Vikramaditya Vedic App : ಗೃಹ ಸಚಿವ ಅಮಿತ್ ಶಾ ಇವರಿಂದ ‘ವಿಕ್ರಮಾದಿತ್ಯ ವೈದಿಕ ಆ್ಯಪ್’ ಲೋಕಾರ್ಪಣೆ!

ಉಜ್ಜಯಿನಿ (ಮಧ್ಯಪ್ರದೇಶ) – ಕೇಂದ್ರ ಗೃಹ ಸಚಿವ ಅಮಿತ್ ಶಾ ಉಜ್ಜಯಿನಿಯಲ್ಲಿ ‘ವಿಕ್ರಮಾದಿತ್ಯ ವೈದಿಕ ಆ್ಯಪ್’ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಆ್ಯಪ್ ಮೂಲಕ 189 ಭಾಷೆಗಳಲ್ಲಿ ಗ್ರಹಗಳು, ನಕ್ಷತ್ರಗಳು ಮತ್ತು ಶುಭ ಸಮಯವನ್ನು ತಿಳಿದುಕೊಳ್ಳಬಹುದು. ಇದಲ್ಲದೆ, ಈ ಆ್ಯಪ್‌ನಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಸಮಯದ ಲೆಕ್ಕಾಚಾರದೊಂದಿಗೆ ಪಂಚಾಂಗದ ಇತರ ವಿವರಗಳ ಮಾಹಿತಿಯೂ ಇರುತ್ತದೆ. ಉಜ್ಜಯಿನಿಯಲ್ಲಿ ಈ ಹಿಂದೆ ವೈದಿಕ ಗಡಿಯಾರವನ್ನು ಲೋಕಾರ್ಪಣೆ ಮಾಡಲಾಗಿತ್ತು. ಈ ಆ್ಯಪ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ವಿಕ್ರಮಾದಿತ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಶ್ರೀರಾಮ ತಿವಾರಿ ಅವರು, ಪ್ರಸ್ತುತ ಈ ಆ್ಯಪ್ ಅನ್ನು ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ಪ್ರಾರಂಭಿಸುವ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಅದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಮತ್ತು ಏಪ್ರಿಲ್‌ನಲ್ಲಿ ಅದನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಪ್ರಧಾನ ಮಂತ್ರಿಯವರು ವಿಕ್ರಮಾದಿತ್ಯ ವೈದಿಕ ಗಡಿಯಾರವನ್ನು ಲೋಕಾರ್ಪಣೆ ಮಾಡಿದ್ದರು!

ಫೆಬ್ರವರಿ 29, 2024 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಜಯಿನಿಯಲ್ಲಿ ವಿಕ್ರಮಾದಿತ್ಯ ವೈದಿಕ ಗಡಿಯಾರವನ್ನು ಲೋಕಾರ್ಪಣೆ ಮಾಡಿದ್ದರು. ಇದು ಭಾರತೀಯ ಸಮಯದ ಲೆಕ್ಕಾಚಾರವನ್ನು ಆಧರಿಸಿದ ವಿಶ್ವದ ಮೊದಲ ಗಡಿಯಾರವಾಗಿದೆ, ಇದನ್ನು ವೈದಿಕ ಸಮಯದ ಲೆಕ್ಕಾಚಾರದ ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಿ ತಯಾರಿಸಲಾಗಿದೆ. ಈ ಗಡಿಯಾರದಲ್ಲಿ ವಿಕ್ರಮ ಸಂವತ್, ಯೋಗ, ಭಾದ್ರ, ಹಬ್ಬಗಳು, ಶುಭ ಮತ್ತು ಅಶುಭ ಸಮಯ, ಘಟಿಕ, ನಕ್ಷತ್ರಗಳು, ಜಯಂತಿಗಳು, ವ್ರತಗಳು, ಉತ್ಸವಗಳು, ಚೌಘಡಿಯಾ, ಸೂರ್ಯಗ್ರಹಣ, ಚಂದ್ರಗ್ರಹಣ, ಗ್ರಹಗಳು, ನಕ್ಷತ್ರಗಳ ಲೆಕ್ಕಾಚಾರ ಇತ್ಯಾದಿಗಳನ್ನು ಒಳಗೊಂಡಿದೆ.