ರಸ್ತೆಗಳು ಇರೋದು ನಡೆದಾಡಲು ಹೊರತು ನಮಾಜಗಾಗಿ ಅಲ್ಲ ! – ಯೋಗಿ ಆದಿತ್ಯನಾಥ

  • ಹಿಂದೂಗಳಿಂದ ಧಾರ್ಮಿಕ ಶಿಸ್ತು ಕಲಿಯಲು ಸಲಹೆ ನೀಡಲಾಯಿತು !

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಖಡಕ್ ಎಚ್ಚರಿಕೆ

ನವದೆಹಲಿ – ಮೇರಠನಲ್ಲಿ ರಸ್ತೆಗಳಲ್ಲಿ ನಮಾಜಪಠಣ ಮಾಡುವ ಸಂದರ್ಭದಲ್ಲಿ ಹೊರಡಿಸಲಾದ ಆದೇಶಗಳು ಸರಿಯಾಗಿವೆ. ರಸ್ತೆಗಳು ನಡೆದಾಡಲು ಇರುತ್ತವೆ. ರಸ್ತೆಯಲ್ಲಿ ನಮಾಜಪಠಣ ಮಾಡುವ ಬಗ್ಗೆ ಮಾತನಾಡುವವರು ಹಿಂದೂಗಳಿಂದ ಶಿಸ್ತು ಕಲಿಯಬೇಕು. ಪ್ರಯಾಗರಾಜನಲ್ಲಿ ಮಹಾಕುಂಭಮೇಳಕ್ಕಾಗಿ 66 ಕೋಟಿ ಜನರು ಬಂದಿದ್ದರು. ಎಲ್ಲಿಯೂ ಲೂಟಿ, ಆಕ್ರಮಣ, ಕಿರುಕುಳ, ವಿಧ್ವಂಸ, ಅಪಹರಣದಂತಹ ಘಟನೆಗಳು ನಡೆದಿಲ್ಲ. ಇದುವೇ ಧಾರ್ಮಿಕ ಶಿಸ್ತು. ಶ್ರದ್ಧೆಯಿಂದ ಬಂದರು, ಮಹಾಸ್ನಾನ ಮಾಡಿದರು ಮತ್ತು ತಮ್ಮ ಮನೆಗಳಿಗೆ ಮರಳಿದರು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ರಸ್ತೆಯಲ್ಲಿ ನಮಾಜ ಪಠಣದ ಮೇಲಿನ ನಿಷೇಧವನ್ನು ಸಮರ್ಥಿಸಿದರು. ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಉತ್ಸವಗಳನ್ನು ಶಿಸ್ತಿನಿಂದ ಆಚರಿಸಬೇಕು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಮಾತನ್ನು ಮುಂದುವರಿಸಿ, ಉತ್ಸವಗಳು ಅಶಿಸ್ತಿನ ಅಸಹ್ಯಕರ ಪ್ರದರ್ಶನವಾಗಬಾರದು. ನಿಮಗೆ ಸೌಲಭ್ಯಗಳು ಬೇಕಾದರೆ ನೀವು ಶಿಸ್ತು ಪಾಲಿಸಬೇಕು. ನೀವು ಇದೆಲ್ಲವನ್ನು ಕಾವಡ ಯಾತ್ರೆಯೊಂದಿಗೆ ಹೋಲಿಸುತ್ತೀರಿ. ಕಾವಡ ಯಾತ್ರೆಯು ಹರಿದ್ವಾರದಿಂದ (ಉತ್ತರಾಖಂಡ) ಗಾಜಿಯಾಬಾದವರೆಗೆ (ಉತ್ತರ ಪ್ರದೇಶ) ಹೋಗುತ್ತದೆ. ಆದುದರಿಂದ ಅದು ರಸ್ತೆಯ ಮೂಲಕವೇ ಸಾಗಬೇಕು. ನಾವು ಎಂದಾದರೂ ಮುಸ್ಲಿಂ ಸಮುದಾಯದ ಮೆರವಣಿಗೆಯನ್ನು ತಡೆದಿದ್ದೇವೆಯೇ? ಮೊಹರಂನ ಮೆರವಣಿಗೆಯೂ ನಡೆಯುತ್ತದೆ. ನಾವು ತಾಜಿಯಾದ (ಮೊಹರಂ ಮೆರವಣಿಗೆಯ ಧಾರ್ಮಿಕ ಗೋಪುರ) ಎತ್ತರವನ್ನು ಕಡಿಮೆ ಮಾಡಲು ಹೇಳುತ್ತೇವೆ. ಇದು ಅವರ ಸುರಕ್ಷತೆಗಾಗಿಯೇ ಇದೆ; ಏಕೆಂದರೆ ಮೇಲೆ ವಿದ್ಯುತ್ ತಂತಿಗಳಿವೆ. ಆದುದರಿಂದ ಎತ್ತರವನ್ನು ಕಡಿಮೆ ಮಾಡಿ ಎಂದು ಹೇಳುತ್ತೇವೆ. ವಿದ್ಯುತ್ ತಂತಿಗಳ ಸ್ಪರ್ಶವಾದರೆ ಜೀವಕ್ಕೆ ಅಪಾಯವಾಗಬಹುದು, ಎಂದು ಹೇಳಿದರು.

