ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕನ ಬಂಧನ

ಮಹಿಳೆಯ ಬಲೆಗೆ ಸಿಲುಕಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನೆ

ನವದೆಹಲಿ – ದೆಹಲಿ ಪೊಲೀಸರು ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕ ದೇವೇಂದ್ರನನ್ನು ಬಂಧಿಸಿದ್ದಾರೆ. ಈ ಗೂಢಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡ ಇರುವುದೆಂದು ಹೇಳಲಾಗುತ್ತಿದೆ. ದೇವೇಂದ್ರನು ಸಾಮಾಜಿಕ ಮಾಧ್ಯಮದಲ್ಲಿ ಒಬ್ಬ ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿದ. ಆತ ಈ ಮಹಿಳೆಯ ಜೊತೆ ದೂರವಾಣಿಯಲ್ಲಿ ಅಶ್ಲೀಲ ಸಂದೇಶದ ಮೂಲಕ ಸಂವಾದ ನಡೆಸುತ್ತಿದ್ದನು. ಈ ಸಮಯದಲ್ಲಿ ಅವನು ಆಕೆಯ ಬಲೆಗೆ ಸಿಲುಕಿದನು ಮತ್ತೆ ಅವನು ವಾಯುದಳದ ಗೌಪ್ಯ ಮಾಹಿತಿ ಆ ಮಹಿಳೆಗೆ ಪೂರೈಸಿದನು. ಪೊಲೀಸರ ಶೋಧದಲ್ಲಿ ದೇವೇಂದ್ರನ ಪತ್ನಿಯ ಬ್ಯಾಂಕ್ ಅಕೌಂಟಿಗೆ ಕೆಲವು ಸಂದೇಹಾಸ್ಪದ ಆರ್ಥಿಕ ವ್ಯವಹಾರ ನಡೆದಿರುವುದು ಕಂಡುಬಂತು.

ಪೊಲೀಸರ ಪ್ರಕಾರ, ದೇವೇಂದ್ರನಿಂದ ‘ವಾಯುದಳದಲ್ಲಿ ಎಷ್ಟು ರಡಾರ್ ನೇಮಿಸಲಾಗಿದೆ ? ಹಾಗೂ ವಾಯುದಳದ ವರಿಷ್ಠಾಧಿಕಾರಿಗಳ ಹೆಸರು ಅವರ ವಿಳಾಸ ಏನು ?’ ಮುಂತಾದ ಮಾಹಿತಿ ಕಲೆ ಹಾಕುವ ಈ ಮಹಿಳೆ ಪ್ರಯತ್ನಿಸಿದ್ದಾಳೆ.

ಸಂಪಾದಕೀಯ ನಿಲುವು

ಇಂತಹ ಸೈನಿಕರಿಗೆ ಗಲ್ಲು ಶಿಕ್ಷೆ ನೀಡುವುದಕ್ಕೆ ಸರಕಾರ ಪ್ರಯತ್ನಿಸಬೇಕು, ಅಂದರೆ ಬೇರೆ ಯಾರೇ ಇಂತಹ ತಪ್ಪು ಮಾಡುವ ಧೈರ್ಯ ತೋರುವುದಿಲ್ಲ !