ನವದೆಹಲಿ – ವಕ್ಫ ಸುಧಾರಣೆ ಮಸೀದೆಯನ್ನು ಇಂದು ಮಧ್ಯಾಹ್ನ ೧೨ ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಾಗುವುದು. ಏಪ್ರಿಲ್ ೧ ಕ್ಕೆ ನಡೆದ ಸಂಪುಟ ಸಭೆಯ ಕಾರ್ಯಕಲಾಪದ ಸಲಹೆಗಾರ ಸಮಿತಿಯ ಸಭೆಯಲ್ಲಿ ಈ ಮಸೂದೆ ಸಭಾಗೃಹದಲ್ಲಿ ಮಂಡಿಸುವ ನಿರ್ಣಯ ಕೈಗೊಳ್ಳಲಾಗಿದೆ. ಈ ಮಸೂದೆಯ ಕುರಿತು ೮ ಗಂಟೆಗಳ ಕಾಲ ಚರ್ಚೆ ನಡೆಯುವುದು. ಅದಕ್ಕೂ ಮೊದಲು ವಿರೋಧ ಪಕ್ಷದ ಸದಸ್ಯರು ಕೂಡ ಸಲಹಗಾರ ಸಮಿತಿಯ ಸಭೆಯಲ್ಲಿ ಭಾಗವಹಿಸುವರು. ವಿರೋಧ ಪಕ್ಷದ ಸದಸ್ಯರು, ಸರಕಾರ ವಿರೋಧಿ ಪಕ್ಷಕ್ಕೆ ಸಂಬಂಧಿತ ಅಂಶಗಳ ಕುರಿತು ಗಂಭೀರವಾಗಿಲ್ಲ ಎಂದು ಆರೋಪಿಸುತ್ತಾ ಸಭಾತ್ಯಾಗ ಮಾಡಿದರು. ಸಂಸದೀಯ ಕಾರ್ಯಕಲಾಪ ಸಚಿವ ಕಿರಣ್ ರೀಜೀಜೂ ಇವರು, ವಕ್ಫ್ ಮಸೂದೆಯ ಕುರಿತು ೮ ಗಂಟೆಗಳ ಕಾಲ ಚರ್ಚೆ ನಡೆಯಲಿದೆ. ಅಗತ್ಯದ ಪ್ರಕಾರ ಸಮಯ ಹೆಚ್ಚಿಸಬಹುದು. ಪ್ರತಿಯೊಂದು ಪಕ್ಷಕ್ಕೆ ವಿಚಾರ ಮಂಡಿಸುವ ಅಧಿಕಾರವಿದೆ. ವಿಧೇಯಕದ ಕುರಿತು ನಾವು ಚರ್ಚಿಸಬೇಕಿದೆ. ಈ ಅಂಶಗಳ ಕುರಿತು ನಾವು ಎಲ್ಲಾ ಪಕ್ಷಗಳ ಜೊತೆಗೆ ಸವಿಸ್ತಾರ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.