‘ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿರುವ ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟದ ದಿ. (ಸೌ.) ಪ್ರಮಿಳಾ ರಾಮದಾಸ ಕೇಸರಕರ (೬೬ ವರ್ಷ) ಇವರು ಕಳೆದ ೬ ವರ್ಷಗಳಿಂದ ಅರ್ಬುದ ರೋಗದಿಂದ ಬಳಲುತ್ತಿದ್ದರು. ಕಳೆದ ಕೆಲವು ತಿಂಗಳಿನಿಂದ ಅವರ ಈ ರೋಗವು ಇನ್ನೂ ಉಲ್ಬಣವಾಯಿತು; ಆದರೂ ಅಂತಹ ಸಮಯದಲ್ಲಿಯೂ ಅವರ ಆಂತರಿಕ ಸಾಧನೆಯು ಅಷ್ಟೇ ತೀವ್ರತೆಯಿಂದ ಹೆಚ್ಚಾಗುತ್ತಾ ಹೋಯಿತು. ಅವರ ಕೋಣೆಗೆ ಹೋದ ನಂತರ ‘ಒಳ್ಳೆಯದೆನಿಸುವುದು, ಅವರ ಮುಖಚಹರೆಯು ಆನಂದಮಯವಿರುವುದು’, ಈ ಸ್ಥೂಲದಲ್ಲಿನ ಲಕ್ಷಣಗಳಿಂದ ಅವರ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗಿರುವುದು ಎದ್ದು ಕಾಣುತ್ತಿತ್ತು. ೧೮.೧೦.೨೦೨೧ ರಂದು ರಾತ್ರಿ ೧೦.೩೦ ಗಂಟೆಗೆ ಅವರ ನಿಧನವಾಯಿತು. ಅನಂತರ ಮರುದಿನ ಬೆಳಗ್ಗೆ ೯ ಗಂಟೆಗಳವರೆಗೂ ‘ಅವರ ಮೃತದೇಹದ ಉಸಿರಾಟ ನಡೆಯುತ್ತಿದೆ’ ಎಂದು ಅರಿವಾಗುತ್ತಿತ್ತು. ಅವರ ಕೋಣೆಯಲ್ಲಿ ಒಳ್ಳೆಯದೆನಿಸುತ್ತಿತ್ತು. ಅವರ ಆಧ್ಯಾತ್ಮಿಕ ಸ್ತರದ ಒಂದು ವಿಶಿಷ್ಟ ಪ್ರತ್ಯೇಕತೆಯು ಗಮನಕ್ಕೆ ಬಂದಿರುವುದರಿಂದ ಸಂಶೋಧಕ ವೃತ್ತಿಯಿರುವ ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ಸ್ತರದಲ್ಲಿ ದಿ. (ಸೌ.) ಪ್ರಮಿಳಾ ಇವರ ಮೃತದೇಹದ ಸಂಶೋಧನೆಯನ್ನು ಮಾಡಿದರು.
* ದಿ. (ಸೌ.) ಪ್ರಮಿಳಾ ಕೇಸರಕರ ಇವರು ಶಾರೀರಿಕ (ದೈಹಿಕ) ತೊಂದರೆಗಳೊಂದಿಗೆ ಹೋರಾಡಿ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡರು. ಕಾಕೂರವರ ನಿಧನದ ನಂತರ ಅವರ ಮೃತದೇಹದ ಮಾಧ್ಯಮದಿಂದಲೂ ಅವರ ಪ್ರಗತಿಯು ಗಮನಕ್ಕೆ ಬರುತ್ತದೆ. ಇದರಿಂದ ಕಾಕೂರವರು ಎಲ್ಲ ಸಾಧಕರ ಮುಂದೆ ಒಂದು ಆದರ್ಶವನ್ನೆ ಇಟ್ಟಿದ್ದಾರೆ. – (ಪರಾತ್ಪರ ಗುರು) ಡಾ. ಆಠವಲೆ * ‘ಜೀವಮಾನವಿಡಿ ಅವರು ನಮ್ಮಿಂದ ಕಲಿತರು. ಈಗ ಅವರು ನಮಗೆ ಕಲಿಸುತ್ತಿದ್ದಾರೆ. ಯಾರು ಕೊಡದಿರುವ ಜ್ಞಾನವನ್ನು ಅವರು ನಮಗೆ ನೀಡಿದ್ದಾರೆ’. – (ಪರಾತ್ಪರ ಗುರು) ಡಾ. ಆಠವಲೆ * ‘ದಿ. (ಸೌ.) ಪ್ರಮಿಳಾ ಕೇಸರಕರ ಇವರ ಮೃತ್ಯುವಿನ ನಂತರ ೫ ತಿಂಗಳಲ್ಲಿ ಅವರ ಮಟ್ಟವು ಶೇ. ೭೦ ರಷ್ಟಾಗಿ ಅವರು ಸಂತರಾಗುತ್ತಾರೆ’. – (ಪರಾತ್ಪರ ಗುರು) ಡಾ. ಆಠವಲೆ (೨೦.೧೦.೨೦೨೧) |
ದಿ (ಸೌ.) ಕೇಸರಕರಕಾಕೂರವರ ಮೃತದೇಹದ ಮೇಲೆ ಪರಾತ್ಪರ ಗುರು ಡಾ. ಆಠವಲೆರವರು ಮಾಡಿದ ವಿವಿಧ ಪ್ರಯೋಗಗಳು, ಆ ಸಮಯದಲ್ಲಿ ಅರಿವಾದ ಅಂಶಗಳು ಮತ್ತು ಅವರು ಹೇಳಿದ ಅದರ ಹಿಂದಿನ ಶಾಸ್ತ್ರ !
ಪರಾತ್ಪರ ಗುರು ಡಾ. ಆಠವಲೆರವರು ದಿ. (ಸೌ.) ಕೇಸರಕರಕಾಕೂರವರ ಕೋಣೆಗೆ ಹೋದ ನಂತರ ಅವರಿಗೆ ಕಾಕೂರವರ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯವು ಗಮನಕ್ಕೆ ಬಂದಿತು. ಆಗ ಅವರು ವಿವಿಧ ಪ್ರಯೋಗಗಳನ್ನು ಮಾಡಿದರು.
