೧. ಭಾರತದಲ್ಲಿನ ಒಂದು ರಾಜ್ಯದಲ್ಲಿನ ಕಥಿತ ಘಟನೆಯ ಪರಿಣಾಮ ಕೇವಲ ಮಹಾರಾಷ್ಟ್ರದಲ್ಲಿಯೇ ಆಗಿದ್ದರಿಂದ ಅನೇಕ ಸಂಶಯಗಳು ನಿರ್ಮಾಣವಾಗುವುದು
‘ಇತ್ತೀಚೆಗಷ್ಟೇ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಗಲಭೆ(ದಂಗೆ)ಗಳಾದವು. ಆ ಗಲಭೆಗಳ ಘಟನಾಕ್ರಮಗಳು, ಗಲಭೆಕೋರರು ಉಪಯೋಗಿಸಿದ ಕಾರ್ಯಪದ್ಧತಿ ಮತ್ತು ಅವರಿಗೆ ಬಹಿರಂಗವಾಗಿ ಮತ್ತು ಅಡಗಿಕೊಂಡು ಬೆಂಬಲಿಸುವ ಸಮರ್ಥಕರನ್ನು ನೋಡಿ ‘ಈ ಗಲಭೆಗಳು ಸುನಿಯೋಜಿತವಾಗಿದ್ದವು’, ಎಂಬುದು ಗಮನಕ್ಕೆ ಬರುತ್ತದೆ. ತ್ರಿಪುರಾ ರಾಜ್ಯದಲ್ಲಿ ನಿಜವಾಗಿಯೂ ಘಟನೆಯು ಘಟಿಸಿತ್ತೆ ? ಈ ವಿಷಯದಲ್ಲಿ ಯಾರು ಕೂಡ ದೃಢೀಕರಿಸಿ ಮಾಹಿತಿಯನ್ನು ಹೇಳಿಲ್ಲ. ಭಾರತದಲ್ಲಿನ ಒಂದು ರಾಜ್ಯದ ಕಥಿತ ಘಟನೆಯ ಪರಿಣಾಮ ಕೇವಲ ಮಹಾರಾಷ್ಟ್ರದಲ್ಲಿಯೇ ಏಕೆ ಆಯಿತು ? ಅದೂ ಕೂಡ ನಾಂದೇಡ, ಅಮರಾವತಿ ಮತ್ತು ಮಾಲೆಗಾವ್ ಈ ನಗರಗಳಲ್ಲಿಯೇ ಏಕೆ ಆಯಿತು ? ಇದು ಒಂದು ದೊಡ್ಡ ಘಟನೆಯ ಪರಿಣಾಮ ಇರಬಹುದೇ ? ಈ ಹಿಂದೆ ನಿಯೋಜನಪೂರ್ವಕ ಘಟಿಸಿರುವ ವಿನಾಶಕಾರಿ ಕೃತ್ಯಗಳು ಅಥವಾ ದೇಶದ್ರೋಹಿ ಕಾರ್ಯಗಳಿಂದ ಇಂತಹ ಸಂದೇಹ ಬರಲು ಆಸ್ಪದವಿದೆ.
