ಸಂಘದ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ
ಬೆಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮತ್ತು ಕಾಶಿಯ ಜ್ಞಾನವಾಪಿ ಈ ಚಳವಳಿಗಳಲ್ಲಿ ಭಾಗವಹಿಸಿದರೆ, ಅವರಿಗೆ ಸಂಘದಿಂದ ಯಾವುದೇ ಆಕ್ಷೇಪವಿರುವುದಿಲ್ಲ. ನಾವು ಅವರನ್ನು ತಡೆಯುವುದಿಲ್ಲ ಎಂದು ಸಂಘದ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಅವರು ಕನ್ನಡ ನಿಯತಕಾಲಿಕೆ ‘ವಿಕ್ರಮ’ ಪತ್ರಿಕೆಗೆ ಸಂದರ್ಶನ ನೀಡುವಾಗ ಮಾತನಾಡುತ್ತಿದ್ದರು. ಈ ವೇಳೆ ಹೊಸಬಾಳೆ ಅವರು, ಸಂಘವು ಎಲ್ಲಾ ಮಸೀದಿಗಳನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಆಂದೋಲನಗಳನ್ನು ವಿರೋಧಿಸುತ್ತದೆ ಹಾಗೂ ಸಾಮಾಜಿಕ ಬಿರುಕುಗಳನ್ನು ತಪ್ಪಿಸಲು ಒತ್ತು ನೀಡಿದೆ, ಎಂದು ಸ್ಪಷ್ಟಪಡಿಸಿದರು.
ಹೊಸಬಾಳೆ ಅವರು ಮಾತನ್ನು ಮುಂದುವರಿಸಿ,
ಗೋಹತ್ಯೆ, ಲವ್ ಜಿಹಾದ್ ಮತ್ತು ಮತಾಂತರದ ಬಗ್ಗೆ ಕಳವಳ
ಗೋಹತ್ಯೆ, ಲವ್ ಜಿಹಾದ್ ಮತ್ತು ಮತಾಂತರದ ಬಗ್ಗೆ ಇನ್ನೂ ಕಳವಳ ಇದೆ; ಆದರೆ ಈಗ ನಾವು ಇತರ ಪ್ರಮುಖ ವಿಷಯಗಳ ಮೇಲೆ ಗಮನ ಹರಿಸಬೇಕು. ಉದಾಹರಣೆಗೆ ಅಸ್ಪೃಶ್ಯತೆ ನಿವಾರಣೆ, ಯುವಕರಲ್ಲಿ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವುದು ಮತ್ತು ನಮ್ಮ ಭಾಷೆಗಳನ್ನು ರಕ್ಷಿಸುವುದು.
ಪ್ರತಿಯೊಬ್ಬರೂ ಸಂಸ್ಕೃತ ಕಲಿಯಬೇಕು!
ಈ ವಿಶಾಲ ದೇಶದ ಪ್ರತಿಯೊಬ್ಬರೂ ಸಂಸ್ಕೃತ ಕಲಿತರೆ ಅದು ತುಂಬಾ ಒಳ್ಳೆಯದು. ಡಾ. ಅಂಬೇಡ್ಕರ ಕೂಡ ಇದನ್ನು ಬೆಂಬಲಿಸಿದ್ದರು.
ಇಂದು ನಾವು ಭಾಷೆಯನ್ನು ಒಂದು ಸಮಸ್ಯೆಯನ್ನಾಗಿ ಮಾಡಿದ್ದೇವೆ!
ಅನೇಕ ಜನರು ಮಾತನಾಡುವ ಭಾಷೆಯನ್ನು ಕಲಿಯುವುದರಲ್ಲಿ ಯಾವುದೇ ಹಾನಿ ಇಲ್ಲ ಎಂದು ಹೇಳುತ್ತಾರೆ, ಇಂದು ಪ್ರತಿಯೊಬ್ಬ ಸೈನಿಕನು ಹಿಂದಿ ಕಲಿಯುತ್ತಾನೆ. ಉದ್ಯೋಗದ ಅಗತ್ಯವಿರುವವರು ಸಂಬಂಧಪಟ್ಟ ರಾಜ್ಯದ ಭಾಷೆಯನ್ನು ಕಲಿಯುತ್ತಾರೆ. ರಾಜಕೀಯ ಮತ್ತು ವಿರೋಧವು ಭಾಷೆಯನ್ನು ಹೇರುವ ಸೂತ್ರಕ್ಕೆ ಕಾರಣವಾಯಿತು ಮತ್ತು ಸಮಸ್ಯೆ ಉದ್ಭವಿಸಿದವು. ಭಾಷಾ ವೈವಿಧ್ಯತೆ ಇದ್ದರೂ ಭಾರತವು ಸಹಸ್ರಾರು ವರ್ಷಗಳಿಂದ ಒಗ್ಗೂಡಿರಲಿಲ್ಲವೇ? ಇಂದು ನಾವು ಭಾಷೆಯನ್ನು ಒಂದು ಸಮಸ್ಯೆಯನ್ನಾಗಿ ಮಾಡಿದ್ದೇವೆ ಎಂದು ತೋರುತ್ತದೆ. ನಮ್ಮ ಎಲ್ಲಾ ಭಾಷೆಗಳು ಆಳವಾದ ಸಾಹಿತ್ಯ ಕೃತಿಗಳಿಗೆ ಜನ್ಮ ನೀಡಿವೆ. ಭವಿಷ್ಯದ ಪೀಳಿಗೆಯು ಈ ಭಾಷೆಗಳಲ್ಲಿ ಬರೆಯಲು-ಓದಲು ಕಲಿಯದಿದ್ದರೆ ಅವು ಹೇಗೆ ಉಳಿಯುತ್ತವೆ?
ಆಂಗ್ಲ ಭಾಷೆಗೆ ಆರ್ಥಿಕ ಪರ್ಯಾಯ ಬೇಕು!
ಆಂಗ್ಲ ಭಾಷೆಯ ಆಕರ್ಷಣೆಯು ಮುಖ್ಯವಾಗಿ ವ್ಯಾವಹಕಾರಿಕ ಕಾರಣಗಳಿಗಾಗಿ ಇದೆ. ಭಾರತೀಯ ಭಾಷೆಗಳಲ್ಲಿ ಶಿಕ್ಷಣ ಪಡೆದ ಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿರುವಂತಹ ಆರ್ಥಿಕ ಮಾದರಿಯನ್ನು ಸ್ಥಾಪಿಸಬೇಕು. ಹಿರಿಯ ಬುದ್ಧಿಜೀವಿಗಳು, ನ್ಯಾಯಾಧೀಶರು, ಶಿಕ್ಷಣ ತಜ್ಞರು, ಬರಹಗಾರರು ಮತ್ತು ರಾಜಕೀಯ ಹಾಗೂ ಧಾರ್ಮಿಕ ನಾಯಕರು ಈ ವಿಷಯದಲ್ಲಿ ಪ್ರಗತಿಪರ ಪಾತ್ರವನ್ನು ವಹಿಸಬೇಕು, ಎಂದು ಹೇಳಿದರು.