೧ ಅ. ದಿ. (ಸೌ.) ಕೇಸರಕರಕಾಕೂರವರ ನೆತ್ತಿಯ ಮೇಲೆ (ತಲೆಯ ಮೇಲಿನ ಭಾಗದಲ್ಲಿ) ಕೈಯನ್ನು ಇಡುವುದು
ಮೊದಲು ಅವರು ಕಾಕೂರವರ ನೆತ್ತಿಯ ಮೇಲೆ (ತಲೆಯ ಮೇಲಿನ ಭಾಗದಲ್ಲಿ) ಕೈ ಇಟ್ಟು ಅಲ್ಲಿ ಅರಿವಾಗುವ ಸ್ಪಂದನಗಳ ಅಧ್ಯಯನವನ್ನು ಮಾಡಿದರು. ಆ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರಿಗೆ ತಮ್ಮ ಭಾವವು ಜಾಗೃತವಾಗಿದೆ ಎಂದು ಅರಿವಾಯಿತು; ಎಂದು ಅವರು ದಿ. (ಸೌ.) ಕೇಸರಕರರವರ ಪತಿ ನ್ಯಾಯವಾದಿ ರಾಮದಾಸ ಕೇಸರಕರ (೬೮ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೧) ಮತ್ತು ಸಾಧಕ ಶ್ರೀ. ಭಾನು ಪುರಾಣಿಕ (ಆಧ್ಯಾತ್ಮಿಕ ಮಟ್ಟ ಶೇ. ೬೩) ಇವರಿಗೂ ಆ ಪ್ರಯೋಗವನ್ನು ಮಾಡಲು ಹೇಳಿದರು. ಆ ಪ್ರಯೋಗವನ್ನು ಮಾಡಿದ ನಂತರ ನ್ಯಾಯವಾದಿ ಕೇಸರಕರ ಇವರಿಗೆ ಅವರ ಎದೆಯಲ್ಲಿ ಒಳ್ಳೆಯ ಸ್ಪಂದನಗಳ ಅರಿವಾಯಿತು ಮತ್ತು ಶ್ರೀ. ಭಾನು ಪುರಾಣಿಕ ಇವರಿಗೆ ಧ್ಯಾನಾವಸ್ಥೆಗೆ ಹೋದಂತೆ ಅನಿಸಿತು. ಈ ಪ್ರಯೋಗದಿಂದ ಕಾಕೂರವರ ಅದ್ವಿತೀಯತ್ವವು ಗಮನಕ್ಕೆ ಬಂದ ನಂತರ ಪರಾತ್ಪರ ಗುರು ಡಾಕ್ಟರರು ಇನ್ನೂ ಆಳವಾಗಿ ವಿವಿಧ ಪ್ರಯೋಗಗಳನ್ನು ಮಾಡಿದರು. ಈ ಪ್ರಯೋಗಗಳನ್ನು ಮಾಡುವಾಗ ನ್ಯಾಯವಾದಿ ಕೇಸರಕರ ಮತ್ತು ಶ್ರೀ. ಭಾನು ಪುರಾಣಿಕ ಇವರೊಂದಿಗೆ ಪರಾತ್ಪರ ಗುರು ಡಾಕ್ಟರರ ನಡುವೆ ಮುಂದಿನ ಸಂಭಾಷಣೆ ಆಯಿತು.
೧ ಆ. ದಿ. (ಸೌ.) ಕೇಸರಕರ ಇವರ ನೆತ್ತಿ, ನಂತರ ಎರಡು ಕೈಗಳು ಹಾಗೂ ಕೊನೆಗೆ ಪಾದಗಳ ಅಡಿಭಾಗಗಳನ್ನು ಸ್ಪರ್ಶಿಸುವುದು
ಪರಾತ್ಪರ ಗುರು ಡಾ. ಆಠವಲೆ : ಜೀವಂತವಿರುವಾಗ ಯಾರಾದರೊಬ್ಬ ವ್ಯಕ್ತಿಯಿಂದ ಇನ್ನೊಬ್ಬರ ಭಾವಜಾಗೃತವಾಗುವುದು ಕಠಿಣವಾಗಿರುತ್ತದೆ; ಆದರೆ ಕಾಕೂರವರ ಮೃತದೇಹದ ಕಡೆಗೆ ನೋಡಿದರೂ ಭಾವಜಾಗೃತವಾಗುತ್ತಿದೆ. ಇವರ ಸಂಪೂರ್ಣ ದೇಹವು ಭಾವದಿಂದ (ಭಾವದ ಸ್ಪಂದನಗಳಿಂದ) ತುಂಬಿಕೊಂಡಿದೆ. ಅವರ ಪಾದಗಳ ಅಡಿಭಾಗಗಳನ್ನು ಸ್ಪರ್ಶಿಸಿದಾಗ ಎಲ್ಲಕ್ಕಿಂತ ಹೆಚ್ಚು ಭಾವಜಾಗೃತವಾಗುತ್ತಿದೆ. (ನ್ಯಾಯವಾದಿ ರಾಮದಾಸ ಕೇಸರಕರ ಮತ್ತು ಶ್ರೀ. ಭಾನು ಪುರಾಣಿಕ ಇವರನ್ನು ಉದ್ದೇಶಿಸಿ) ನೀವು ‘ಕಾಕೂರವರ ತಲೆ, ಕೈ ಮತ್ತು ಪಾದಗಳ ಅಡಿಭಾಗಗಳನ್ನು ಸ್ಪರ್ಶಿಸಿ ಯಾವ ಅವಯವಗಳನ್ನು ಸ್ಪರ್ಶಿಸಿದಾಗ ಹೆಚ್ಚು ಭಾವ ಜಾಗೃತವಾಗುತ್ತದೆ ?, ಎಂದು ನೋಡಿರಿ ಮತ್ತು ಹೋಲಿಸಿ ನೋಡಿರಿ’ ಎಂದರು.
ನ್ಯಾಯವಾದಿ ರಾಮದಾಸ ಕೇಸರಕರ ಇವರು (ಮೊದಲು ಕಾಕೂ ರವರ ತಲೆ ಮತ್ತು ನಂತರ ಎರಡು ಕೈಗಳನ್ನು ಸ್ಪರ್ಶಿಸಿದ ನಂತರ) : ‘ಅವರು ಜೀವಂತವಾಗಿದ್ದಾರೆ. ಅವರ ಉಸಿರಾಟವು ನಡೆಯುತ್ತಿದೆ’ ಎಂದು ಅರಿವಾಗುತ್ತಿದೆ.
ಪರಾತ್ಪರ ಗುರು ಡಾ. ಆಠವಲೆ ಇವರು (ನ್ಯಾಯವಾದಿ ರಾಮದಾಸ ಕೇಸರಕರ ಇವರು ಕಾಕೂರವರ ಪಾದಗಳ ಅಡಿಭಾಗದಲ್ಲಿ ಸ್ಪರ್ಶ ಮಾಡಿದ ನಂತರ) : ಪಾದಗಳ ಅಡಿಭಾಗವನ್ನು ಸ್ಪರ್ಶಿಸಿದಾಗ ಎಲ್ಲಕ್ಕಿಂತ ಹೆಚ್ಚು ಭಾವಜಾಗೃತಿ ಆಗುತ್ತದೆ ಅಲ್ಲವೇ ?
ನ್ಯಾಯವಾದಿ ರಾಮದಾಸ ಕೇಸರಕರ : ಹೌದು.
ಪರಾತ್ಪರ ಗುರು ಡಾ. ಆಠವಲೆ : ಅವರ ಚರಣಗಳ ಮೇಲೆ ಯಾರು ತಲೆಬಾಗುವರೋ ಅವರೆಲ್ಲರ ಶುದ್ಧಿಯಾಗಲಿದೆ.
ಪರಾತ್ಪರ ಗುರು ಡಾ. ಆಠವಲೆ (ನ್ಯಾಯವಾದಿ ಕೇಸರಕರ ಇವರನ್ನು ಉದ್ದೇಶಿಸಿ) : ಇವರ ಆಧ್ಯಾತ್ಮಿಕ ಮಟ್ಟ ಎಷ್ಟಿತ್ತು ?
ನ್ಯಾಯವಾದಿ ರಾಮದಾಸ ಕೇಸರಕರ : ಶೇ. ೬೬ ರಷ್ಟಿದೆ !
ಪರಾತ್ಪರ ಗುರು ಡಾ. ಆಠವಲೆ : ಅಂದರೆ ಅವರು ಸಂತತ್ವದ ಸಮೀಪದಲ್ಲಿ ಬಂದಿದ್ದರು !
