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ವಿಷಯುಕ್ತ ಪದಾರ್ಥಗಳು ನಮ್ಮ ಹೊಟ್ಟೆ ಸೇರುತ್ತವೆ.

ಇದರಿಂದ ರೋಗಗಳು ಉಂಟಾಗುತ್ತದೆ. ಸಾಧನೆಗಾಗಿ ದೇಹವು ಆರೋಗ್ಯಕರವಾಗಿರಬೇಕು. ಹಾನಿಕರ ರಾಸಾಯನಿಕಗಳಿಂದ ಮುಕ್ತ, ಅಂದರೆ ನಿರ್ವಿಷ ಆಹಾರವನ್ನು ತಿನ್ನುವಂತಾಗಲು ಸದ್ಯದ ಕಾಲದಲ್ಲಿ ಮನೆಯಲ್ಲಿಯೇ ಸ್ವಲ್ಪ ಪ್ರಮಾಣದಲ್ಲಾದರೂ ಕೆಲವು ತರಕಾರಿಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ.

ವೈದ್ಯ ಮೇಘರಾಜ ಪರಾಡಕರ್

೨. ಮನೆಯಲ್ಲಿಯೇ ಗಿಡ ಬೆಳೆಸಲು ಸಮಸ್ಯೆಗಳಿದ್ದರೂ, ಅದರ ಮೇಲೆ ಉಪಾಯಯೋಜನೆಯನ್ನು ಕಂಡು ಹಿಡಿಯುವುದು ಆವಶ್ಯಕವಾಗಿದೆ !

ಮನೆಯ ಹತ್ತಿರ ಗಿಡಗಳನ್ನು ಬೆಳೆಸಲು ಸ್ಥಳದ ಕೊರತೆ, ಸಮಯದ ಅಭಾವ, ‘ತೋಟಗಾರಿಕೆ ಮಾಡುವುದು ಹೇಗೆ’ ಎಂಬ ಮಾಹಿತಿ ಇಲ್ಲದಿರುವುದು, ‘ಬೀಜಗಳು, ಗೊಬ್ಬರ ಇತ್ಯಾದಿಗಳನ್ನು ಎಲ್ಲಿಂದ ತರಬೇಕೆಂದು ತಿಳಿಯದಿರುವುದು’ ಇಂತಹ ಅನೇಕ ಸಮಸ್ಯೆಗಳಿಂದ ಬಹಳಷ್ಟು ಜನರಿಗೆ ಮನೆಗಳಲ್ಲಿ ತರಕಾರಿಗಳನ್ನು ಬೆಳೆಸಲು ತಮ್ಮಿಂದ ಸಾಧ್ಯವಿಲ್ಲ ಎಂದೆನಿಸುತ್ತದೆ. ಆದರೆ ಇವೆಲ್ಲವುಗಳ ಮೆಲೆ ಉಪಾಯಯೋಜನೆಯನ್ನು ತಯಾರಿಸಿ ಮನೆಯಲ್ಲೇ ತರಕಾರಿ, ಹಣ್ಣುಗಳು ಮತ್ತು ಔಷಧಿ ಸಸ್ಯಗಳನ್ನು ಖಂಡಿತವಾಗಿಯೂ ಬೆಳೆಸಬಹುದು. ಭೀಕರ ಆಪತ್ಕಾಲದ ಪೂರ್ವ ಸಿದ್ಧತೆಯೆಂದು ಪ್ರತಿಯೊಬ್ಬರೂ ಇದನ್ನು ಮಾಡಲೇಬೇಕಾಗಿದೆ.

೩. ಸಾಧಕರೇ, ತೋಟಗಾರಿಕೆಯ ಬಗ್ಗೆ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ತಮ್ಮ ಮನೆಯಲ್ಲಿ ತೋಟಗಾರಿಕೆಯನ್ನು ಕೂಡಲೇ ಆರಂಭಿಸಿ !

