ಔರಂಗಜೇಬ್‌ಪುರ, ಶಿವಾಜಿನಗರ ಮತ್ತು ಮಿಯಾನ್‌ವಾಲಾ ರಾಮ್‌ಜಿವಾಲಾ ಎಂದು ಹೆಸರನ್ನು ಬದಲಾಯಿಸಲಾಗಿದೆ!

ಉತ್ತರಾಖಂಡ: ಈದ್ ಹಬ್ಬದಂದು 17 ಸ್ಥಳಗಳ ಹೆಸರುಗಳನ್ನು ಬದಲಾಯಿಸಿದ ಸರಕಾರ

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಹರಿದ್ವಾರ, ಡೆಹ್ರಾಡೂನ್, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಈ 4 ಜಿಲ್ಲೆಗಳಲ್ಲಿನ 14 ಸ್ಥಳಗಳ ಹೆಸರನ್ನು ಈದ್ ಹಬ್ಬದ ದಿನದಂದು ಬದಲಾಯಿಸಿದ್ದಾರೆ. ಸಾರ್ವಜನಿಕ ಭಾವನೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆಧಾರದ ಮೇಲೆ ಈ ಹೆಸರುಗಳ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಈ ಮೂಲಕ, ಜನರು ಭಾರತೀಯ ಸಂಸ್ಕೃತಿ ಮತ್ತು ಅದರ ಸಂರಕ್ಷಣೆಗೆ ಕೊಡುಗೆ ನೀಡಿದ ಮಹಾನ್ ಪುರುಷರಿಂದ ಸ್ಫೂರ್ತಿ ಪಡೆಯಬಹುದು.

ಹರಿದ್ವಾರ ಜಿಲ್ಲೆ

ಇಸ್ಲಾಮಿ ಹೆಸರು

ಬದಲಾಯಿಸಿದ ಹೆಸರು

ಔರಂಗಜೇಬಪುರ ಶಿವಾಜಿನಗರ
ಗಾಜಿವಲಿ ಆರ್ಯನಗರ
ಚಾಂದಪುರ ಜ್ಯೋತಿಬಾ ಫುಲೆ ನಗರ
ಮಹಮ್ಮದಪುರ ಜಾಟ ಮೊಹನಪುರ ಜಾಟ
ಖಾನಪುರ ಕುರ್ಸಾಲಿ ಅಂಬೇಡಕರನಗರ
ಖಾನಪುರ ಶ್ರೀಕೃಷ್ಣಪುರ
ಇಂದ್ರೇಶಪುರ ನಂದಪುರ
ಅಕಬರಪುರ ಫಜಲಪುರ ವಿಜಯನಗರ

ಡೆಹರಾಡೂನ್ ಜಿಲ್ಲೆ

ಇಸ್ಲಾಮಿ ಹೆಸರು

ಬದಲಾಯಿಸಿದ ಹೆಸರು

ಮಿಯಾಂವಾಲಾ ರಾಮಜಿವಾಲಾ
ಪಿರವಾಲಾ ಕೇಶರಿನಗರ
ಚಾಂದಪುರ ಖುರ್ದ ಪೃಥ್ವಿರಾಜ ನಗರ
ಅಬ್ದುಲ್ಲಾ ನಗರ ದಕ್ಷನಗರ

ಇದರೊಂದಿಗೆ, ನೈನಿತಾಲ್ ಜಿಲ್ಲೆಯ ‘ನವಾಬಿ ರಸ್ತೆ’ಯನ್ನು ‘ಅಟಲ್ ಮಾರ್ಗ’ ಎಂದು ಮರುನಾಮಕರಣ ಮಾಡಲಾಗಿದೆ ಹಾಗೂ, ಉಧಮ್ ಸಿಂಗ್ ನಗರದಲ್ಲಿರುವ ಸುಲ್ತಾನ್‌ಪುರ ಪಟ್ಟಿ ನಗರಸಭೆ (ಮುನ್ಸಿಪಲ್ ಕೌನ್ಸಿಲ್) ಹೆಸರನ್ನು ಕೌಶಲ್ಯ ಪುರಿ ಎಂದು ಮರುನಾಮಕರಣ ಮಾಡಲಾಗುವುದು. ಹರಿದ್ವಾರದ ಸಲೆಂಪುರವನ್ನು ‘ಶೂರಸೇನ್ ನಗರ’ ಎಂದು ಮರುನಾಮಕರಣ ಮಾಡಲಾಯಿತು.

ಸಂಪಾದಕೀಯ ನಿಲುವು

ಉತ್ತರಾಖಂಡದ ಬಿಜೆಪಿ ಸರಕಾರಕ್ಕೆ ಈ ಬದಲಾವಣೆ ಮಾಡಲು ಸಾಧ್ಯವಾದರೆ, ಇತರ ರಾಜ್ಯಗಳಿಗೆ ಏಕೆ ಸಾಧ್ಯವಿಲ್ಲ?