ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ರ ನಿಧನ

ಕಲ್ಯಾಣ ಸಿಂಹರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಕಳೆದ ತಿಂಗಳಿನಿಂದ ಉಪಚಾರ ಪಡೆಯಲು ಆಸ್ಪತ್ರೆಗೆ ಸೇರಿದ್ದರು.

ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 348 ಜನರ ಮೃತ್ಯು ! – ಕೇಂದ್ರ ಸರಕಾರ

ಈ ಸಾವಿನ ಹಿಂದಿನ ನಿರ್ದಿಷ್ಟವಾದ ಕಾರಣಗಳೇನು? ಒಂದು ವೇಳೆ ದೌರ್ಜನ್ಯದಿಂದ ಮೃತ್ಯುವಾಗಿದ್ದಲ್ಲಿ, ಸಂಬಂಧಪಟ್ಟವರ ಮೇಲೆ ಯಾವ ಕ್ರಮ ಕೈ ಗೊಳ್ಳಲಾಯಿತು ಎಂಬ ಮಾಹಿತಿಯನ್ನು ಸಹ ಕೇಂದ್ರ ಸರಕಾರವು ಜನತೆಗೆ ನೀಡಬೇಕು !

ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಗೋವಿಂದ ಗಾಂಧಿ ಇವರ ನಿಧನ !

ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಗೋವಿಂದ ಪುಖರಾಜ ಗಾಂಧಿ (ವಯಸ್ಸು 71 ವರ್ಷ) ಇವರು ಅಲ್ಪಕಾಲೀನ ಕಾಯಿಲೆಯಿಂದ ನಿಧನರಾದರು. ರಾಜಸ್ಥಾನದ ಪ್ರವಾಸದಲ್ಲಿರುವಾಗ ಜಯಪುರದಲ್ಲಿ ಈ ಘಟನೆ ನಡೆದಿದೆ.

ಸನಾತನದ ೪೭ ನೇ ಸಂತರಾದ ಪೂ. ರಘುನಾಥ ರಾಣೆ (೮೨ ವರ್ಷ) ಇವರ ಠಾಣೆ(ಮುಂಬಯಿ)ಯಲ್ಲಿ ದೇಹತ್ಯಾಗ !

ಪೂ. ರಾಣೆ ಅಜ್ಜನವರು ೧೯೯೯ ರಲ್ಲಿ ಅಂದರೆ ೬೦ ನೇ ವಯಸ್ಸಿನಲ್ಲಿ ಸನಾತನದ ಮಾರ್ಗದರ್ಶನದಲ್ಲಿ ಸಾಧನೆಗೆ ಪ್ರಾರಂಭ ಮಾಡಿದರು. ಕೇವಲ ೧೬ ವರ್ಷಗಳಲ್ಲಿ ತಳಮಳದಿಂದ ಸಾಧನೆ ಮಾಡಿ ಅವರು ಸಂತ ಪದವಿಯನ್ನು ತಲುಪಿದರು.

ಸಂಸ್ಕೃತ ಭಾಷೆಯ ಏಕೈಕ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ನಿಧನ

ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಜೂನ್ ೩೦ ರಂದು ಹೃದಯಾಘಾತದಿಂದ ನಿಧನರಾದರು. ೨೦೨೦ ರಲ್ಲಿ ಅವರು ಮತ್ತು ಅವರ ಪತ್ನಿ ಎಸ್. ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಸಂತಾಪ ಸೂಚಿಸಿದ್ದಾರೆ.