Bihar Muslims Attack Kalash Yatra : ಬಿಹಾರದಲ್ಲಿ ಚೈತ್ರ ನವರಾತ್ರಿಯ ಕಲಶ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ

  • ಅನೇಕ ಹಿಂದೂಗಳಿಗೆ ಗಾಯ

  • ದಾಳಿಗಾಗಿ ಓರ್ವ ಮುಸ್ಲಿಮನ ಮನೆಯ ಟೆರೇಸ್ ಮೇಲೆ ಹೊಂಚು ಹಾಕಿ ಕುಳಿತಿದ್ದ ಮತಾಂಧರು

ದರಭಂಗಾ (ಬಿಹಾರ) – ಇಲ್ಲಿ ಚೈತ್ರ ನವರಾತ್ರಿಯ ಮೊದಲ ದಿನ ಅಂದರೆ ಮಾರ್ಚ್ 30 ರಂದು ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸಿದರು. ಇಲ್ಲಿ ಅಲ್ಲಾವುದ್ದೀನ್ ಎಂಬ ವ್ಯಕ್ತಿಯ ಮನೆಯ ಟೆರೇಸ್‌ನಿಂದ ಮುಸ್ಲಿಮರು ಹಿಂದೂಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಿದರು. ಇದರಿಂದ ಅನೇಕ ಹಿಂದೂಗಳಿಗೆ ಗಾಯಗಳಾದವು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದಕ್ಕೂ ಮುನ್ನ ಹೋಳಿ ಹಬ್ಬದ ಸಂದರ್ಭದಲ್ಲೂ ಇಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿತ್ತು. ಪೊಲೀಸರು ಮತ್ತು ಗ್ರಾಮಸ್ಥರು ಪರಸ್ಪರ ಸಂವಹನದಿಂದ ಪ್ರಕರಣವನ್ನು ಬಗೆಹರಿಸಿದ್ದರು, ಆದರೆ ನವರಾತ್ರಿಯ ಮೊದಲ ದಿನ ನಡೆದ ಕಲ್ಲು ತೂರಾಟದ ನಂತರ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. (ಚರ್ಚೆ ಮಾಡುವುದರಿಂದ ಮತಾಂಧ ಮುಸ್ಲಿಮರು ಶಾಂತರಾಗುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕ. – ಸಂಪಾದಕರು) ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ದಾಳಿ ಹೇಗೆ ನಡೆಯಿತು !

ಕೇವತಗಾಮಾ ಪಂಚಾಯಿತಿಯಲ್ಲಿ ಕಲಶ ಯಾತ್ರೆಯ ಭಕ್ತರ ಮೇಲೆ ಇದ್ದಕ್ಕಿದ್ದಂತೆ ಕಲ್ಲುಗಳ ಸುರಿಮಳೆ ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ ಕಲ್ಲು ತೂರಾಟದಿಂದ ಮಹಿಳೆಯರು ಮತ್ತು ಮಕ್ಕಳು ಕಿರುಚುತ್ತಾ ಇಲ್ಲಿಂದ ಅಲ್ಲಿಗೆ ಓಡಲು ಪ್ರಾರಂಭಿಸಿದರು. ದಾಳಿಗಾಗಿ ಮುಸ್ಲಿಮರು ಮೊದಲೇ ಮನೆಯ ಟೆರೇಸ್ ಮೇಲೆ ಹೊಂಚು ಹಾಕಿ ಕುಳಿತಿದ್ದರು ಮತ್ತು ಕಲಶ ಯಾತ್ರೆ ಬರುವುದಕ್ಕಾಗಿ ಕಾಯುತ್ತಿದ್ದರು ಎಂದು ಹಿಂದೂಗಳು ತಿಳಿಸಿದ್ದಾರೆ. ಪಚಿಯಾರಿ ರಾಹಿಯಲ್ಲಿ ವಾಸಿಸುವ ಮೊಹಮ್ಮದ್ ಅಲ್ಲಾವುದ್ದೀನ್ ಮನೆಯ ಟೆರೇಸ್ ಮೇಲೆ ಮುಸ್ಲಿಮರು ಜಮಾಯಿಸಿದ್ದರು. ಮೆರವಣಿಗೆ ಈ ಮನೆಯ ಬಳಿ ಬರುತ್ತಿದ್ದಂತೆ ಮುಸ್ಲಿಮರು ಕಲ್ಲು ತೂರಾಟ ಆರಂಭಿಸಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರೂ, ಗ್ರಾಮದ ವಾತಾವರಣ ಇನ್ನೂ ಉದ್ವಿಗ್ನವಾಗಿದೆ. ಜನರು ಭಯಭೀತರಾಗಿದ್ದಾರೆ ಮತ್ತು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ, ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಘಟನೆಗಳನ್ನು ನಿಲ್ಲಿಸುವ ದೃಢವಾದ ಭರವಸೆ ನೀಡುವವರನ್ನು ಅಧಿಕಾರಕ್ಕೆ ತರಲು ಹಿಂದೂಗಳು ಪ್ರಯತ್ನಿಸಬೇಕು !