ಯಾರ ಮನೆಯ ಅಕ್ಕಪಕ್ಕ ಸ್ಥಳವಿದೆ ಅವರು ಅಲ್ಲಿ ತೋಟಗಾರಿಕೆ ಮಾಡಬಹುದು; ಆದರೆ ಯಾರು ಫ್ಲಾಟ್‌ನಲ್ಲಿ ಅಥವಾ ಸಾಲು ಮನೆಗಳಲ್ಲಿ ಇರುತ್ತಾರೆ, ಯಾರ ಬಳಿ ತೋಟಗಾರಿಕೆಗಾಗಿ ಸ್ಥಳವಿಲ್ಲ, ಅವರೂ ಕೂಡ ಮನೆಯ ಅಂತಸ್ತಿನ ಮೇಲೆ, ಪ್ರಾಂಗಣದಲ್ಲಿ ಅಥವಾ ಕಿಟಕಿಯ ಮೇಲೆಯೂ ತೋಟಗಾರಿಕೆ ಮಾಡಬಹುದು. ಈ ತೋಟಗಾರಿಕೆಗಾಗಿ ವಿವಿಧ ಮಣ್ಣುಗಳ ಅವಶ್ಯಕತೆಯೂ ಇರುವುದಿಲ್ಲ. ಕೇವಲ ಕೆಲವು ಇಟ್ಟಿಗೆಗಳನ್ನು ಜೋಡಿಸಿಟ್ಟು ಅದರ ಮಧ್ಯೆದಲ್ಲಿ ನಿರ್ಮಾಣವಾಗುವ ಜಾಗದಲ್ಲಿ, ಅದೇ ರೀತಿ ಅಡುಗೆಮನೆಯ ತ್ಯಾಜ್ಯ ಪದಾರ್ಥಗಳನ್ನು ವಿಶಿಷ್ಟವಾಗಿ ಹರಡುವುದರಿಂದ ಕೆಲವೇ ದಿನಗಳಲ್ಲೇ ಅತ್ಯಂತ ಫಲವತ್ತಾದ ಮಣ್ಣು ತಯಾರಾಗುತ್ತದೆ. ಈ ಮಣ್ಣಿನಲ್ಲಿ ಯಾವುದೇ ರೀತಿಯ ಹೊರಗಿನ ಗೊಬ್ಬರ ಸೇರಿಸುವ ಅಗತ್ಯವಿಲ್ಲ. ಈ ಫಲವತ್ತಾದ ಮಣ್ಣಿನಿಂದಾಗಿ ತೋಟಗಾರಿಕೆಯಲ್ಲಿ ಬೆಳೆಯುವ ಗಿಡಗಳು ಫಲವತ್ತಾಗಿ ಬೆಳೆದು ಹೆಚ್ಚಿನ ಇಳುವರಿಯನ್ನು ಕೊಡುತ್ತದೆ. ಈ ರೀತಿಯ ತೋಟಗಾರಿಕೆಯಿಂದಾಗಿ ಮನೆಯಲ್ಲಿನ ತ್ಯಾಜ್ಯಗಳು ಸೂಕ್ತವಾದ ವಿಲೇವಾರಿ ಮಾಡಬಹುದು ಮತ್ತು ಕಸಗಳ ಸಮಸ್ಯೆಗಳೂ ನಿವಾರಣೆಯಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ತೋಟಗಾರಿಕೆಗಾಗಿ ಬೇಕಾಗುವ ಸಲಕರಣೆಗಳು ಅತ್ಯಲ್ಪವಿರುವುದರಿಂದ ಕಡಿಮೆ ಖರ್ಚಿನಲ್ಲಿ ತೋಟಗಾರಿಕೆಯನ್ನು ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಹೆಚ್ಚು ಸಮಯ ಕೊಡುವ ಅಗತ್ಯವಿಲ್ಲ. ದಿನನಿತ್ಯದ ಕೆಲಸಗಳಲ್ಲಿ ತೋಟಗಾರಿಕೆಯನ್ನು ಸೇರಿಸಿಕೊಂಡು ನಾವು ಕಡಿಮೆ ಸಮಯ ನೀಡಿಯೂ ಈ ತೋಟಗಾರಿಕೆಯನ್ನು ಮಾಡಬಹುದು. ಕಾಲವು ಯಾರಿಗೂ ನಿಲ್ಲುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಧಕರು ತಮ್ಮ ಸಮಯದ ಯೋಗ್ಯ ಆಯೋಜನೆಯನ್ನು ಮಾಡಿ ತಮ್ಮ ಕ್ಷಮತೆಗನುಸಾರ ತೋಟಗಾರಿಕೆಯನ್ನು ಕೂಡಲೇ ಆರಂಭಿಸಿ.

