ಭಾರತ ವಿರೊಧಿ ಪ್ರತಿಭಟನಾಕಾರನ್ನು ಹತ್ತಿಕ್ಕಲು ಮಾಲ್ದೀವ್ ಜರುಗಿಸಲಿದೆ ಕಠಿಣ ಕಾನೂನು

ಹೊಸ ದೆಹಲಿ – ಮಾಲ್ದೀವ್ ರಾಜಧಾನಿ ಮಾಲೆಯಲ್ಲಿ ಜೂನ ೨೧ರಂದು ವಿಶ್ವ ಯೋಗ ದಿನದ ಸಂದರ್ಭದಲ್ಲಿ ಭಾರತ ಸರಕಾರ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಸ್ಥಳಿಯರು ದಾಳಿ ನಡೆಸಿ ಅದನ್ನು ತಡೆದಿದ್ದಾರೆ. ಪರಿಣಾಮವಾಗಿ ಮಾಲ್ದೀವ್ ಸರಕಾರವು ಈಗ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾನೂನನ್ನು ಜಾರಿಗೊಳಿಸುತ್ತಿದೆ ಎಂದು ಅಟಾರ್ನಿ ಜನರಲ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಕರಡು ಸಿದ್ದಪಡಿಸಲಾಗಿದೆ. ವಿದೇಶಿ ಅಥವಾ ರಾಷ್ಟ್ರೀಯ ಧ್ವಜದ ಅವಮಾನ ಮಾಡುವುದು, ಬದಲಾಯಿಸುವುದು, ವಿದೇಶಿ ಸಂಸ್ಥೆ ನಾಶಪಡಿಸುವುದು ಅಥವಾ ಹಾಗೆ ಮನವಿ ಮಾಡುವುದು, ವಿದೇಶಿ ನಾಗರಿಕರಿಗೆ ಕಿರುಕುಳ ನೀಡುವುದು ಅಥವಾ ಮಾಲ್ದೀವ್ ತೊರೆಯುವಂತೆ ಒತ್ತಾಯಿಸುವುದು ಅಪರಾಧವಾಗಲಿದೆ.