೨. ಗಲಭೆಗಳ ಇತಿಹಾಸವನ್ನು ನೋಡಿದರೆ ವಿವಿಧ ಪರಿಣಾಮಗಳ ಅಭ್ಯಾಸ ಮಾಡಲು ಉಗ್ರವಾದಿ ಸಂಘಟನೆಗಳಿಂದ ಗಲಭೆಗಳ ನಿಯೋಜನೆಯನ್ನು ಮಾಡಲಾಗುತ್ತದೆ ಎಂದು ಅನಿಸುತ್ತದೆ
ಯಾವುದೇ ಮಹತ್ವದ ಉಪಕ್ರಮವನ್ನು ಮಾಡುವ ಮೊದಲು ಅದರ ಸಿದ್ಧತೆಯನ್ನು ಮಾಡುವುದು, ಅದರಲ್ಲಿನ ಕೊರತೆಗಳನ್ನು ಕಂಡುಹಿಡಿಯುವುದು, ಅದರ ಚಿಕ್ಕ ಚಿಕ್ಕ ವಿಷಯಗಳ ಸೂಕ್ಷ್ಮ ನಿರೀಕ್ಷಣೆ ಮಾಡುವುದು, ಪರಿಣಾಮಕಾರತೆಯನ್ನು ಹೆಚ್ಚಿಸಲು ಅದರಲ್ಲಿ ಆವಶ್ಯಕವಿರುವ ಬದಲಾವಣೆಗಳನ್ನು ಮಾಡುವುದು, ಈ ವಿಷಯಗಳನ್ನು ಮಾಡಲಾಗುತ್ತದೆ. ಇದರ ಜೊತೆಗೆ ನಿಯೋಜನೆ ಮಾಡಿದ ಘಟನೆಯಿಂದ ಜನರ ಮನಸ್ಸಿನ ಮೇಲೆ ಮತ್ತು ರಾಜಕಾರಣದ ಮೇಲೆ ಏನು ಪರಿಣಾಮವಾಗುತ್ತದೆ, ಹಾಗೆಯೇ ಧ್ಯೇಯವನ್ನು ತಲಪಲು ಯಾವ ಪ್ರತಿಕ್ರಿಯೆಗಳು ಸಿಗುತ್ತವೆ, ಎಂಬುದನ್ನೂ ಅಭ್ಯಾಸ ಮಾಡಲಾಗುತ್ತದೆ. ‘ಈ ಗಲಭೆಗಳ ಘಟನೆಗಳು ಮತ್ತು ಅವುಗಳ ಹಿನ್ನೆಲೆಯನ್ನು ನೋಡಿದರೆ ‘ಇದು ಒಗ್ಗಟ್ಟಿನ ಬಲ ಮತ್ತು ಅದಕ್ಕೆ ಸಿಗುವ ಪ್ರತಿಸಾದವೇ ಆಗಿರಬೇಕು’, ಎಂದು ಅನಿಸುತ್ತದೆ. ಕುಪ್ರಸಿದ್ಧ ರಝಾ ಅಕಾಡೆಮಿ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಗಳಿಂದ ಗಲಭೆಗಳ ನಿಯೋಜನೆಯನ್ನು ಮಾಡಲಾಯಿತು. ಈ ಸಂಘಟನೆಗಳ ಪೂರ್ವ ಇತಿಹಾಸವನ್ನು ನೋಡಿದರೆ ಇಂತಹ ಸಮಾಜದ್ರೋಹಿ ಹಾಗೂ ಸಾಮಾಜಿಕ ವೈಮನಸ್ಸು (ಹಗೆತನ) ನಿರ್ಮಾಣ ಮಾಡುವ ಘಟನೆಗಳನ್ನು ಘಟಿಸುವುದರಲ್ಲಿ ಅವರ ಪ್ರಮುಖ ಪಾತ್ರ ಇರುವುದು ಅನೇಕರಿಗೆ ಸಂಶಯವಿದೆ. ಇಂತಹ ಕೆಲಸಗಳಿಗಾಗಿ ಅವರಿಗೆ ದೇಶ ವಿದೇಶಗಳಿಂದ ಹಣ ಸಿಗುತ್ತದೆ.