೫. ಸಾಧಕರೇ, ‘ಮನೆಮನೆಯಲ್ಲಿ ಕೈದೋಟ ಅಭಿಯಾನ’ದಲ್ಲಿ ಮುಂದಿನಂತೆ ಪಾಲ್ಗೊಳ್ಳಿ !

ಎಲ್ಲೆಡೆಯ ಸಾಧಕರು ಮುಂದೆ ನೀಡಿದ ಸಮಯಮಿತಿಯಲ್ಲಿ ಈ ಅಭಿಯಾನಕ್ಕೆ ಸಂಬಂಧಪಟ್ಟಂತೆ ನೀಡಲಾದ ಕೃತಿಯನ್ನು ಮಾಡಬೇಕು. ಯಾರಿಗೆ ಈ ಸೇವೆಯನ್ನು ಬೇಗನೆ ಮುಗಿಸಲು ಸಾಧ್ಯವೋ, ಅವರು ಅದನ್ನು ಸಮಯಮಿತಿಯ ಮುನ್ನವೇ ಮಾಡಿದರೂ ಅಡಚಣೆಯಿಲ್ಲ. ಇಲ್ಲಿ ನೀಡಲಾದ ಪದ್ಧತಿಗನುಸಾರ ತೋಟವನ್ನು ಮಾಡಿದರೆ ಸಾಧಕರಿಗೆ ಕೃಷಿಯ ಬಗ್ಗೆ ಹೆಚ್ಚುಕಡಿಮೆ ಅನುಭವವಾಗುವುದು, ಹಾಗೆಯೇ ಆತ್ಮವಿಶ್ವಾಸವು ಹೆಚ್ಚಾಗುವುದು. ಈ ಮೊದಲ ಹಂತವು ಪೂರ್ಣಗೊಂಡ ನಂತರ ಮುಂದೇನು ಮಾಡಬೇಕು ? ಎಂಬುದರ ಮಾರ್ಗದರ್ಶನವನ್ನು ‘ಸನಾತನ ಪ್ರಭಾತ’ದಿಂದ ನೀಡಲಾಗುವುದು

ಟಿಪ್ಪಣಿ – ಜಾಲತಾಣದಲ್ಲಿ ಪ್ರಶ್ನೆ ಕೇಳುವ ಪದ್ಧತಿ

೧. ಪುಟದ ಕೊನೆಯಲ್ಲಿ ‘Leave a Comment’ ಹೀಗೆ ಬರೆದಿರುವ ಜಾಗದಲ್ಲಿ ಕ್ಲಿಕ್ ಮಾಡಿರಿ.

೨. ಅಲ್ಲಿ ನಿಮ್ಮ ಪ್ರಶ್ನೆ ಟೈಪ್ ಮಾಡಬೇಕು. ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸವನ್ನು ಬರೆಯಬೇಕು.

೩. Save my name and email ಪರ್ಯಾಯ ಆರಿಸಿಕೊಳ್ಳಿ, ಅದರಿಂದ ಮುಂದಿನ ಬಾರಿ ಪುನಃ ಹೆಸರು ಮತ್ತು ಇ-ಮೇಲ್ ನಮೂದಿಸುವ ಅವಶ್ಯಕತೆ ಇರುವುದಿಲ್ಲ.

೪. Post Comment ಎಂದು ಬರೆದಿರುವ ಜಾಗದಲ್ಲಿ ಕ್ಲಿಕ್ ಮಾಡಿ.

ಹೀಗೆ ಮಾಡಿದ ನಂತರ ಈ ಪ್ರಶ್ನೆ ಜಾಲತಾಣದ ಆಡಳಿತದವರ ಬಳಿ (ಅಡಮಿನ್) ಹೋಗುವುದು ಮತ್ತು ಅವರು ಸ್ವೀಕೃತಿ ನೀಡಿದರೆ ಆ ಪ್ರಶ್ನೆ ಜಾಲತಾಣದ ಪುಟದಲ್ಲಿ ಕಾಣಿಸುವುದು

