ಕಾನಪೂರದಲ್ಲಿ ರಾಷ್ಟ್ರಧ್ವಜದ ಮೇಲೆ ಮಸೀದಿ, ಚಂದ್ರ ಮತ್ತು ನಕ್ಷತ್ರಗಳನ್ನು ಚಿತ್ರಿಸಿದ್ದಾರೆ !
ಇಲ್ಲಿಯ ಮೊಹರಂನ ಹಿಂದಿನ ಸಂಜೆ ನಡೆಸಲಾದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜದ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಧ್ವಜದ ಮೇಲೆ ಮಸೀದಿ, ಚಂದ್ರ ಮತ್ತು ನಕ್ಷತ್ರಗಳನ್ನು ಚಿತ್ರಿಸಲಾಗಿತ್ತು ಹಾಗೂ ರಾಷ್ಟ್ರಧ್ವಜದ ಆಕಾರವೂ ಸಹ ಬದಲಾಯಿಸಲಾಗಿತ್ತು.