Muslisms Ugadi Wishes : ಪಂಚಗಣಾಧೀಶ್ವರ ಕೋಲಶಾಂತೇಶ್ವರ ಮಠದ ಸ್ವಾಮೀಜಿಗಳಿಗೆ ಕುರಾನ ಉಡುಗೊರೆ ನೀಡಿ ಯುಗಾದಿ ಹಬ್ಬದ ಶುಭಾಶಯ ಕೋರಿದ ಮುಸಲ್ಮಾನರು

ಹರಪನಹಳ್ಳಿ – ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿರುವ ಪಂಚಗಣಾಧೀಶ್ವರ ಕೋಲಶಾಂತೇಶ್ವರ ಮಠದ ಸ್ವಾಮೀಜಿಯವರಿಗೆ ಮುಸ್ಲಿಂ ಮುಖಂಡರು ಕುರಾನ ಗ್ರಂಥ ನೀಡಿ, ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದರು. ಮಂಗಳೂರಿನ ಮೌಲಾನಾ ಮಕಸೂನ ಉಮರಿ ಮಾತನಾಡಿ. “ಕುರಾನ್ ಗ್ರಂಥ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಹೇಗೆ ನಡೆಸಬೇಕೆಂದು? ಮಾರ್ಗದರ್ಶನ ನೀಡುತ್ತದೆ”, ಯಾರೂ ದೊಡ್ಡವರಲ್ಲ ಅಥವಾ ಸಣ್ಣವರಲ್ಲ. “ಇದು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಸೃಷ್ಟಿಸುತ್ತದೆ” ಎಂದು  ಹೇಳಿದರು.

ಈ ಸಮಯದಲ್ಲಿ ಸ್ವಾಮೀಜಿಯವರು ಮಾತನಾಡಿ, “ದೇವರು ಒಬ್ಬನೇ, ಅವನ ಹೆಸರುಗಳು ಮಾತ್ರ ಬೇರೆ ಬೇರೆ.” ಎಂದು ಹೇಳಿದ್ದಾರೆ. ಮುಸ್ಲಿಂ ಸಮುದಾಯದೊಳಗೂ ವಿವಿಧ ಉಪಪಂಗಡಗಳಿವೆ; ಆದರೆ ಎಲ್ಲರೂ ಕುರಾನ ಓದುತ್ತಾರೆ. ರಮಜಾನ ತಿಂಗಳ ಶಿಸ್ತು ಮತ್ತು ಉಪವಾಸಕ್ಕೆ ವಿಶೇಷ ಮಹತ್ವವಿದೆ’, ಎಂದು ಹೇಳಿದರು.