ಪಾಕಿಸ್ತಾನ: ಭಯೋತ್ಪಾದಕ ಹಫೀಜ್ ಸಯೀದ್ ನ ಸಂಬಂಧಿಯ ಅಪರಿಚಿತ ದಾಳಿಕೋರರಿಂದ ಹತ್ಯೆ

ಕರಾಚಿ (ಪಾಕಿಸ್ತಾನ) – ಲಷ್ಕರ್-ಎ-ತೊಯ್ಬಾ ಸ್ಥಾಪಕ ಮತ್ತು ಮುಂಬಯಿ ದಾಳಿಯ ಮುಖ್ಯ ಸೂತ್ರಧಾರನಾದ ಭಯೋತ್ಪಾದಕ ಹಫೀಜ್ ಸಯೀದ್ ನ ಸಂಬಂಧಿಯಾಗಿದ್ದ ಭಯೋತ್ಪಾದಕನನ್ನು ಕರಾಚಿಯಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೊಳಲಾದ ಭಯೋತ್ಪಾದಕನ ಹೆಸರು ಅಬ್ದುಲ್ ರೆಹಮಾನ್ ಎಂದಾಗಿದ್ದು, ಅವನು ಲಷ್ಕರ್-ಎ- ತೊಯ್ಬಾಗಾಗಿ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದನು.

ಹತ್ಯೆಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂಗಡಿಯಲ್ಲಿರುವ ಅಬ್ದುಲ್ ರೆಹಮಾನ್ ನಿಂದ ಸರಕುಗಳನ್ನು ಖರೀದಿಸಲು ಒಬ್ಬ ವ್ಯಕ್ತಿ ಬರುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಅಂಗಡಿಗೆ ಬಂದಂತಹ ಆ ವ್ಯಕ್ತಿ ಅಬ್ದುಲ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಂಡು ತಾಗಿದ ಅಬ್ದುಲ್ ರೆಹಮಾನ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವನು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಕೆಲವು ದಿನಗಳ ಹಿಂದೆ, ಭಯೋತ್ಪಾದಕ ಫೈಸಲ್ ನದೀಮ್ ಅಲಿಯಾಸ್ ಅಬು ಕಟಲ್ ಸಿಂಧಿ ಅವನನ್ನು ಅಪರಿಚಿತ ವ್ಯಕ್ತಿಗಳು ಕೊಂದಿದ್ದರು. ಅಬು ಕತಾಲ್ ಹಫೀಜ್ ಸಯೀದ್ ನ ಸೋದರಳಿಯನಾಗಿದ್ದನು.