೬. ಸಂದೇಹ ನಿವಾರಣೆಯ ಕಾರ್ಯಪದ್ಧತಿ

ಈ ಅಭಿಯಾನ ನಡೆಯುವಾಗ ನಿಶ್ಚಯಿಸಿರುವ ಕೆಲವು ದಿನಗಳವರೆಗೆ ಸಾಧಕರ ಸಂದೇಹ ನಿವಾರಣೆಗಾಗಿ ‘ಆನ್‌ಲೈನ್’ ಅಭ್ಯಾಸವರ್ಗ ತೆಗೆದುಕೊಳ್ಳಲಾಗುವುದು. ಈ ಅಭ್ಯಾಸವರ್ಗದಲ್ಲಿ ಜಾಲತಾಣಗಳಲ್ಲಿ ಕೇಳಿದ ಪ್ರಶ್ನೆಗಳ ಉತ್ತರ ನೀಡುತ್ತೇವೆ. ಎಲ್ಲರಿಗಾಗಿ ಉಪಯುಕ್ತ ಇರುವ ಪ್ರಶ್ನೆಗಳ ಉತ್ತರಗಳನ್ನು ಸನಾತನ ಪ್ರಭಾತದ ಮಾಧ್ಯಮದಿಂದ ನೀಡಲಾಗುವುದು.

೭. ಗುರುಗಳ ಆಜ್ಞಾಪಾಲನೆ ಎಂದು ಈ ಅಭಿಯಾನದಲ್ಲಿ ಶ್ರದ್ಧೆ ಮತ್ತು ಭಾವದಿಂದ ಭಾಗವಹಿಸಿ !

ಶ್ರೀಗುರುಚರಿತ್ರೆಯ ನಲವತ್ತನೆಯ ಅಧ್ಯಾಯದಲ್ಲಿ ಒಂದು ಪ್ರಸಂಗವಿದೆ. ನರಹರಿ ಎಂಬ ಬ್ರಾಹ್ಮಣನಿಗೆ ಕುಷ್ಠರೋಗವಾಗಿತ್ತು. ಶ್ರೀಗುರು ನೃಸಿಂಹಸರಸ್ವತಿ ಆತನಿಗೆ ೪ ವರ್ಷಗಳ ಕಾಲ ಒಣಗಿದ ಔದುಂಬರ ಕಡ್ಡಿಯನ್ನು ನೀಡಿ ದಿನಕ್ಕೆ ೩ ಬಾರಿ ನೀರು ಹಾಕುವಂತೆ ಹೇಳುತ್ತಾರೆ. ಜನರು ಅವನ ಚೇಷ್ಟೆ ಮಾಡುತ್ತಿದ್ದರೂ ಭಕ್ತ ನರಹರಿಯು ಗುರುವಿನ ಆಜ್ಞಾಪಾಲನೆ ಎಂದು ೭ ದಿನಗಳ ಕಾಲ ಮನಸ್ಸಿನಲ್ಲಿ ಯಾವುದೇ ಸಂದೇಹಗಳನ್ನು ಇಟ್ಟುಕೊಳ್ಳದೇ ಆ ಒಣಗಿದ ಕಡ್ಡಿಗೆ ನೀರು ಹಾಕುತ್ತಾನೆ. ಇದರಿಂದ ಶ್ರೀಗುರುಗಳು ಅವನ ಮೇಲೆ ಪ್ರಸನ್ನರಾಗಿ ತಮ್ಮ ಕಮಂಡಲುವಿನ ತೀರ್ಥವನ್ನು ಆ ಕಡ್ಡಿಯ ಮೇಲೆ ಸಿಂಪಡಿಸುತ್ತಾರೆ. ಅದೇ ಸಮಯದಲ್ಲಿ, ಒಣಗಿದ ಕೊಂಬೆಗಳು ಚಿಗುರೊಡೆಯುತ್ತವೆ ಮತ್ತು ನರಹರಿಯ ಕುಷ್ಠವೂ ಗುಣವಾಗುತ್ತವೆ. ಭಕ್ತ ನರಹರಿಯಂತೆ ನಾವೂ ಕೂಡ ಶ್ರದ್ಧೆ ಮತ್ತು ಭಾವದಿಂದ ಈ ಅಭಿಯಾನದಲ್ಲಿ ಭಾಗವಹಿಸೋಣ. ‘ಶ್ರೀಗುರುಗಳೇ ನಿಮ್ಮಿಂದ ಈ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ’, ಎಂಬ ಭಾವವನ್ನು ಇಟ್ಟುಕೊಳ್ಳೋಣ !

