ಕೇವಲ ಅಪರಾಧವನ್ನು ದಾಖಲಿಸಿ ಸುಮ್ಮನಾಗಬಾರದು, ಇಂತಹವರನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಲು ಸರಕಾರವು ಪ್ರಯತ್ನಿಸಬೇಕಿದೆ ಎಂದು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ ! – ಸಂಪಾದಕರು
ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ನ ಮುಖಂಡ ಸೈಯದ ಅಲಿ ಶಾ ಗಿಲಾನಿ ಇವರು ಸೆಪ್ಟೆಂಬರ 1 ರಂದು ನಿಧನರಾದರು. ಇವರ ಮೃತದೇಹವನ್ನು ಜಮ್ಮು-ಕಾಶ್ಮೀರದ ಪೊಲೀಸರು ಹೂಳಿದರು. ಪೊಲೀಸರು ಗಿಲಾನಿ ಅವರ ಮೃತದೇಹವನ್ನು ಅವರ ಕುಟುಂಬದವರಿಂದ ವಶಕ್ಕೆ ಪಡೆದರು. ಮೃತದೇಹಕ್ಕೆ ಪಾಕಿಸ್ತಾನಿ ರಾಷ್ಟ್ರಧ್ವಜದಲ್ಲಿ ಹೊದಿಸಿರುವುದರಿಂದ ಮತ್ತು ಆ ಸಮಯದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ನೀಡಿದ ಬಗ್ಗೆ ಗಿಲಾನಿಯವರ ಕುಟುಂಬದವರ ಮೇಲೆ ಮತ್ತು ಇತರರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಿಲಾನಿಯವರ ಅಂತ್ಯ ಯಾತ್ರೆಗೆ ದೊಡ್ಡಪ್ರಮಾಣದಲ್ಲಿ ಜನರು ಸೇರಿ ಹಿಂಸಾಚಾರವು ಭುಗಿಲೇಳುವ ಸಾಧ್ಯತೆ ಇದ್ದುದರಿಂದ ಅವರ ಮೃತದೇಹವನ್ನು ಪೊಲೀಸರೇ ವಶಕ್ಕೆ ಪಡೆದು ಹೂತಿದ್ದಾರೆ ಎಂದು ಹೇಳಲಾಗಿದೆ. ಗಿಲಾನಿಯವರ ನಿಧನದ ನಂತರ ಕಾಶ್ಮೀರದಲ್ಲಿ ಶಾಂತಿ ಮತ್ತು ಸುರಕ್ಷೆಯನ್ನು ಉಳಿಸಲು ಮೊಬೈಲ್ ಮತ್ತು ಇಂಟರನೆಟ್ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಸಪ್ಟೆಂಬರ್ 4 ರಂದು ಈ ಸೇವೆಯು ಪುನರ್ಚಾಲನೆಗೊಂಡ ನಂತರ ಗಿಲಾನಿ ಅವರ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಡಿಯೋ ಪ್ರಸಾರವಾಯಿತು. ಅದರ ನಂತರವೇ ಈ ಮಾಹಿತಿಯು ಬಹಿರಂಗವಾಯಿತು.
FIR under #UAPA over draping of #SyedAliShahGeelani‘s body in #Pakistani flaghttps://t.co/OC79IWy1ql
— Zee News English (@ZeeNewsEnglish) September 4, 2021
ಒಂದು ವಿಡಿಯೋದಲ್ಲಿ ಗಿಲಾನಿ ಅವರ ಮೃತದೇಹದ ಸುತ್ತಲೂ ದೊಡ್ಡಪ್ರಮಾಣದಲ್ಲಿ ಜನರು ನೆರೆದಿರುವುದು ಕಂಡುಬರುತ್ತಿತ್ತು. ಗಿಲಾನಿ ಅವರ ಮೃತದೇಹವನ್ನು ಪಾಕಿಸ್ತಾನದ ರಾಷ್ಟ್ರಧ್ವಜದಲ್ಲಿ ಸುತ್ತಲಾಗಿತ್ತು. ಮೃತದೇಹವನ್ನು ಇಟ್ಟ ಕೋಣೆಯಲ್ಲಿ ಪೊಲೀಸರು ಕಾಣಿಸುತ್ತಿದ್ದರು. ಈ ಸಮಯದಲ್ಲಿ ಪೊಲೀಸರನ್ನು ದೂಡುತ್ತಿರುವುದು ಕಂಡುಬರುತ್ತದೆ. (ಪೋಲಿಸರನ್ನೇ ದೂಡುವಷ್ಟು ಉದ್ಧಟವಾಗಿರುವ ಮತಾಂಧರು ! ಇಂತಹವರನ್ನು ಜೈಲಿಗಟ್ಟಿರಿ ! – ಸಂಪಾದಕರು) ಈ ವಿಷಯದಲ್ಲಿ ಜಮ್ಮು-ಕಾಶ್ಮೀರದ ಪೊಲೀಸ್ ಮಹಾಸಂಚಾಲಕರಾದ ದಿಲಬಾಗ ಸಿಂಹ ಇವರು ‘ದೇಶದ್ರೋಹಿ ಕಾರ್ಯಾಚರಣೆಗಳನ್ನು ಮಾಡುವವರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.