ಬರೇಲಿ (ಉತ್ತರಪ್ರದೇಶ) ಇಲ್ಲಿ ಮತಾಂಧನು ಮೊಬೈಲನಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಹೇಳುವ ಹಾಡನ್ನು ಹಚ್ಚಿದ ಖೇದಕರ ಘಟನೆ !

ಹಿಂದೂಗಳು ವಿರೋಧಿಸಿದಾಗ ಉದ್ಧಟತನದ ಉತ್ತರ !

ಇಂತಹ ದೇಶದ್ರೋಹಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಆಗ ಮಾತ್ರ ಇತರರಿಗೆ ಭಯ ನಿರ್ಮಾಣವಾಗುವುದು !

ಬರೇಲಿ (ಉತ್ತರಪ್ರದೇಶ) – ಇಲ್ಲಿ ಮತಾಂಧ ಅಂಗಡಿಯವನು ಮೊಬೈಲ್‌ನಲ್ಲಿ ಹಾಡನ್ನು ಹಾಕಿ ಅದರಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಮಾಡುತ್ತಿರುವ ಒಂದು ವೀಡಿಯೊ ಪ್ರಸಾರ ವಾಗಿದೆ. ಈ ಪ್ರಕರಣದ ಕುರಿತು ಪೊಲೀಸರಲ್ಲಿ ದೂರು ನೀಡಲಾಗಿದೆ. ಈ ಘಟನೆಯು ಮುಟಾವಾನ ಗ್ರಾಮದಲ್ಲಿ ನಡೆದಿದ್ದು ಅಂಗಡಿಯವನ ಹೆಸರು ಮುಸ್ತಕೀನ ಆಗಿದೆ.

೧. ಮುಸ್ತಕೀನ ಮೊಬೈಲ್‌ನಲ್ಲಿ ಹಾಡುಗಳನ್ನು ಹಾಕುವಾಗ ಅಲ್ಲಿಂದ ಹಿಂದೂನಿಷ್ಠ ಹಿಮಾಂಶು ಪಟೇಲ ಮತ್ತು ಆಶಿಶ ಪಟೇಲರು ಹಾದು ಹೊಗುತ್ತಿದ್ದರು. ಹಾಡಿನಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆಯಾಗುತ್ತಿರುವುದು ಗಮನಿಸಿದ ಅವರು ಹಾಡಿಗೆ ವಿರೋಧ ವ್ಯಕ್ತಪಡಿಸಿದರು. ಮುಸ್ತಾಕೀನ ಹಾಡನ್ನು ನಿಲ್ಲಿಸುವ ಬದಲು ‘ನನಗೆ ಅನಿಸಿದ್ದನ್ನು ನಾನು ಕೇಳುತ್ತೇನೆ’ ಎಂದು ಹೇಳಿದನು. ಈ ವಿಷಯವಾಗಿ ನಿಮಗೆ ಯಾರಿಗಾದರೂ ಹೇಳುವದಿದ್ದರೆ ಅವರಿಗೆ ನೀವು ಹೇಳಬಹುದು, ಹೀಗೆ ಉದ್ಧಟತನದಿಂದ ಹೇಳಿದನು ಮತ್ತು ಹಾಡಿನ ಶಬ್ದವನ್ನು ಇನ್ನೂ ಹೆಚ್ಚಿಸಿದನು.

೨. ಈ ಘಟನೆಯ ವೀಡಿಯೋ ಮಾಡಿ ಹಿಮಾಂಶು ಪಟೇಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮುಸ್ತಾಕೀನನನ್ನು ಹುಡುಕಲು ಗ್ರಾಮಕ್ಕೆ ಹೋದಾಗ ಅವನು ಫರಾರಿಯಾಗಿದ್ದಾನೆ.