– ವೈದ್ಯ ಮೇಘರಾಜ ಮಾಧವ ಪರಾಡಕರ (೧೦.೧೧.೨೦೨೧)

೩೦ ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಮನೆಯ ಮೇಲ್ಛಾವಣಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರವಿಲ್ಲದೆ ನಿರ್ವಿಷ ಆಹಾರವನ್ನು ಬೆಳೆಸುತ್ತಿರುವ ಪುಣೆಯ ಸೌ. ಜ್ಯೋತಿ ಶಹಾ

ಸೌ. ಜ್ಯೋತಿ ಶಹಾ ಇವರು ಮನೆಯಲ್ಲಿಯೇ ಮಾಡಿರುವ ತೋಟಗಾರಿಕೆಯ ಛಾಯಾಚಿತ್ರಗಳು

ಬಾಳೆಗಿಡದಲ್ಲಿ ಬಿಟ್ಟಿರುವ ಬಾಳೆಗೊನೆ
ಹಳೆಯ ಕಾರ್ಪೆಟ್‌ನಿಂದ ಮಾಡಿದ ಚೀಲದಲ್ಲಿ ದೊಣ್ಣೆ ಮೆಣಸಿನಕಾಯಿ
ಹಣ್ಣುಗಳಿಂದ ತುಂಬಿದ ಪಪ್ಪಾಯಿ ಮರ
ಒಂದು ಕುಂಡದಲ್ಲಿ ಬೆಳೆಸಿದ ಮರದಲ್ಲಿ ಬಿಟ್ಟ ಪೆರಳೆಹಣ್ಣು
ಕೇವಲ ಒಂದು ಇಟ್ಟಿಗೆಯಷ್ಟು ದಪ್ಪದಾದ ಮಣ್ಣಿನಲ್ಲಿ ಬೆಳೆದ ನುಗ್ಗೆಯ ಗಿಡ

ಪುಣೆಯ ಸೌ. ಜ್ಯೋತಿ ಶಹಾ ಇವರು ಕಳೆದ ೩೦ ವರ್ಷಗಳಿಂದ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ನೈಸರ್ಗಿಕ ರೀತಿಯಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಔಷಧಿ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಚಿಕ್ಕ ಪ್ರದೇಶದಲ್ಲಿ ಅವರು ೧೮೦ಕ್ಕೂ ಹೆಚ್ಚು ಪ್ರಕಾರದ ಗಿಡಗಳನ್ನು ಬೆಳೆಸಿದ್ದಾರೆ. ಕೇವಲ ಒಂದು ಇಟ್ಟಿಗೆಯಷ್ಟು ದಪ್ಪವಿರುವ ಜಾಗದಲ್ಲಿ ಕಸಕಡ್ಡಿ, ಅಡುಗೆ ಮನೆಯ ತ್ಯಾಜ್ಯ (ಸೌ. ಶಹಾ ಇವರು ಅದನ್ನು ‘ತ್ಯಾಜ್ಯ’ ಎಂದು ಕರೆಯದೆ ‘ಗಿಡಗಳ ಆಹಾರ’ ಎಂದು ಕರೆಯುತ್ತಾರೆ), ಜೊತೆಗೆ ದೇಶಿ ಗೋವಿನ ಸಗಣಿ ಮತ್ತು ಗೋಮೂತ್ರದಿಂದ ಮಾಡಿದ ‘ಜೀವಾಮೃತ’ ಹೆಸರಿನ ವಿಶಿಷ್ಟ ಪದಾರ್ಥವನ್ನು ಉಪಯೋಗಿಸಿ ‘ಮಣ್ಣಿಲ್ಲದೇ ಕೃಷಿ’ ಮಾಡಿದ್ದಾರೆ. ಜೀವಾಮೃತ ಬಿಟ್ಟು ಬೇರೆ ಯಾವುದೇ ಗೊಬ್ಬರವನ್ನು ಬಳಸದೆ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಅವರು ನಿರ್ವಿಷ ಆಹಾರವನ್ನು ಬೆಳೆಸುತ್ತಿದ್ದಾರೆ. ಅವರ ಸಾಧನೆಯನ್ನು ಹೊಗಳಿದಷ್ಟು ಸಾಲದು !

