ಪತಿಯ ಧಾರ್ಮಿಕತೆಯಿಂದ ವೈವಾಹಿಕ ಜೀವನದಲ್ಲಿ ಒತ್ತಡ ನಿರ್ಮಾಣವಾಗಿದೆಯೆಂದು ಪತ್ನಿಯ ಆರೋಪ
ತಿರುವನಂತಪುರಂ (ಕೇರಳ) – ಪತಿ ದೈಹಿಕ ಸಂಬಂಧ ಇಟ್ಟುಕೊಳ್ಳುತ್ತಿಲ್ಲ ಎಂದು ಪತ್ನಿಯ ಆರೋಪವನ್ನು ಮಾನ್ಯ ಮಾಡಿದ ಕೇರಳ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದಿದೆ. ಈ ದಂಪತಿಗಳ ವಿವಾಹವು 2006 ರಲ್ಲಿ ನೋಂದಣಿಯ ಮೂಲಕ ನಡೆದಿತ್ತು. ಕೆಲವು ಸಮಯದ ನಂತರ ಅವರ ವೈವಾಹಿಕ ಜೀವನದಲ್ಲಿ ಒತ್ತಡ ನಿರ್ಮಾಣವಾಗಿತ್ತು. “ಪತಿ ತುಂಬಾ ಧಾರ್ಮಿಕರಾಗಿದ್ದರಿಂದ ನಮ್ಮ ನಡುವೆ ಅಂತರ ನಿರ್ಮಾಣವಾಗಿದೆ ” ಎಂದು ಪತ್ನಿ ಆರೋಪಿಸಿದ್ದಾರೆ. “ನನ್ನ ಪತಿ ದಿನವಿಡೀ ಪ್ರಾರ್ಥನೆ ಮತ್ತು ಪೂಜೆಯಲ್ಲಿ ನಿರತರಾಗಿರುತ್ತಾರೆ. ಅವರು ದೇವಸ್ಥಾನ ಮತ್ತು ಆಶ್ರಮಕ್ಕೆ ಹೋಗುತ್ತಾರೆ. ಪತಿಯು ನನ್ನನ್ನೂ ಅವರಂತೆ ಆಧ್ಯಾತ್ಮಿಕ ದಾರಿಗೆ ತರಲು ಪ್ರಯತ್ನಿಸಿದರು” ಎಂದು ಪತ್ನಿ ಹೇಳಿದ್ದಾರೆ.
ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸುವಂತೆ ಪತ್ನಿಯನ್ನು ಒತ್ತಾಯಿಸುವುದು ಮಾನಸಿಕ ಕ್ರೌರ್ಯ!
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ವಿವಾಹವು ಒಬ್ಬ ಸಂಗಾತಿಗೆ ಇನ್ನೊಬ್ಬ ಸಂಗಾತಿಯ ವೈಯಕ್ತಿಕ ನಂಬಿಕೆಗಳ ಮೇಲೆ, ಅದು ಆಧ್ಯಾತ್ಮಿಕವಾಗಿರಲಿ ಅಥವಾ ಬೇರೆಯದಾಗಿರಲಿ, ಆದೇಶ ನೀಡುವ ಹಕ್ಕನ್ನು ನೀಡುವುದಿಲ್ಲ. ಪತ್ನಿಯನ್ನು ತನ್ನ ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸಲು ಒತ್ತಾಯಿಸುವುದು ಮತ್ತು ಅವಳಿಗೆ ಭಾವನಾತ್ಮಕ ತೊಂದರೆ ನೀಡುವುದು ಮಾನಸಿಕ ಕ್ರೌರ್ಯವಾಗಿದೆ. ಕುಟುಂಬ ಜೀವನದಲ್ಲಿ ಗಂಡನ ನಿರಾಸಕ್ತಿಯು ಅವನ ವೈವಾಹಿಕ ಕರ್ತವ್ಯಗಳನ್ನು ಪೂರೈಸುವಲ್ಲಿ ವಿಫಲತೆಯನ್ನು ಸೂಚಿಸುತ್ತದೆ.