ತ್ರಿಶೂರಿನಲ್ಲಿ ನಡೆದ ಉತ್ಸವದ ಚಿತ್ರಪ್ರದರ್ಶನದಲ್ಲಿ ಸ್ವಾತಂತ್ರ್ಯ ವೀರ ಸಾವರಕರರವರ ಛಾಯಾಚಿತ್ರದ ಬಳಕೆಯನ್ನು ವಿರೋಧಿಸಿದ ಕಾಂಗ್ರಸ ಹಾಗೂ ಮಾಕಪ

ತ್ರಿಶೂರ (ಕೇರಳ) – ಇಲ್ಲಿ ತ್ರಿಶೂರ ಪೂರಂ ಉತ್ಸವದಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ಮಾಡಲಾಯಿತು. ಅದರಲ್ಲಿ ‘ಪರಮೆಕ್ಕಾವು ದೆವಸ್ವಮ್’ನ ವತಿಯಿಂದ ನಡೆಸಲಾದ ಚಿತ್ರ ಪ್ರದರ್ಶನದಲ್ಲಿ ಬಳಸಲಾದ ಕೊಡೆಯ ಮೇಲೆ ಸ್ವಾತಂತ್ರ್ಯ ವೀರ ಸಾವರಕರರವರ ಛಾಯಾಚಿತ್ರವನ್ನು ಬಳಸಲಾಗಿತ್ತು. ಈ ಕೊಡೆಗಳ ಬಗ್ಗೆ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷ ಮತ್ತು ಕಾಂಗ್ರೆಸ ಆಕ್ಷೇಪ ವಹಿಸಿದ್ದರಿಂದ ಅವುಗಳನ್ನು ಬದಿಗಿಡಲು ತೀರ್ಮಾನಿಸಲಾಗಿದೆ. ಈ ಉತ್ಸವದಲ್ಲಿ ವಿವಿಧ ದೇವಾಲಯಗಳು ಭಾಗವಹಿಸುತ್ತವೆ. ಅದರಲ್ಲಿ ಕೆಲವರು ಮ. ಗಾಂಧಿ, ಭಗತಸಿಂಹ ಇತ್ಯಾದಿಯವರ ಛಾಯಾಚಿತ್ರಗಳನ್ನು ಬಳಸಿದ್ದಾರೆ.

ಸಂಪಾದಕೀಯ ನಿಲುವು

ಸ್ವಾತಂತ್ರ್ಯವೀರ ಸಾವರಕರರವರನ್ನು ವಿರೋಧಿಸುವ ಕಾಂಗ್ರೆಸ ಮತ್ತು ಮಾಕಪ ರಾಷ್ಟ್ರ ದ್ರೋಹಿಗಳೇ ಸರಿ !