ಅವರು ಬೆಳೆಸಿದ ತೋಟದ ವಿಡಿಯೋ ಪ್ರತಿಯೊಬ್ಬರ ಮನಸ್ಸಿನಲ್ಲಿ ‘ನಗರಗಳಲ್ಲಿ ಎದುರಾಗುವ ಜಾಗದ ಸಮಸ್ಯೆಯನ್ನು ಮೆಟ್ಟಿನಿಂತು ಯಾವುದೇ ಗೊಬ್ಬರವಿಲ್ಲದೆ ತೋಟಗಾರಿಕೆ ಮಾಡಲು ಸಾಧ್ಯವಿದೆ’ ಎಂಬ ಆತ್ಮವಿಶ್ವಾಸ ಮೂಡಿಸುತ್ತದೆ. ಸೌ. ಜ್ಯೋತಿ ಶಹಾ ಅವರು ತಮ್ಮ ಮನೆಯಲ್ಲಿ ತೋಟಗಾರಿಕೆ ಮಾಡಿ ನಿಲ್ಲಲಿಲ್ಲ, ಬದಲಾಗಿ ಅವರು ಇಲ್ಲಿಯ ತನಕ ಅಸಂಖ್ಯಾತ ಜನರಿಗೆ ಈ ತೋಟಗಾರಿಕೆಯ ವಿಧಾನವನ್ನು ಸಹ ಕಲಿಸಿದ್ದಾರೆ.

ಕೃತಜ್ಞತೆಗಳು

‘ಅರ್ಬನ್ ಫಾರ್ಮಿಂಗ್’ನಲ್ಲಿ (ನಗರಗಳಲ್ಲಿ ಕೈದೋಟ) ೩೦ ವರ್ಷಗಳ ಅನುಭವ ಹೊಂದಿರುವ ಪುಣೆಯ ಸೌ. ಜ್ಯೋತಿ ಶಹಾ ಇವರನ್ನು ‘ಯೂಟ್ಯುಬ್’ನಲ್ಲಿ ಅವರು ಮನೆಯಲ್ಲಿಯೇ ಮಾಡಿರುವ ತೋಟಗಾರಿಕೆಯ ಮಾರ್ಗದರ್ಶನ ಮಾಡುವ ವೀಡಿಯೋಗಳನ್ನು ಇಟ್ಟಿದ್ದಾರೆ. ಸನಾತನದ ಸಾಧಕರು ಅವರನ್ನು ಸಂಪರ್ಕಿಸಿದಾಗ, ಅವರು ಸನಾತನದ ‘ಮನೆಮನೆಯಲ್ಲಿ ಕೈದೋಟ’ ಅಭಿಯಾನಕ್ಕೆ ಯಾವುದೇ ಸಮಯದಲ್ಲಿ ಉಚಿತ ಮಾರ್ಗದರ್ಶನ ನೀಡುವ ಸಿದ್ಧತೆಯನ್ನು ತೋರಿಸಿದರು. ಇದಕ್ಕಾಗಿ ಸೌ. ಜ್ಯೋತಿ ಶಹಾ ಅವರ ಬಗ್ಗೆ ನಾವು  ಕೃತಜ್ಞರಾಗಿದ್ದೇವೆ !