೩. ‘ಟೂಲ್‌ಕಿಟ್’ ಈ ಕೃತಿಪದ್ಧತಿಯಲ್ಲಿ ದೇಶದ್ರೋಹಿ ಬುದ್ಧಿವಾದಿಗಳು ಭಾಗವಹಿಸುವುದು ಮತ್ತು ಸಾಮಾನ್ಯ ಭಾರತೀಯರು ಅನೇಕ ಅಯೋಗ್ಯ ವಿಷಯಗಳ ಕಡೆಗೆ ಕಣ್ಣುಮುಚ್ಚಿಕೊಂಡಿರುವುದರಿಂದ ಅವರ ಈ ವೃತ್ತಿಯೇ ವಿನಾಶಕ್ಕೆ ಕಾರಣವಾಗುವುದು
‘ಟೂಲ್‌ಕಿಟ್’ ಅಂದರೆ ವಿಶ್ಲೇಷಕರಿಂದ ವಿಶಿಷ್ಟ ಉದ್ದೇಶಗಳನ್ನು ಕ್ರಮವಾಗಿ ಪೂರ್ಣಗೊಳಿಸಲು ಅಭ್ಯಾಸಪೂರ್ಣವಾಗಿ ಸಿದ್ಧಪಡಿಸಿದ ಹಾಗೂ ಅವಲಂಬಿಸಲು ಕೊಟ್ಟಿರುವ ಕೃತಿ ಪದ್ಧತಿ ! ಅದರಲ್ಲಿ ಪ್ರತ್ಯಕ್ಷ ಕೃತಿ, ಸಾಮಾಜಿಕ ಮಾಧ್ಯಮಗಳಿಗೆ ಕಳುಹಿಸುವ ವಾಕ್ಯಗಳು, ಭಾಷಣಗಳು, ಘೋಷಣೆಗಳು ಮತ್ತು ಆಡಳಿತದಿಂದ ಸಂಭವಿಸಬಹುದಾದ ಕೃತಿಗಳಿಗೆ ಪ್ರತಿಕ್ರಿಯೆ ಇಂತಹ ವಿವಿಧ ಹಂತಗಳ ನಿಯೋಜನೆ ಇರುತ್ತದೆ. ದುರ್ಭಾಗ್ಯದಿಂದ ಭಾರತದಲ್ಲಿನ ಕೆಲವು ದೇಶದ್ರೋಹಿ ಬುದ್ಧಿವಾದಿಗಳೇ ಅದರಲ್ಲಿ ಭಾಗವಹಿಸುತ್ತಾರೆ. ವಿಶೇಷವೆಂದರೆ ಭಾರತದಲ್ಲಿನ ಸಂಘಟನೆಗಳಿಂದ ಅವರಿಗೆ ಪೂರೈಸುವ ಹಣವು ಬಹುಸಂಖ್ಯಾತ ಭಾರತೀಯರ ಕಿಸೆಯಿಂದಲೇ ವಿವಿಧ ಮಾರ್ಗಗಳಿಂದ ಅವರಿಗೆ ತಲಪುತ್ತದೆ. ಸಾಮಾನ್ಯ ಭಾರತೀಯರು ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಕನಸಿನ ರಾಜ್ಯದಲ್ಲಿ ರಮಿಸುತ್ತಿರುತ್ತಾರೆ. ಅನೇಕ ವಿಷಯಗಳು ಗಮನಕ್ಕೆ ಬಂದರೂ ‘ಅವು ನನ್ನವರೆಗೆ ಬಂದಿಲ್ಲವಲ್ಲ’, ಎಂದು ವಿಚಾರ ಮಾಡಿ ಅವುಗಳ ಕಡೆಗೆ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾರೆ. ಮುಂದೆ ಈ ವಿಷಯಗಳೇ ಅವರ ವಿನಾಶಕ್ಕೆ ಕಾರಣವಾಗಬಹುದು, ಎಂಬುದನ್ನು ಅವರು ಗಾಂಭೀರತೆಯಿಂದ ವಿಚಾರ ಮಾಡುವುದಿಲ್ಲ.
