ಮೈಹರ ನಗರದಲ್ಲಿ ಹಿಂದೂ ಹಬ್ಬಗಳಲ್ಲಿ ಮಾಂಸ, ಮೀನು ಮತ್ತು ಮೊಟ್ಟೆಗಳ ಮಾರಾಟ ನಿಷೇಧ
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿ ಚೈತ್ರ ನವರಾತ್ರಿ ಮತ್ತು ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಅನೇಕ ನಗರಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರದ ನಿರ್ಧಾರದ ಪ್ರಕಾರ 17 ಪವಿತ್ರ ನಗರಗಳಲ್ಲಿನ ಮದ್ಯದ ಅಂಗಡಿಗಳನ್ನು ಏಪ್ರಿಲ್ 1, 2025 ರಿಂದ ಶಾಶ್ವತವಾಗಿ ಮುಚ್ಚಲಾಗುವುದು. ನಿಯಮಗಳನ್ನು ಉಲ್ಲಂಘಿಸುವವರನ್ನು ಬಿಡಲಾಗುವುದಿಲ್ಲ ಎಂದು ಆಡಳಿತ ಎಚ್ಚರಿಸಿದೆ.
1. ಆಡಳಿತವು ಮಾತಾ ಶ್ರೀ ಶೀತಲಾದೇವಿಯ ನಗರವಾದ ಮೈಹಾರದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 7, 2025 ರವರೆಗೆ ನಡೆಯುವ ಚೈತ್ರ ನವರಾತ್ರಿ ಮೇಳಕ್ಕೆ ಮಾಂಸ, ಮೀನು ಮತ್ತು ಮೊಟ್ಟೆಗಳ ಮಾರಾಟವನ್ನು ನಿಷೇಧಿಸಿದೆ. ಭಕ್ತರ ಶ್ರದ್ಧೆ ಮತ್ತು ಧಾರ್ಮಿಕ ವಾತಾವರಣವನ್ನು ಗೌರವಿಸಲು ಈ ನಿಷೇಧವನ್ನು ವಿಧಿಸಲಾಗಿದೆ, ಎಂದು ಉಪವಿಭಾಗೀಯ ಅಧಿಕಾರಿ ವಿಕಾಸ್ ಸಿಂಗ್ ಹೇಳಿದ್ದಾರೆ.
2. ಇದಲ್ಲದೆ, ಭೋಪಾಲ್ ಮತ್ತು ಇಂದೋರ್ ನಗರಗಳಲ್ಲಿ ಶ್ರೀರಾಮನವಮಿ (ಏಪ್ರಿಲ್ 6), ಮಹಾವೀರ ಜಯಂತಿ (ಏಪ್ರಿಲ್ 10) ಮತ್ತು ಬುದ್ಧ ಪೂರ್ಣಿಮೆ (ಮೇ 12) ರಂದು ಮಾಂಸ ಮಾರಾಟದ ಅಂಗಡಿಗಳು ಮುಚ್ಚಲ್ಪಡುತ್ತವೆ. ಭಾಜಪ ನಾಯಕ ರಾಕೇಶ ಸಿಂಗ ಮತ್ತು ಶಾಸಕರ ಬೇಡಿಕೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಂಪಾದಕೀಯ ನಿಲುವುದೇಶದ ಎಲ್ಲಾ ಧಾರ್ಮಿಕ ಮತ್ತು ಪವಿತ್ರ ನಗರಗಳಲ್ಲಿ ಇಂತಹ ನಿಷೇಧವನ್ನು ಹೇರುವುದು ಅವಶ್ಯಕ. ಹಾಗೂ ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಷ್ಟೇ ಮುಖ್ಯ. ಇದಕ್ಕಾಗಿ ಆಡಳಿತ ಮತ್ತು ಪೊಲೀಸರು ಜಾಗರೂಕರಾಗಿರಬೇಕು! |