ಶ್ರೀ. ಭಾನು ಪುರಾಣಿಕ : ಪಾದಗಳ ಅಡಿಭಾಗದಲ್ಲಿ ಸ್ಪರ್ಶಿಸಿದಾಗ ಎಲ್ಲಕ್ಕಿಂತ ಹೆಚ್ಚು ಭಾವಜಾಗೃತವಾಗುತ್ತದೆ.
೧ ಇ. ದಿ. (ಸೌ.) ಕೇಸರಕರ ಇವರ ಕಾಲುಗಳ ಪಕ್ಕದಲ್ಲಿ ನಿಂತು ಅವರ ತಲೆಯಿಂದ ಹಿಡಿದು ಕಾಲಿನವರೆಗೆ ದೃಷ್ಟಿ ಹಾಯಿಸುವುದು
ಪರಾತ್ಪರ ಗುರು ಡಾ. ಆಠವಲೆಯವರು (ನ್ಯಾಯವಾದಿ ರಾಮದಾಸ ಕೇಸರಕರ ಮತ್ತು ಶ್ರೀ. ಭಾನು ಪುರಾಣಿಕ ಇವರನ್ನು ಉದ್ದೇಶಿಸಿ) : ಅವರ ಕಾಲುಗಳ ಹತ್ತಿರ ನಿಂತು ಅವರ ತಲೆಯಿಂದ ಕಾಲಿನ ವರೆಗೆ ದೃಷ್ಟಿ ಹಾಯಿಸಿರಿ ಮತ್ತು ಏನು ಅರಿವಾಗುತ್ತದೆ ?’, ಎಂಬುದನ್ನು ನೋಡಿರಿ.
ನ್ಯಾಯವಾದಿ ರಾಮದಾಸ ಕೇಸರಕರ : ಅವರ ತಲೆಯ ಮೇಲಿಂದ ಹಿಡಿದು ಕಾಲಿನವರೆಗೆ ಚೈತನ್ಯದ ಅರಿವಾಗುತ್ತದೆ. ಕಾಲುಗಳ ಕಡೆಗೆ ಹೆಚ್ಚು ಚೈತನ್ಯವು ಅರಿವಾಗುತ್ತದೆ ಮತ್ತು ‘ಅವರು ಜೀವಂತವಾಗಿದ್ದಾರೆ’ ಎಂದು ಅರಿವಾಗುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರು : ಹೌದು. ಕಾಲಿನ ಕಡೆಗೆ ಹೆಚ್ಚು ಚೈತನ್ಯದ ಅರಿವಾಗುತ್ತದೆ. ಈಗ ‘ಚರಣಗಳಿಗೆ ನಮಸ್ಕಾರವನ್ನು ಏಕೆ ಮಾಡುತ್ತಾರೆ ?’ ಎಂದು ತಿಳಿಯಿತಲ್ಲವೇ ? ಭಾನು, ನೀನು ಸಹ ನೋಡು.
ಶ್ರೀ. ಭಾನು ಪುರಾಣಿಕ : ಕಾಲಿನ ಕಡೆಗೆ ದೃಷ್ಟಿ ಹಾಯಿಸಿದೊಡನೆ, ತುಂಬಾ ಭಾವಜಾಗೃತವಾಗಿ ಮೈಯೆಲ್ಲ ರೋಮಾಂಚನವಾಗುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ಹೌದು. ಪುನಃ ಪುನಃ ಇದೇ ಸಿದ್ಧವಾಗುತ್ತದೆ. ಸಂತರ ಸಮಾಧಿಗಳಿರುವಲ್ಲಿ, ನಾವು ಅವರ ಚರಣಗಳ ಮೇಲೆ ತಲೆ ಇಡುತ್ತೇವೆ. ಅದರ ಕಾರಣ ಈಗ ಗಮನಕ್ಕೆ ಬಂತು.
೧ ಈ. ದಿ. (ಸೌ.) ಕೇಸರಕರ ಇವರ ಕಣ್ಣುಗಳ ಕಡೆಗೆ ನೋಡುವುದು
ಪರಾತ್ಪರ ಗುರು ಡಾ. ಆಠವಲೆ : ಅವರ ಬಲಗಣ್ಣು ತೆರೆದಿದೆ ಮತ್ತು ಎಡಗಣ್ಣು ಸ್ವಲ್ಪ ತೆರೆದಿದೆ. ಅವರ ಕಣ್ಣುಗಳ ಕಡೆಗೆ ತುಂಬಾ ಸಮಯ ನೋಡಲು ಆಗುವುದಿಲ್ಲ, ತಕ್ಷಣ ಭಾವಜಾಗೃತವಾಗುತ್ತದೆ. ನೀವೂ ನೋಡಿರಿ.
ನ್ಯಾಯವಾದಿ ರಾಮದಾಸ ಕೇಸರಕರ ಮತ್ತು ಶ್ರೀ. ಭಾನು ಪುರಾಣಿಕ (ಕಾಕೂರವರ ಕಣ್ಣುಗಳ ಕಡೆಗೆ ನೋಡಿ) : ನಮ್ಮ ಭಾವಜಾಗೃತವಾಯಿತು.
೧ ಉ. ದಿ. (ಸೌ.) ಕೇಸರಕರ ಇವರ ಮೃತದೇಹಕ್ಕೆ ಪ್ರದಕ್ಷಿಣೆ ಹಾಕುವುದು.
ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ಮೃತದೇಹಕ್ಕೆ ಒಂದು ಪ್ರದಕ್ಷಿಣೆಯನ್ನು ಹಾಕಿದರು.
ಪರಾತ್ಪರ ಗುರು ಡಾ. ಆಠವಲೆ : ‘ಮೃತದೇಹಕ್ಕೆ ಪ್ರದಕ್ಷಿಣೆಯನ್ನು ಹಾಕುವಾಗ ತಲೆ ಮತ್ತು ಕಾಲುಗಳ ಬದಿಗೆ ಏನು ಅರಿವಾಗುತ್ತದೆ ?’ ಎಂದು ನೋಡಿರಿ.
ನ್ಯಾಯವಾದಿ ರಾಮದಾಸ ಕೇಸರಕರ ಇವರು (ಪ್ರದಕ್ಷಿಣೆಯನ್ನು ಹಾಕಿದನಂತರ) : ದೇವಸ್ಥಾನದಲ್ಲಿ ದೇವತೆಯ ಮೂರ್ತಿಗೆ ಪ್ರದಕ್ಷಿಣೆಯನ್ನು ಹಾಕುವಾಗ ಹೇಗೆ ಭಾವಜಾಗೃತವಾಗುತ್ತದೋ, ಹಾಗೆ ಅರಿವಾಯಿತು.
ಪರಾತ್ಪರ ಗುರು ಡಾ. ಆಠವಲೆ : ತಲೆಯ ಕಡೆಗೆ ಹೋದ ನಂತರ ಹೇಗನಿಸಿತು ಮತ್ತು ಕಾಲುಗಳ ಕಡೆಗೆ ಹೋದ ನಂತರ ಹೇಗನಿಸಿತು ?
ನ್ಯಾಯವಾದಿ ರಾಮದಾಸ ಕೇಸರಕರ : ತಲೆಯ ಕಡೆಗೆ ಹೋದ ನಂತರ ಸ್ವಲ್ಪ ಮತ್ತು ಕಾಲುಗಳ ಕಡೆಗೆ ಬಂದ ನಂತರ ಹೆಚ್ಚು ಭಾವಜಾಗೃತವಾಯಿತು.