– ವೈದ್ಯ ಮೇಘರಾಜ ಮಾಧವ ಪರಾಡಕರ (೧೦.೧೧.೨೦೨೧)


ಅಡುಗೆಮನೆಯ ತ್ಯಾಜ್ಯವನ್ನು ‘ಗಿಡಗಳ ಆಹಾರ’ ಎಂದು ಕರೆದರೆ, ಆ ಕಸವನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಕೇವಲ ಶಬ್ದವನ್ನು ಬದಲಾಯಿಸಿದ್ದರಿಂದ ನಮ್ಮ ಕೃತಿ ಯಲ್ಲಿಯೂ ಬದಲಾವಣೆಯಾಗುತ್ತದೆ ಮತ್ತು ನಾವು ‘ಆಹಾರ’ವನ್ನು ಎಸೆಯದೆ ‘ಗಿಡಗಳಿಗೆ ಉಣಬಡಿಸುತ್ತೇವೆ’.

– ಸೌ. ಜ್ಯೋತಿ ಶಹಾ, ಪುಣೆ (೨೪.೧೦.೨೦೨೧)

ಮನೆಯಲ್ಲಿ ನೈಸರ್ಗಿಕವಾಗಿ ಕೈದೋಟ ಹೇಗೆ ಮಾಡಬೇಕು ಇದರ ಬಗ್ಗೆ ಸವಿಸ್ತಾರವಾಗಿ ಅರಿತುಕೊಳ್ಳಲು ಮುಂದಿನ ಲಿಂಕ್ ನೋಡಿ !

https://www.sanatan.org/kannada/94049.html

(ಜಾಲತಾಣಕ್ಕೆ ನೇರ ಹೋಗಲು ಇಲ್ಲಿ ನೀಡಿದ ‘QR ಕೋಡ್’ (ಟಿಪ್ಪಣಿ) ‘ಸ್ಕ್ಯಾನ್ ಮಾಡಿ !)

‘ಕ್ಯುಆರ್ ಕೊಡ್’ (QR code) ಎಂದರೇನು ?

QR ಕೋಡ್ ಅಂದರೆ Quick Response ಕೋಡ್. ಇಂದು ಎಲ್ಲ ‘ಸ್ಮಾರ್ಟ್ ಫೋನ್’ಗಳಲ್ಲಿ ‘QR ಕೋಡ್ ಸ್ಕ್ಯಾನರ್’ ಈ ತಂತ್ರಾಂಶ (ಆಪ್) ಲಭ್ಯವಿದೆ. (ಅದು ಇಲ್ಲದಿದ್ದರೆ ಅದನ್ನು ಪ್ಲೇ ಸ್ಟೋರ್‌ದಿಂದ ಡೌನ್‌ಲೋಡ್ ಮಾಡಬಹುದು. ಈ ತಂತ್ರಾಂಶವನ್ನು ಸಕ್ರಿಯಗೊಳಿಸಿ ‘QR ಕೋಡ್ ಮೇಲೆ ‘ಸ್ಮಾರ್ಟ್ ಫೋನ್’ನ ಕ್ಯಾಮೆರಾವನ್ನು ಹಿಡಿಯಬೇಕು, ಆಗ ಕೋಡ್ ಸ್ಕ್ಯಾನ್ ಆಗುತ್ತದೆ ಮತ್ತು ‘ಸ್ಮಾರ್ಟ್ ಫೊನ್’ನಲ್ಲಿ ಜಾಲತಾಣದ ಲಿಂಕ್ ತನ್ನಷ್ಟಕ್ಕೆ ತೆರೆಯುತ್ತದೆ. ಇದರಿಂದ ಲಿಂಕ್‌ಅನ್ನು ಬೆರಳಚ್ಚು ಮಾಡಬೇಕೆಂದಿಲ್ಲ.