Pastor Bajinder Singh Life Imprisonment : ಬಲಾತ್ಕಾರ ಪ್ರಕರಣದಲ್ಲಿ ಪಾದ್ರಿ ಬಾಜಿಂದರ್ ಸಿಂಹಗೆ ಜೀವಾವಧಿ ಶಿಕ್ಷೆ

7 ವರ್ಷಗಳ ನಂತರ ತೀರ್ಪು

ಮೊಹಾಲಿ (ಪಂಜಾಬ್) – ಕ್ರಿಶ್ಚಿಯನ್ ಪಾದ್ರಿ ಬಾಜಿಂದರ್ ಸಿಂಗ್‌ಗೆ ಬಲಾತ್ಕಾರ ಪ್ರಕರಣದಲ್ಲಿ ಮೊಹಾಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2018ರ ಈ ಪ್ರಕರಣದಲ್ಲಿ ಮಾರ್ಚ್ 28ರಂದು ನ್ಯಾಯಾಲಯವು ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ನಂತರ ಏಪ್ರಿಲ್ 1ರಂದು ನ್ಯಾಯಾಲಯವು ಬಾಜಿಂದರ್ ಸಿಂಗ್‌ಗೆ ಶಿಕ್ಷೆ ವಿಧಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಾಜಿಂದರ್ ಸಿಂಗ್ ವಿರುದ್ಧ ಯುವತಿಯೊಬ್ಬಳು ಲೈಂಗಿಕ ಕಿರುಕುಳ ನೀಡಿದ ಆರೋಪ ದಾಖಲಿಸಿದ್ದಳು.

ಶಿಕ್ಷೆಯಾದ ಪ್ರಕರಣದಲ್ಲಿ, ಸಂತ್ರಸ್ತ ಮಹಿಳೆಯನ್ನು ವಿದೇಶದಲ್ಲಿ ನೆಲೆಸುವ ನೆಪದಲ್ಲಿ ಬಾಜಿಂದರ್ ತನ್ನ ಮನೆಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು. ಆ ಘಟನೆಯನ್ನು ಚಿತ್ರೀಕರಿಸಿದ್ದನು. “ನನ್ನ ವಿರುದ್ಧ ಅತ್ಯಾಚಾರದ ಬಗ್ಗೆ ಮಾತನಾಡಿದರೆ ವೀಡಿಯೊವನ್ನು ಬಹಿರಂಗಪಡಿಸುತ್ತೇನೆ” ಎಂದು ಆತ ಬೆದರಿಕೆ ಹಾಕಿದ್ದನು. ತನ್ನಂತೆ ಅನೇಕ ಮಹಿಳೆಯರನ್ನು ಬಾಜಿಂದರ್ ಶೋಷಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

ಶಿಕ್ಷೆಯನ್ನು ತಪ್ಪಿಸಿಕೊಳ್ಳಲು, ಬಾಜಿಂದರ್ ನ್ಯಾಯಾಲಯಕ್ಕೆ ನನ್ನ ಮಕ್ಕಳು ಚಿಕ್ಕವರಿದ್ದಾರೆ, ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನ್ನ ಕಾಲಿಗೆ ರಾಡ್ ಹಾಕಲಾಗಿದೆ, ಆದ್ದರಿಂದ ನನ್ನ ಮೇಲೆ ದಯೆ ತೋರಿಸಿ ಎಂದು ಹೇಳಿದನು; ಆದರೆ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

ಸಂಪಾದಕೀಯ ನಿಲುವು

  • ‘ಪಾದ್ರಿ’ ಎಂದರೆ ಕಾಮುಕ ವ್ಯಕ್ತಿ ಎಂಬಂತಹ ಚಿತ್ರಣ ಮೂಡುತ್ತಿದೆ. ವಿದೇಶಗಳಲ್ಲಿ ದಶಕಗಳಿಂದ ಪಾದ್ರಿಗಳು ಮಕ್ಕಳು, ಮಹಿಳೆಯರು ಮುಂತಾದವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ನೂರಾರು ಪ್ರಕರಣಗಳು ಬೆಳಕಿಗೆ ಬರುತ್ತಿರುವಾಗ, ಭಾರತದಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂಬುದು ಇಂತಹ ಪ್ರಕರಣಗಳಿಂದ ಬಹಿರಂಗವಾಗುತ್ತಿದೆ. 
  • 7 ವರ್ಷಗಳ ನಂತರ ನ್ಯಾಯ ಸಿಗುವುದು ಅನ್ಯಾಯವೇ ಆಗಿದೆ ! ಹಿಂದೂ ರಾಷ್ಟ್ರದಲ್ಲಿ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು! 
  • ಹಿಂದೂ ಸಂತರ ಬಗ್ಗೆ ಸುಳ್ಳು ಆರೋಪ ಹೊರಿಸಿ ಅವರ ಮೇಲೆ ಕೆಸರೆರಚುವ ಮಾಧ್ಯಮಗಳು ಪಾದ್ರಿಯೊಬ್ಬನ ದುಷ್ಕೃತ್ಯದ ‘ಬ್ರೇಕಿಂಗ್ ನ್ಯೂಸ್’ ನೀಡಲು ಮತ್ತು ಅದರ ಬಗ್ಗೆ ಚರ್ಚಾಕೂಟಗಳನ್ನು ಆಯೋಜಿಸಲು ಹಿಂಜರಿಯುತ್ತವೆ, ಎಂಬುದನ್ನು ಗಮನಿಸಿ !