ಶ್ರೀ. ಭಾನು ಪುರಾಣಿಕ : ಪ್ರದಕ್ಷಿಣೆಯನ್ನು ಹಾಕುವಾಗ ಕಾಕೂ ರವರ ತಲೆಯ ಕಡೆಗೆ ಹೋಗುವಾಗ ಸಹಸ್ರಾರಚಕ್ರದ ಮೇಲೆ ಸಂವೇದನೆಗಳ ಅರಿವಾಗುತ್ತವೆ, ಅವರ ಕಾಲುಗಳ ಕಡೆಗೆ ಬರುವಾಗ ಅನಾಹತಚಕ್ರದ ಮೇಲೆ ಸಂವೇದನೆಗಳ ಅರಿವಾಯಿತು.
೧ ಊ. ದಿ. (ಸೌ.) ಕೇಸರಕರ ಇವರ ತಲೆಯಿಂದ ಹಿಡಿದು ಕಾಲುಗಳ ವರೆಗೆ ಮತ್ತು ಕಾಲುಗಳಿಂದ ತಲೆಯವರೆಗೆ ದೃಷ್ಟಿ ಹಾಯಿಸುವುದು
ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ತಲೆಯಿಂದ ಹಿಡಿದು ಕಾಲುಗಳ ವರೆಗೆ ಮತ್ತು ಕಾಲುಗಳಿಂದ ಹಿಡಿದು ತಲೆಯ ವರೆಗೆ ದೃಷ್ಟಿಯನ್ನು ಹಾಯಿಸಿದರು.
ಪರಾತ್ಪರ ಗುರು ಡಾ. ಆಠವಲೆ : ಅವರ ಪ್ರಾಣವು ಸಹಸ್ರಾರಚಕ್ರದಿಂದ ಹೊರಗೆ ಬಿದ್ದಿದೆ; ಆದರೆ ಅವರ ಕಾಲುಗಳಿಂದ ಸ್ವಲ್ಪ ಚೈತನ್ಯವು ಬರುತ್ತಿದೆ. ನೀವು ತಲೆಯಿಂದ ಹಿಡಿದು ಕಾಲುಗಳ ವರೆಗೆ ಮತ್ತು ಕಾಲುಗಳಿಂದ ಹಿಡಿದು ತಲೆಯವರೆಗೆ ದೃಷ್ಟಿಯನ್ನು ಹಾಯಿಸಿರಿ ಮತ್ತು ‘ಎಲ್ಲಿ ಏನು ಅರಿವಾಗುತ್ತದೆ ?’ ಎಂಬುದನ್ನು ನೋಡಿರಿ.
ನ್ಯಾಯವಾದಿ ರಾಮದಾಸ ಕೇಸರಕರ : ಚರಣಗಳಿಂದ ಹಿಡಿದು ತಲೆಯ ಕಡೆಗೆ ಚೈತನ್ಯವು ಬರುತ್ತಿದೆ, ಎಂದು ಅರಿವಾಯಿತು. ಈ ಮೊದಲು ನೋಡುವಾಗ ಇದಕ್ಕೆ ವಿರುದ್ಧವಾಗಿ ಅರಿವಾಗಿತ್ತು.
ಪರಾತ್ಪರ ಗುರು ಡಾ. ಆಠವಲೆ : ಕಾಕೂರವರ ಪ್ರಾಣವು ಸಹಸ್ರಾರಚಕ್ರದಿಂದ ಹೊರಗೆ ಬಿದ್ದು ಉಚ್ಚ ಲೋಕಕ್ಕೆ ಹೋಯಿತು. ಅವರ ಅಂತಿಮದರ್ಶನವನ್ನು ಪಡೆಯಲು ಬರುವವರು ಅವರ ಕಾಲುಗಳ ಬದಿಗೆ ನಿಂತು ದರ್ಶನವನ್ನು ಪಡೆಯಲಿ. ಅವರಿಗಾಗಿ ಕಾಲುಗಳಿಂದ ಚೈತನ್ಯವು ಪ್ರಕ್ಷೇಪಿತವಾಗುತ್ತಿದೆ.
ಪರಾತ್ಪರ ಗುರು ಡಾ. ಆಠವಲೆ : ಇದರಿಂದಲೇ ‘ಸಂತರ ಸಮಾಧಿಯನ್ನು ಏಕೆ ಕಟ್ಟುತ್ತಾರೆ ?’, ಎಂದು ತಿಳಿಯುತ್ತದೆ. ನಾವು ಸಂತರ ಸಮಾಧಿಯ ಮೇಲೆ ಅವರ ಚರಣಗಳ ಜಾಗದಲ್ಲಿ ತಲೆ ಇಡುತ್ತೇವೆ; ಏಕೆಂದರೆ ಅವರ ಚರಣಗಳಿಂದ ಸತತವಾಗಿ ಚೈತನ್ಯವು ಪ್ರಕ್ಷೇಪಿತವಾಗುತ್ತಿರುತ್ತದೆ ಮತ್ತು ಅದು ಎಲ್ಲರಿಗೂ ಸಿಗುತ್ತದೆ. ಕಾಕೂರವರು ತುಂಬಾ ಆಶ್ಚರ್ಯವುಂಟು ಮಾಡಿದ್ದಾರೆ.
೧ ಎ. ದಿ. (ಸೌ.) ಕೇಸರಕರ ಇವರ ವಿವಿಧ ಅವಯವಗಳಲ್ಲಿ ಚಲನವಲನ ಕಾಣಿಸುವುದು
೧ ಎ ೧. ಮುಖಚಹರೆ – ಪರಾತ್ಪರ ಗುರು ಡಾ. ಆಠವಲೆ (ಕಾಕೂ ರವರ ಮುಖಚಹರೆಯನ್ನು ನೋಡುತ್ತ) : ಅವರ ಗದ್ದದ ಭಾಗವು ಅಲುಗಾಡುತ್ತಿದೆ ನಿಮಗೆ ಕಾಣಿಸುತ್ತಿದೆಯೇ?
ನ್ಯಾಯವಾದಿ ರಾಮದಾಸ ಕೇಸರಕರ ಮತ್ತು ಶ್ರೀ. ಭಾನು ಪುರಾಣಿಕ : ಹೌದು.
ನ್ಯಾಯವಾದಿ ರಾಮದಾಸ ಕೇಸರಕರ : ಅವರು ಜೀವಂತವಾಗಿದ್ದಾರೆ ಎನಿಸುತ್ತದೆ. ‘ಮಲಗಿದ್ದಾರೆ’ ಎಂದೆನಿಸುತ್ತದೆ; ಆದರೆ ‘ಮುಖಚಹರೆಯ ಚಲನವಲನವಾಗುತ್ತಿದೆ,’ ಎಂಬುದು ಅರಿವಾಗುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ಹೌದು.
ಪರಾತ್ಪರ ಗುರು ಡಾ. ಆಠವಲೆಯವರು (ಕಾಕೂರವರ ತಲೆಯ ಮೇಲೆ ಕೈ ಇಟ್ಟು) : ಕಾಕೂರವರ ತಲೆಯ ಹತ್ತಿರ ಲಹರಿಗಳ ಅರಿವಾಗುತ್ತಿವೆ. ತುಟಿ ಮತ್ತು ಹಲ್ಲುಗಳಿಂದಲೂ ಅವರ ಚಲನವಲನಗಳು ಗಮನಕ್ಕೆ ಬರುತ್ತದೆ. ಅವರ ಕಣ್ಣುಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಚಲನಚಲನದ ಅರಿವಾಗುತ್ತದೆ.