೪. ಮಾಹಿತಿ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ವಿವಿಧ ವಿಷಯಗಳನ್ನು ಸಮಾಜಕ್ಕೆ ತಲುಪಿಸಿರುವುದರಿಂದ ಪ್ರತಿಯೊಬ್ಬರಿಗೂ ಊರ್ಜಿತಾವಸ್ಥೆ ಪ್ರಾಪ್ತವಾಗುಗುವುದು
ದೇವತಾನುಗೃಹದಿಂದ ಯಾವ ವಿಷಯಗಳನ್ನು ದೀರ್ಘ ಕಾಲದಿಂದ ಅಡಗಿಸಡಲಾಗಿತ್ತೊ, ಆ ವಿಷಯಗಳ ಮಾಹಿತಿಯು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಲಪುತ್ತಿವೆ. ಇದರಿಂದ ಸಮಾಜ ಜಾಗೃತವಾಗುತ್ತಿದೆ. ಯಾವಾಗ ಸಮಾಜದ ಪ್ರತಿಯೊಬ್ಬರಿಗೂ ಊರ್ಜಿತಾವಸ್ಥೆ ಪ್ರಾಪ್ತವಾಗಿ ಅವರು ಅಕ್ಕಪಕ್ಕದಲ್ಲಿ ನೋಡತೊಡಗುವರೋ ಆಗ ಸತ್ಯವನ್ನು ಅಡಗಿಸಲು ಸಾಧ್ಯವಾಗುವುದಿಲ್ಲ. ವೈಯಕ್ತಿಕ, ಪಕ್ಷಗಳ ಹಾಗೂ ಮನೆತನದ (ಕುಟುಂಬದ) ಸ್ವಾರ್ಥಕ್ಕಾಗಿ ಸಮಾಜವಿಘಾತಕ ಮತ್ತು ದೇಶದ್ರೋಹಿ ಶಕ್ತಿಗಳಿಗೆ ಬಲವನ್ನು ನೀಡುವ ಕ್ಷುದ್ರ ರಾಜಕಾರಣಿಗಳು ಈಗ ಜನರಿಂದ ಅಡಗಿಕೊಂಡಿರಲು ಸಾಧ್ಯವಿಲ್ಲ.
೫. ಮಾನಸಿಕ ಹಾಗೂ ಬೌದ್ಧಿಕ ಸ್ಥೈರ್ಯವನ್ನು ನಿರ್ಮಿಸಲು ಸಾಧನೆ ಮಾಡುವುದು ಅಪರಿಹಾರ್ಯ !
ವಿಶಿಷ್ಟ ‘ಅಜೆಂಡಾ’ (ಕಾರ್ಯಕ್ರಮ)ವನ್ನು ಮುಂದಿಟ್ಟುಕೊಂಡು ಶಾಹೀನ್‌ಬಾಗ್, ಕೃಷಿಆಂದೋಲನ, ತ್ರಿಪುರಾದಲ್ಲಿನ ಸುಳ್ಳು ಘಟನೆಯ ಗಾಳಿಸುದ್ಧಿಯಿಂದ ಆಗಿರುವ ಗಲಭೆ ಇವುಗಳ ಮೂಲಕ ಜನರಲ್ಲಿ ಗೊಂದಲವನ್ನುಂಟು ಮಾಡುವ ಪ್ರಚಾರವನ್ನು ಮಾಡಲಾಯಿತು. ಅದಕ್ಕೆ ಜನರು ಮೋಸ ಹೋಗಬಾರದು. ನಮ್ಮಲ್ಲಿ ಮಾನಸಿಕ ಹಾಗೂ ಬೌದ್ಧಿಕ ಸ್ಥೈರ್ಯ (ಮನಸ್ಸಿನ ಗಟ್ಟಿತನ)ವನ್ನು ನಿರ್ಮಾಣ ಮಾಡಲು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ದೇಶದ್ರೋಹಿ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಪೃಥ್ವಿಯ ಮೇಲೆ ಅನಾದಿಕಾಲದಿಂದ ಈಶ್ವರನಿರ್ಮಿತ ಧರ್ಮಪಾಲನೆ ಮತ್ತು ಸಾಧನೆಯನ್ನು ಮಾಡಿ ನಮ್ಮಲ್ಲಿ ಶಕ್ತಿ, ಸಂಯಮ ಮತ್ತು ನೈತಿಕತೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಇದಕ್ಕೆ ಗುರುಕೃಪೆ ಪಡೆಯದೇ ಬೇರೆ ಪರ್ಯಾಯವಿಲ್ಲ.
– ಓರ್ವ ಮಾಜಿ ಪೊಲೀಸ್ ಅಧಿಕಾರಿಗಳು