ಈದ್ಗಾ ಅಥವಾ ಮಸೀದಿಗಳು ನಮಾಜಪಠಣ ಮಾಡುವ ಸ್ಥಳವಾಗಿವೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು, ಕಾವಡ ಯಾತ್ರೆಯಲ್ಲಿಯೂ ನಾವು, ‘ಡಿಜೆ’ಯ (ದೊಡ್ಡ ಸಂಗೀತ ವ್ಯವಸ್ಥೆ) ಎತ್ತರವನ್ನು ಕಡಿಮೆ ಮಾಡಿ ಎಂದು ಹೇಳಿದ್ದೇವೆ. ಯಾರು ಮಾಡುವುದಿಲ್ಲವೋ ಅವರನ್ನು ನಾವು ಹಾಗೆ ಮಾಡಲು ಒತ್ತಾಯಿಸುತ್ತೇವೆ. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಈದ್ ನ ದಿನದಂದು ನೀವು ಗಂಟೆಗಟ್ಟಲೆ ನಮಾಜಪಠಣದ ಹೆಸರಿನಲ್ಲಿ ರಸ್ತೆ ತಡೆ ಮಾಡುತ್ತೀರಾ? ನಮಾಜಪಠಣ ಮಾಡುವ ಸ್ಥಳವು ಈದ್ಗಾ ಅಥವಾ ಮಸೀದಿಯಾಗಬಹುದು ಆದರೆ ರಸ್ತೆಯಲ್ಲ, ಎಂದೂ ಹೇಳಿದರು.

ಸಂಪಾದಕೀಯ ನಿಲುವು

  • ದೇಶದ ಯಾವುದೇ ಆಡಳಿತಗಾರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೆ ಸ್ಪಷ್ಟ ಮತ್ತು ನೇರ ಮಾತುಗಳಲ್ಲಿ ಮಾತನಾಡುತ್ತಾರೆಯೇ ಹಾಗೂ ಅದರಂತೆ ಕೃತಿ ಮಾಡುತ್ತಾರೆಯೇ ?
  • ಯೋಗಿ ಆದಿತ್ಯನಾಥರಂತಹ ಸನ್ಯಾಸಿ, ತ್ಯಾಗಿ ಮತ್ತು ಸಂತ ವೃತ್ತಿಯ ಆಡಳಿತಗಾರರನ್ನು ತರಲು ಹಿಂದೂಗಳು ಈಗ ಸಂಘಟಿತವಾಗಿ ಪ್ರಯತ್ನಿಸಬೇಕು !