೧ ಎ ೨. ಕುತ್ತಿಗೆ
ಪರಾತ್ಪರ ಗುರು ಡಾ. ಆಠವಲೆ (ಕಾಕೂರವರ ಎದೆಯ ಮೇಲೆ ಕೈ ಇಟ್ಟು) : ಅವರ ಕುತ್ತಿಗೆಯೂ ಅಲುಗಾಡುತ್ತಿರುವುದರ ಅರಿವಾಗುತ್ತದೆ.
೧ ಎ ೩. ಎದೆ ಮತ್ತು ಕೈ
ಪರಾತ್ಪರ ಗುರು ಡಾ. ಆಠವಲೆ (ಕಾಕೂರವರ ತಲೆಯ ಮೇಲೆ ಕೈ ಇಟ್ಟು) : ‘ಅವರ ಉಸಿರಾಟವು ವೇಗವಾಗಿ ನಡೆಯುತ್ತಿದೆ. ಅವರ ಕೈ ಅಲುಗಾಡುತ್ತಿದೆ’, ಎಂದು ಅರಿವಾಗುತ್ತಿದೆ.
೧ ಎ ೪. ಹೊಟ್ಟೆ
ಪರಾತ್ಪರ ಗುರು ಡಾ. ಆಠವಲೆಯವರು (ತಮ್ಮ ಕೈಗಳ ಬೆರಳುಗಳನ್ನು ಕಾಕೂರವರ ಎದೆಯ ದಿಶೆಗೆ ತೋರಿಸುತ್ತಾ) : ‘ಹೊಟ್ಟೆಯ ಭಾಗವು ಮೇಲೆ-ಕೆಳಗೆ ಆಗುತ್ತಿದೆ’, ಎಂದು ಅರಿವಾಗುತ್ತಿದೆ. ಪುನಃ ಒಮ್ಮೆ ನೋಡಿ. ಹೊಟ್ಟೆ ಅಲುಗಾಡುತ್ತಿದೆಯೇ ನೋಡಿ!
ನ್ಯಾಯವಾದಿ ರಾಮದಾಸ ಕೇಸರಕರ ಮತ್ತು ಶ್ರೀ. ಭಾನು ಪುರಾಣಿಕ : ‘ಕಾಕೂರವರ ಕುತ್ತಿಗೆಯ ಚಲನವಲನ ಆಗುತ್ತಿದೆ’, ಎಂದು ಅರಿವಾಗುತ್ತದೆ. ‘ಹೊಟ್ಟೆಯ ಭಾಗವು ಹೆಚ್ಚು ಪ್ರಮಾಣದಲ್ಲಿ ಅಲುಗಾಡುತ್ತಿದೆ’, ಎಂದು ಅರಿವಾಗುತ್ತದೆ.
ತುಳಸಿಗಿಡದ ಬಗ್ಗೆ ದಿ. (ಸೌ.) ಕೇಸರಕರ ಇವರಿಗಿದ್ದ ಭಾವ !
ನ್ಯಾಯವಾದಿ ರಾಮದಾಸ ಕೇಸರಕರ ಇವರು ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೋಣೆಯಲ್ಲಿನ ತುಳಸಿಗಿಡದ ಸಸಿಯನ್ನು (ವನಸ್ಪತಿಯನ್ನು) ತೋರಿಸಿದರು.
ನ್ಯಾಯವಾದಿ ರಾಮದಾಸ ಕೇಸರಕರ : ಕಾಕೂ ಈ ತುಳಸಿಗಿಡಕ್ಕೆ ಪ್ರತಿದಿನ ನೀರು ಹಾಕುತ್ತಿದ್ದರು. ಕಾಕೂವಿಗೆ ತುಳಸಿಗಿಡದ ಬಗ್ಗೆ ತುಂಬಾ ಆತ್ಮೀಯತೆ ಎನಿಸುತ್ತಿತ್ತು. ಅವರಿಗೆ ಅದರ ಬಗ್ಗೆ ತುಂಬಾ ಭಾವ ಇತ್ತು. ಅವರು ತುಳಸಿಗಿಡವನ್ನು ಚಿಕ್ಕ ಮಗುವಿನಂತೆ ಕಾಳಜಿ ವಹಿಸುತ್ತಿದ್ದರು. ಪರಾತ್ಪರ ಗುರು ಡಾ. ಆಠವಲೆಯವರು ಆ ತುಳಸಿಗಿಡಕ್ಕೆ ಭಾವಪೂರ್ಣವಾಗಿ ನಮಸ್ಕಾರ ಮಾಡಿದರು.
೩ ಕೈ. (ಸೌ.) ಕೇಸರಕರ ಇವರು ತಮ್ಮ ಜನ್ಮವನ್ನು ಸಾರ್ಥಕಗೊಳಿಸಿದ್ದು ಅವರು ಶೀಘ್ರದಲ್ಲಿ ಸಂತರಾಗುವರು ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದು
ಪರಾತ್ಪರ ಗುರು ಡಾ. ಆಠವಲೆಯವರು (ಕಾಕೂರವರ ಮೃತದೇಹಕ್ಕೆ ನಮಸ್ಕಾರ ಮಾಡಿ) : ಕಾಕೂ, ಈಗ ಬರುತ್ತೇನೆ !
(ಸ್ವಲ್ಪ ಹೊತ್ತಿನ ನಂತರ) ಅರೇ ಬಾಪರೇ ! ಇವರ ಕಣ್ಣುಗಳಲ್ಲಿ ನಾನು ಮಾತನಾಡುವ ಮೊದಲು ಮತ್ತು ಮಾತನಾಡಿದ ನಂತರ ವ್ಯತ್ಯಾಸವಿದೆ. ನಾನು ಮಾತನಾಡಿದ ನಂತರ ಇವರ ಕಣ್ಣುಗಳಲ್ಲಿ ಹೆಚ್ಚು ಭಾವದ ಅರಿವಾಗುತ್ತಿದೆ.
ಪರಾತ್ಪರ ಗುರು ಡಾ. ಆಠವಲೆಯವರು (ನ್ಯಾಯವಾದಿ ರಾಮದಾಸ ಕೇಸರಕರ ಇವರನ್ನು ಉದ್ದೇಶಿಸಿ) : ಅವರ ಮುಂದಿನ ಸಾಧನೆಯು ನಡೆಯುತ್ತಲೇ ಇರುವುದು.
ಪರಾತ್ಪರ ಗುರು ಡಾ. ಆಠವಲೆಯವರು (ಕಾಕೂರವರ ಮೃತದೇಹಕ್ಕೆ ನಮಸ್ಕಾರ ಮಾಡಿ) : ‘ಕಾಕೂ, ನೀವು ಈ ಜನ್ಮವನ್ನು ಸಾರ್ಥಕಗೊಳಿಸಿದಿರಿ ! ಈಗ ಇದೇ ರೀತಿ ಎಲ್ಲರ ಮೇಲೆ ಗಮನವಿರಲಿ ಮತ್ತು ಎಲ್ಲರಿಗೂ ಸಾಧನೆಯಲ್ಲಿ ಸಹಾಯ ಮಾಡಿರಿ. ನಿಮ್ಮ ವ್ಯಷ್ಟಿ ಸಾಧನೆಯು ಪೂರ್ತಿಯಾಯಿತು. ಈಗ ನಿಮಗೆ ಸಮಷ್ಟಿ ಸಾಧನೆಯನ್ನು ಮಾಡಬೇಕಾಗಿದೆ. ಬರಲಾ? ಬರುತ್ತೇನೆ, ನಮಸ್ಕಾರ !’
