‘ರಾಮಾಯಣ’ ಧಾರಾವಾಹಿಯ ರಾವಣ ಪಾತ್ರಧಾರಿ ಅರವಿಂದ ತ್ರಿವೇದಿ ಅವರ ನಿಧನ

ಅರವಿಂದ ತ್ರಿವೇದಿ

ಕರ್ಣಾವತಿ (ಗುಜರಾತ) – ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಿಂದಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ ನಟ ಅರವಿಂದ ತ್ರಿವೇದಿ ಇವರ ಅಕ್ಟೋಬರ 5 ರಂದು ಹೃದಾಯಾಘಾತದಿಂದ ತೀರಿಕೊಂಡರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, `ರಾಮಾಯಣ’ದಲ್ಲಿ ಶ್ರೀ ರಾಮನ ಪಾತ್ರದಾರಿ ಅರುಣ ಗೋವಿಲ, ಲಕ್ಷ್ಮಣ ಪಾತ್ರಧಾರಿ ಸುನಿಲ ಲಾಹಿರಿ ಮುಂತಾದವರು ಶೋಕ ವ್ಯಕ್ತಪಡಿಸುತ್ತ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ. ಅರವಿಂದ ತ್ರಿವೇದಿ ಭಾಜಪದಿಂದ ಲೋಕಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. ತ್ರಿವೇದಿ ಇವರು 300 ಕೂ ಹೆಚ್ಚಿನ ಹಿಂದಿ ಮತ್ತು ಗುಜರಾತಿ ಚಲನಚಿತ್ರಗಳಲ್ಲಿ ನಟಿಸಿದ್ದರು.