Sunita Williams Space Experience : ಬಾಹ್ಯಾಕಾಶದಿಂದ ಭಾರತವು ದೀಪಗಳ ಜಾಲವನ್ನು ಹರಡಿದಂತೆ ಕಾಣುತ್ತದೆ! – ಸುನೀತಾ ವಿಲಿಯಮ್ಸ್

  • ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಬಂದ ನಂತರ ನೀಡಿದ ಮಾಹಿತಿ

  • ಭಾರತಕ್ಕೆ ಭೇಟಿ ನೀಡುವ ಬಗ್ಗೆ ಸುಳಿವು !

ಸೌಜನ್ಯ : ANI

ವಾಷಿಂಗ್ಟನ (ಅಮೇರಿಕಾ) – ಅಮೇರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದು ಕೆಲವು ದಿನಗಳ ಹಿಂದೆ ಭೂಮಿಗೆ ಮರಳಿದರು. ಬಂದ ನಂತರ ಅವರು ಮೊದಲ ಬಾರಿಗೆ ಪತ್ರಕರ್ತರೊಂದಿಗೆ ಮಾತನಾಡಿದರು. ಈ ವೇಳೆ ಪತ್ರಕರ್ತರು ಅವರಿಗೆ ಭಾರತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ‘ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಸುನೀತಾ, “ಭಾರತ ಒಂದು ಮಹಾನ್ ದೇಶವಾಗಿದೆ. ಅದು ದೀಪಗಳ ಜಾಲ ಹರಡಿದಂತೆ ಕಾಣಿಸುತ್ತದೆ. ಗುಜರಾತ, ಮಹಾರಾಷ್ಟ್ರ, ಎಲ್ಲಾ ಸಣ್ಣ-ದೊಡ್ಡ ನಗರಗಳು ಮತ್ತು ಸಮುದ್ರ… ಇದು ಅದ್ಭುತವಾಗಿದೆ” ಎಂದರು.

1. ಸುನೀತಾ ವಿಲಿಯಮ್ಸ್ ಮುಂದೆ ಮಾತನಾಡುತ್ತಾ, ಭಾರತ ಒಂದು ಅಲೆಯಂತೆ ಇದೆ. ಆ ಅಲೆ ಭಾರತದಲ್ಲಿ ಕೆಳಮುಖವಾಗಿ ಹರಿಯುತ್ತದೆ. ಅದು ಹಲವು ಬಣ್ಣಗಳಲ್ಲಿ ಕಾಣಿಸುತ್ತದೆ. ನೀವು ಪೂರ್ವದಿಂದ ಗುಜರಾತ ಮತ್ತು ಮುಂಬಯಿಗೆ ಬಂದಾಗ ಅಲ್ಲಿನ ಕರಾವಳಿಯ ಮೀನುಗಾರರ ಪಡೆಯು ‘ನಾವು ಇಲ್ಲಿಗೆ ಬಂದಿದ್ದೇವೆ’ ಎಂಬ ಸಣ್ಣ ಸೂಚನೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಆಗ ನನಗೆ ಸಂಪೂರ್ಣ ಭಾರತದಲ್ಲಿ ಅದು ದೊಡ್ಡ ನಗರಗಳಿಂದ ಸಣ್ಣ ನಗರಗಳಿಗೆ ಹೋಗುವ ದೀಪಗಳ ಜಾಲದಂತೆ ಭಾಸವಾಯಿತು. ರಾತ್ರಿ ಮತ್ತು ಹಗಲು ಎರಡೂ ಸಮಯದಲ್ಲಿ ಅದನ್ನು ನೋಡುವುದು ಅದ್ಭುತವಾಗಿದೆ” ಎಂದರು.

2. ಪತ್ರಿಕಾಗೋಷ್ಠಿಯಲ್ಲಿ ಸುನೀತಾ ಅವರು ತಮ್ಮ ಸಂಭಾವ್ಯ ಭಾರತ ಭೇಟಿಯ ಬಗ್ಗೆಯೂ ಮಾತನಾಡಿದರು. ಅವರು, “ನಾನು ನನ್ನ ತಂದೆಯ ದೇಶಕ್ಕೆ ಹೋಗಲು ಆಶಿಸುತ್ತೇನೆ. ಅಲ್ಲಿ ನಾನು ‘ಆಕ್ಸಿಓಮ್ ಮಿಷನ್’ಗೆ (ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಕಾರ್ಯಾಚರಣೆ. ಇದರಲ್ಲಿ ಒಬ್ಬ ಭಾರತೀಯನೂ ಸೇರಿದ್ದಾನೆ) ಹೋಗುವ ಭಾರತೀಯ ನಾಗರಿಕನನ್ನು ಭೇಟಿಯಾಗುತ್ತೇನೆ. ನಾನು ಅವನನ್ನು ಖಂಡಿತವಾಗಿಯೂ ಭೇಟಿಯಾಗುತ್ತೇನೆ. ನಾವು ನಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಭಾರತ ಒಂದು ಮಹಾನ್ ದೇಶವಾಗಿದೆ. ಅಲ್ಲಿ ಒಂದು ಅದ್ಭುತ ಪ್ರಜಾಪ್ರಭುತ್ವವಿದೆ, ಅದು ಬಾಹ್ಯಾಕಾಶ ಜಗತ್ತಿನಲ್ಲಿ ತನ್ನ ಕಾಲೂರಿದೆ. ನಾವು ಇದರ ಭಾಗವಾಗಲು ಮತ್ತು ಅವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಇಸ್ರೋಗೂ ನಾವು ಸಹಾಯ ಮಾಡುತ್ತೇವೆ” ಎಂದು ಅವರು ಹೇಳಿದರು.