ದಿ. (ಸೌ.) ಪ್ರಮಿಳಾ ಕೇಸರಕರ ಇವರ ಬಗ್ಗೆ ಗಮನದಲ್ಲಿ ಬಂದ ಅದ್ವಿತೀಯ ವೈಶಿಷ್ಟ್ಯಗಳು
ಸ್ಥೂಲದೇಹದ ಸಂದರ್ಭದಲ್ಲಿ
ಅ. ‘ಸಾಮಾನ್ಯವಾಗಿ ವ್ಯಕ್ತಿಯು ಮರಣ ಹೊಂದಿದ ನಂತರ ತಕ್ಷಣ ಅವನ ಕೈ-ಕಾಲುಗಳು ಗಟ್ಟಿಯಾಗುತ್ತವೆ. ಅವುಗಳನ್ನು ಅಲುಗಾಡಿಸಲು ಕಠಿಣವಾಗುತ್ತದೆ. ಕೈ. (ಸೌ.) ಕೇಸರಕರಕಾಕೂರವರ ನಿಧನವಾಗಿ ೧೦ ಗಂಟೆಗಳ ನಂತರವೂ ಅವರ ಕೈ-ಕಾಲುಗಳನ್ನು ಸಹಜವಾಗಿ ಅಲುಗಾಡಿಸಲು ಬರುತ್ತಿತ್ತು.
ಆ. ಅವರ ತ್ವಚೆಯು ಕೆಲವು ಜಾಗದಲ್ಲಿ ಹಳದಿಯಾಗಿತ್ತು.
ಇ. ‘ಅವರ ತುಟಿ ಮತ್ತು ಕಣ್ಣುಗಳು ಸ್ವಲ್ಪ ಅಲುಗಾಡುತ್ತಿವೆ, ಹಾಗೆಯೇ ಅವರ ಉಸಿರಾಟವು ನಡೆಯುತ್ತಿದೆ’, ಎಂದು ಅರಿವಾಗುತ್ತಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಕೈಯನ್ನು ಕಾಕೂರವರ ಅನಾಹತಚಕ್ರದ ಹತ್ತಿರ, ಹಾಗೆಯೇ ಕಾಲಿನ ಕಡೆಗೆ ಇಡುತ್ತಿರುವಾಗ ಈ ಚಲನವಲನಗಳು ಹೆಚ್ಚು ಪ್ರಮಾಣದಲ್ಲಿ ಆಗುತ್ತಿರುವುದರ ಅರಿವಾಯಿತು.
೨. ಪರಾತ್ಪರ ಗುರು ಡಾ. ಆಠವಲೆಯವರ ಮಾತಿಗೆ ಸ್ಪಂದಿಸುತ್ತಿರುವರೆಂದು ಅರಿವಾಗುವುದು
ಅ. ಕಾಕೂರವರ ಕಣ್ಣುಗಳು ಸ್ವಲ್ಪ ತೆರೆದಿದ್ದವು. ಪರಾತ್ಪರ ಗುರು ಡಾ. ಆಠವಲೆರವರು ‘ಕಣ್ಣು ಮುಚ್ಚಿರಿ’, ಎಂದು ಕಾಕೂರವರಿಗೆ ಹೇಳಿದರು. ಸ್ವಲ್ಪ ಸಮಯದ ನಂತರ ಕಾಕೂರವರ ಕಣ್ಣುಗಳು ತುಂಬಾ ಪ್ರಮಾಣದಲ್ಲಿ ಮುಚ್ಚಿರುವುದು ಗಮನಕ್ಕೆ ಬಂದಿತು. ಈ ಸ್ಪಂದನದ ಮೇಲಿಂದ ‘ಕಾಕೂರವರಿಗೆ ಮಾತನಾಡುವುದು ತಿಳಿಯುತ್ತಿದೆ’, ಎಂದು ಗಮನಕ್ಕೆ ಬಂದಿತು.
ಆ. ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ಮೃತದೇಹದ ದರ್ಶನವನ್ನು ತೆಗೆದುಕೊಂಡು ಹೋಗುವಾಗ ‘ಕಾಕೂ, ನಾನೀಗ ಬರುತ್ತೇನೆ !’, ಎಂದು ಹೇಳಿದ ನಂತರ ಕಾಕುರವರ ಕಣ್ಣುಗಳಲ್ಲಿ ಮೊದಲಿನ ತುಲನೆಗಿಂತ ಹೆಚ್ಚು ಭಾವ ಇರುವುದು ಅರಿವಾಗತೊಡಗಿತು.
‘ಕಾಕೂರವರ ಕೋಣೆಯಲ್ಲಿ ಒಂದು ಕುಂಡದಲ್ಲಿ ತುಳಸಿಗಿಡವನ್ನು ನೆಟ್ಟಿದ್ದರು. ಆ ತುಳಸಿಗಿಡದ ಕಡೆಗೆ ನೋಡಿದರೂ ಭಾವಜಾಗೃತಿ ಆಗುತ್ತದೆ’.
