ಹಿಂದೂ ಸಂಘಟನೆಗಳಿಂದ ಪೊಲೀಸರಿಗೆ ದೂರು
ಕಾನಪೂರ (ಉತ್ತರಪ್ರದೇಶ) – ಇಲ್ಲಿಯ ಮೊಹರಂನ ಹಿಂದಿನ ಸಂಜೆ ನಡೆಸಲಾದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜದ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಧ್ವಜದ ಮೇಲೆ ಮಸೀದಿ, ಚಂದ್ರ ಮತ್ತು ನಕ್ಷತ್ರಗಳನ್ನು ಚಿತ್ರಿಸಲಾಗಿತ್ತು ಹಾಗೂ ರಾಷ್ಟ್ರಧ್ವಜದ ಆಕಾರವೂ ಸಹ ಬದಲಾಯಿಸಲಾಗಿತ್ತು. ಈ ಮೆರವಣಿಗೆಯ ಒಂದು ವಿಡಿಯೋ ‘ನ್ಯೂಸ ನೇಷನ್’ ಈ ವಾರ್ತಾ ವಾಹಿನಿಯ ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಇದರಿಂದ ಈ ಘಟನೆಗೆ ವಿರೋಧಿಸಲಾಗುತ್ತಿದೆ.
UP: Video of Islamists waving Tiranga defaced with Islamic symbols during Moharram procession goes viral; complaint filed https://t.co/vcibVJGtdp
— OpIndia.com (@OpIndia_com) August 9, 2022
ಇದರ ವಿರುದ್ಧ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕಾನಪೂರ ಪೊಲೀಸ ಆಯುಕ್ತರನ್ನು ಭೇಟಿ ಮಾಡಿ ಅವರಿಗೆ ದೂರನ್ನು ನೀಡಿದ್ದಾರೆ. ಈ ಬಗ್ಗೆ ಆಯುಕ್ತರು ‘ಅದರ ವಿಚಾರಣೆ ನಡೆಸಿ ದೂರನ್ನು ದಾಖಲಿಸಲಾಗುವುದು’, ಎಂದು ಭರವಸೆ ನೀಡಿದ್ದಾರೆ.
ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ರಾಷ್ಟ್ರಿಯ ಭಾವನೆಗಳನ್ನು ನೋಯಿಸುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ |