Archaeologist Muhammad Explanation : ಭಾರತವು ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದರೆ, ಅದು ಎಂದಿಗೂ ಜಾತ್ಯತೀತವಾಗುತ್ತಿರಲಿಲ್ಲ!

ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಇವರ ಸ್ಪಷ್ಟೀಕರಣ

ನವದೆಹಲಿ – ಭಾರತವು ಕೇವಲ ಹಿಂದೂ ಬಹುಸಂಖ್ಯಾತ ದೇಶವಾಗಿರುವುದರಿಂದ ಅದು ಜಾತ್ಯತೀತವಾಗಿದೆ. ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ, ಭಾರತವು ಎಂದಿಗೂ ಜಾತ್ಯತೀತವಾಗುತ್ತಿರಲಿಲ್ಲ, ಎಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಭೂ ಸಮೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ. ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಕೆ.ಕೆ. ಮುಹಮ್ಮದ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಅವರು ಪ್ರಸ್ತುತ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಸದಸ್ಯರಾಗಿದ್ದಾರೆ. ಕೆ.ಕೆ. ಮುಹಮ್ಮದ್ ಅವರು ಈ ಹಿಂದೆ ಮಥುರಾ ಮತ್ತು ಜ್ಞಾನವಾಪಿ ರಚನೆಗಳನ್ನು ಹಿಂದೂಗಳಿಗೆ ಹಿಂದಿರುಗಿಸುವಂತೆ ಕರೆ ನೀಡಿದ್ದರು. ಭಗವಾನ್ ಶ್ರೀರಾಮ ಮತ್ತು ಶ್ರೀಕೃಷ್ಣ ರಾಷ್ಟ್ರೀಯ ನಾಯಕರೆಂದು ಭಾವಿಸದ ಮುಸ್ಲಿಮರು ಆದರ್ಶವಾಗಲು ಸಾಧ್ಯವಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದ ಕಥಾಕಾಥಿತ ಜಾತ್ಯತೀತ ಹಿಂದೂ ನಾಯಕರು ಮತ್ತು ಅವರ ಪಕ್ಷಗಳು, ಹಾಗೆಯೇ ಇತರ ಸಂಘಟನೆಗಳು, ಸಂಸ್ಥೆಗಳು ಈ ಸ್ಪಷ್ಟೀಕರಣದ ಕುರಿತು ಬಾಯಿ ತೆರೆಯುವುದಿಲ್ಲ. ಏಕೆಂದರೆ ಅದು ಅವರಿಗೆ ಮುಸ್ಲಿಮರ ಮತ ಮತ್ತು ವಿದೇಶದಿಂದ ಹಣ ಸಿಗುವುದಿಲ್ಲ!