– ನ್ಯಾಯವಾದಿ ರಾಮದಾಸ ಕೇಸರಕರ, ಸನಾತನ ಸಂಸ್ಥೆಯ ನ್ಯಾಯಾಂಗದ ಗೌರವಾನ್ವಿತ ಸಲಹೆಗಾರರು (ಆಧ್ಯಾತ್ಮಿಕ ಮಟ್ಟ ಶೇ. ೬೧), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೧೦.೨೦೨೧)
‘ಯಾವುದೇ ವಿಚಾರವು ನಮ್ಮದಾಗಿರುವುದಿಲ್ಲ, ಅದನ್ನು ದೇವರೇ ಕೊಡುತ್ತಿರುತ್ತಾನೆ’, ಎಂಬ ಒಂದು ಉದಾಹರಣೆಯೆಂದರೆ (ಪರಾತ್ಪರ ಗುರು) ಡಾ. ಆಠವಲೆ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಈ ಇಬ್ಬರೂ ದಿ.(ಸೌ.) ಪ್ರಮಿಳಾ ಕೇಸರಕರ ಇವರು ದೇಹತ್ಯಾಗ ಮಾಡಿದ ನಂತರ ಅವರ ದೇಹದ ಸೂಕ್ಷ್ಮ ಪರೀಕ್ಷಣೆ ಮಾಡುವುದು !ಸದ್ಗುರು (ಡಾ.) ಮುಕುಲ ಗಾಡಗೀಳದಿ. (ಸೌ.) ಪ್ರಮಿಳಾ ಕೇಸರಕರ ಇವರು ದೇಹತ್ಯಾಗ ಮಾಡಿದ ನಂತರ ನಾನು ಅವರ ಮೃತ ದೇಹದ ದರ್ಶನವನ್ನು ಪಡೆಯಲು ಹೋದೆನು. ಆ ಸಮಯದಲ್ಲಿ ನನಗೆ ಅವರ ದೇಹದಿಂದ ಪ್ರಕ್ಷೇಪಿತವಾಗುತ್ತಿರುವ ಚೈತನ್ಯದ ಅರಿವಾಯಿತು ಮತ್ತು ‘ಅವರ ಶರೀರದಿಂದ ಯಾವ ಭಾಗದಿಂದ ಎಂತಹ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಹೊರಗೆ ಬೀಳುತ್ತವೆ ?’, ಎಂಬುದರ ವಿವಿಧ ಪ್ರಯೋಗಗಳನ್ನು ಮಾಡಿ ನಾನು ಅಧ್ಯಯನವನ್ನು ಮಾಡಿದೆನು. ಅನಂತರ ಹಿಂದಿನ ದಿನ ರಾತ್ರಿ ಸದ್ಗುರು ಡಾ.ಮುಕುಲ ಗಾಡಗೀಳ ಇವರು ಸಹ ಇದೇ ರೀತಿ ಅಧ್ಯಯನವನ್ನು ಮಾಡಿರುವರೆಂದು ತಿಳಿಯಿತು, ಅಂದರೆ ‘ದಿ. (ಸೌ.) ಪ್ರಮಿಳಾ ಕೇಸರಕರ ಇವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯದ ಅಧ್ಯಯನವನ್ನು ಮಾಡಬೇಕು’, ಎಂಬ ವಿಚಾರವು ಈಶ್ವರನದ್ದಾಗಿತ್ತು. ನಾನು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇಬ್ಬರೂ ಅದನ್ನು ಗ್ರಹಿಸಿ ಆಚರಣೆಯಲ್ಲಿ ತಂದಿದ್ದೆವು’. – (ಪರಾತ್ಪರ ಗುರು) ಡಾ. ಆಠವಲೆ (೧೯.೧೦.೨೦೨೧) |
ಸೌ. ಪ್ರಮಿಳಾ ಕೇಸರಕರ ಇವರ ನಿಧನವಾದ ನಂತರ ಅವರ ದರ್ಶನದ ಸಮಯದಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಬಂದ ಅನುಭೂತಿಗಳು
‘೧೮.೧೦.೨೦೨೧ ರಂದು ರಾತ್ರಿ ಹತ್ತುವರೆ ಗಂಟೆಗೆ ಸೌ. ಪ್ರಮಿಳಾ ಕೇಸರಕರ (ವಯಸ್ಸು ೬೬) ಇವರು ಆಶ್ರಮದಲ್ಲಿ ನಿಧನರಾಗಿದ್ದಾರೆಂದು ತಿಳಿಯಿತು. ನಾನು ಅವರ ದರ್ಶನವನ್ನು ತೆಗೆದುಕೊಳ್ಳಲು ಹೋದೆನು. ಅವರನ್ನು ನೋಡಿದ ನಂತರ ನನಗೆ ಮುಂದಿನ ಅನುಭೂತಿಗಳು ಬಂದವು’.
೧. ಸೌ. ಕೇಸರಕರಕಾಕೂರವರಲ್ಲಿದ್ದ ಚೈತನ್ಯದಿಂದಾದ ಪರಿಣಾಮ
ಅ. ಅವರ ಮುಖವು ಚೈತನ್ಯದಿಂದ ಹಳದಿಯಾಗಿತ್ತು, ಹಾಗೆಯೇ ಅವರ ಕೈಗಳ ಅಂಗೈ ಸಹ ಹಳದಿಮಿಶ್ರಿತ ಕಾಣಿಸುತ್ತಿತ್ತು.
ಆ. ಅವರ ಕೈಯಲ್ಲಿನ ಉಗುರುಗಳಿಗೆ ಹೊಳಪು ಇತ್ತು, ಹಾಗೆಯೇ ಅವರ ಉಗುರುಗಳು ಗುಲಾಬಿಯಾಗಿ ಕಾಣಿಸುತ್ತಿದ್ದವು.
ಇ. ೧೪.೧೦.೨೦೨೧ ರಂದು ಅವರ ಪತಿ ನ್ಯಾಯವಾದಿ ರಾಮದಾಸ ಕೇಸರಕರಕಾಕಾರವರು ಓರ್ವ ಸಾಧಕಿಗೆ, ‘ಕೇಸರಕರಕಾಕೂರವರು ಆಹಾರ ಮತ್ತು ನೀರು ಸೇವನೆ ಎರಡನ್ನು ನಿಲ್ಲಿಸಿದ್ದಾರೆ’, ಎಂದು ಹೇಳಿದರು. ಇದನ್ನು ಕೇಳಿ ‘ಕಾಕೂರವರ ಮರಣವು ಹತ್ತಿರ ಬಂದಿದೆ’, ಎಂದು ನನಗೆ ಎನಿಸಿತು. ಆದುದರಿಂದ ನಾನು ‘ಅವರ ಪ್ರಾಣವು ಎಲ್ಲಿಯವರೆಗೆ ಬಂದಿದೆ ?’, ಎಂದು ನೋಡಿದೆನು, ಆಗ ನನಗೆ ಅದು ಅವರ ಕಂಠದವರೆಗೆ ಬಂದಿರುವುದರ ಅರಿವಾಯಿತು. ಯಾವುದಾದರೊಬ್ಬ ವ್ಯಕ್ತಿಯ ಪ್ರಾಣವು ಕಂಠದವರೆಗೆ ಬಂದಿದ್ದರೆ ಆ ವ್ಯಕ್ತಿಯು ಕೇವಲ ೪-೫ ಗಂಟೆಗಳ ವರೆಗೆಯೇ ಬದುಕುತ್ತಾನೆ, ಎಂಬ ನನ್ನ ಅನುಭವವಾಗಿದೆ; ಆದರೆ ಕೇಸರಕಾಕೂರವರ ನಿಧನವು ೪ ದಿನಗಳ ನಂತರ ಆಯಿತು. ಇದರಿಂದ ‘ಇಷ್ಟೊಂದು ದಿನ ಆವರು ಚೈತನ್ಯದಲ್ಲಿಯೇ ಬದುಕಿದ್ದರು’, ಎಂದು ನನ್ನ ಗಮನಕ್ಕೆ ಬಂದಿತು.
ಈ. ಕೇಸರಕರಕಾಕಾರವರಿಗೆ ಮೇಲಿನ ಅಂಶಗಳನ್ನು ಹೇಳಿದ ನಂತರ ಅವರು, “ಕಾಕೂರವರು ನಿಜವಾಗಿಯೂ ೭.೧೦.೨೦೨೧ ಈ ದಿನದಿಂದಲೇ ಆಹಾರ-ನೀರನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇವಿಸುತ್ತಿದ್ದರು. ಅವರು ದಿನವಿಡಿ ಕೇವಲ ೨-೩ ಚಮಚಗಳಷ್ಟೇ ಆಹಾರವನ್ನು ಸೇವಿಸುತ್ತಿದ್ದರು”, ಎಂದು ಹೇಳಿದರು. ಇದರಿಂದ, ‘ಕಾಕೂರವರು ಕಳೆದ ೧೦ ದಿನಗಳಿಂದ ಇಷ್ಟೊಂದು ಅತ್ಯಲ್ಪ ಆಹಾರದಿಂದ ಕೇವಲ ಅವರಲ್ಲಿನ ಚೈತನ್ಯದಿಂದಲೇ ಬದುಕಲು ಸಾಧ್ಯವಾಯಿತು’, ಎಂಬುದು ಗಮನಕ್ಕೆ ಬಂದಿತು.
೨. ದೇಹದಿಂದ ಹೆಚ್ಚು ಪ್ರಮಾಣದಲ್ಲಿ ಭಾವದ ಸ್ಪಂದನಗಳು ಪ್ರಕ್ಷೇಪಿತವಾಗುವುದು
ಅ. ಕೇಸರಕರಕಾಕೂರವರ ವಾತಾವರಣದಲ್ಲಿ ಭಾವದ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿವೆಯೆಂದು ನನಗೆ ಅರಿವಾಯಿತು.
ಆ. ನಾನು ಅವರ ದೇಹದ ಮೇಲಿಂದ ತಲೆಯ ಮೇಲಿಂದ ಹಿಡಿದು ಚರಣಗಳ ಕಡೆಗೆ ಕೈಯನ್ನು ಹಾಯಿಸಿದೆನು, ಆಗ ನನಗೆ ಅವರ ಚರಣಗಳಿಂದ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತಿರುವುದರ ಅರಿವಾಯಿತು.
ಇ. ಅವರ ದೇಹದಿಂದ ಮುಂದಿನಂತೆ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿದ್ದವು. ಅವುಗಳಲ್ಲಿ ಭಾವದ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಇರುತ್ತವೆ ಎಂದು ಗಮನಕ್ಕೆ ಬಂದಿತು.
ಕೇಸರಕರಕಾಕೂರವರ ದೇಹದ ಕಡೆಗೆ ನೋಡಿದ ನಂತರ ಶಾಂತವೆನಿಸುತ್ತಿತ್ತು. ‘ಅಲ್ಲಿ ಧ್ಯಾನ ಮಾಡಲು ಕುಳಿತುಕೊಳ್ಳೋಣ’, ಎಂದು ಎನಿಸುತ್ತಿತ್ತು.
ಕೇಸರಕರಕಾಕೂರವರ ಪ್ರಾಣವು ಆಜ್ಞಾಚಕ್ರದಿಂದ ಹೋಗಿರುವುದೆಂದು ಅರಿವಾಯಿತು. (ನಂತರ ಪರಾತ್ಪರ ಗುರು ಡಾ. ಆಠವಲೆಯವರಿಂದ, ‘ಕಾಕೂರವರ ಪ್ರಾಣವು ಸಹಸ್ರಾರಚಕ್ರ ದಿಂದ ಹೊರಗೆ ಬಿದ್ದಿತು’, ಎಂದು ತಿಳಿಯಿತು. ಇದು ನನಗೆ ಗೊತ್ತಿರಲಿಲ್ಲ. ಆದರೆ ನಾನು ಕಾಕೂರವರ ಸ್ವಲ್ಪ ಕೂದಲುಗಳನ್ನು ಸಂಶೋಧನೆಗಾಗಿ ತೆಗೆದುಕೊಳ್ಳುವಾಗ ಅವರ ಸಹಸ್ರಾರಚಕ್ರದ ಜಾಗದಿಂದಲೇ ಕೂದಲುಗಳನ್ನು ತೆಗೆದುಕೊಂಡಿದ್ದೆನು.)
ನನಗೆ, ‘ಕೇಸರಕರಕಾಕೂರವರ ಪ್ರಾಣ ಹೋಗುವಾಗ ಯಾವುದೇ ಅಡತಡೆಗಳು ಬರಲಿಲ್ಲ. ಹಾಗೆಯೇ ಅವರ ಮುಂದಿನ ಪ್ರಯಾಣವೂ (ಪ್ರಗತಿಯೂ) ಅಡಚಣೆಯಾಗದೇ ಶೀಘ್ರಗತಿಯಿಂದ ಆಗುತ್ತದೆ’, ಎಂದು ಎನಿಸಿತು.
೩. ಕೇಸರಕರಕಾಕೂರವರ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಿಂದ ಆಗುತ್ತಿರುವುದು
ಸೌ. ಕೇಸರಕರ ಕಾಕೂರವರ ಆಧ್ಯಾತ್ಮಿಕ ಮಟ್ಟವು ೨೩.೭.೨೦೨೧ ರಂದು ಗುರುಪೂರ್ಣಿಮೆಯ ದಿನ ಶೇ. ೬೬ ರಷ್ಟು ಇರುವುದಾಗಿ ಘೋಷಿಸಲಾಗಿತ್ತು. ಇಂದು ನಿಧನದ ಸಮಯಕ್ಕೆ ಅವರ ಮಟ್ಟವು ಶೇ. ೬೮ ರಷ್ಟು ಆಗಿರುವುದೆಂದು ನನಗೆ ಎನಿಸಿತು. ಇದರ ಮೇಲಿಂದ ಕಳೆದ ೩ ತಿಂಗಳಲ್ಲಿ ಅವರ ಆಧ್ಯಾತ್ಮಿಕ ಮಟ್ಟವು ಶೇ. ೨ ರಷ್ಟು ಹೆಚ್ಚಳವಾಗಿರುವುದು, ಎಂದರೆ ಅವರ ಉನ್ನತಿಯು ಶೀಘ್ರಗತಿಯಿಂದ ಆಗುತ್ತಿದೆ ಎಂದರಿವಾಯಿತು; ಆದುದರಿಂದಲೇ ಅವರಿಗೆ ಅರ್ಬುದರೋಗದಂತಹ ತೀವ್ರ ಕಾಯಿಲೆ ಆಗಿದ್ದರೂ ಮತ್ತು ಈ ಕಾಯಿಲೆಯಲ್ಲಿ ಅಪಾರ ಯಾತನೆ ಆಗುತ್ತಿದ್ದರೂ ಅವರು ಕೊನೆಯ ವರೆಗೆ ಆನಂದದಿಂದ ಮತ್ತು ಈಶ್ವರನ ಅನುಸಂಧಾನದಲ್ಲಿದ್ದರು.
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೦.೨೦೨೧)
‘ಸಾಮಾನ್ಯ ವ್ಯಕ್ತಿಯ ನಿಧನದ ನಂತರ ಅವನ ಮೃತದೇಹದ ಹತ್ತಿರ ಒತ್ತಡ ಮತ್ತು ತೊಂದರೆಯು ಅರಿವಾಗುತ್ತದೆ; ಆದರೆ ದಿ. (ಸೌ.) ಪ್ರಮಿಳಾ ಕೇಸರಕರ ಇವರು ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ (ಅವರ ಆಧ್ಯಾತ್ಮಿಕ ಮಟ್ಟವು ಶೇ. ೬೮ ಆಗಿರುವುದರಿಂದ ಅವರ ಮೃತದೇಹವನ್ನು ಇಟ್ಟಿರುವ ಪರಿಸರದಲ್ಲಿ ಆನಂದ ಮತ್ತು ಭಾವವು ಅರಿವಾಗುತ್ತಿತ್ತು’. – ನ್ಯಾಯವಾದಿ ರಾಮದಾಸ ಕೇಸರಕರ, ಸನಾತನ ಸಂಸ್ಥೆಯ ಗೌರವಾನ್ವಿತ ಕಾನೂನು ಸಲಹೆಗಾರರು (ಆಧ್ಯಾತ್ಮಿಕ ಮಟ್ಟ ಶೇ. ೬೧) ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೧೦.೨೦೨೧) |
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ. * ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |