ಪ್ರಿಟೋರಿಯ (ದಕ್ಷಿಣ ಆಫ್ರಿಕಾ) – ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಂದೂ ಧರ್ಮದ ಪಾಲಿನೆ ಮಾಡಲಾಗುತ್ತಿದೆ. ಇಲ್ಲಿಯ ಬಹಳಷ್ಟು ಜನರು ಸನಾತನ ಧರ್ಮದ ಬಗ್ಗೆ ವಿಶ್ವಾಸ ಇರಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ‘ಎಸ್.ಎ.ಹಿಂದೂಸ್’ ಈ ಹಿಂದೂ ಸಂಘಟನೆಯಿಂದ ದೇಶಾದ್ಯಂತ ೮ ದೇವಸ್ಥಾನಗಳಲ್ಲಿ ಹನುಮಾನ ಚಾಲಿಸಾದ ೬೦ ಸಾವಿರ ಕಿರು ಪ್ರತಿಗಳನ್ನು ವಿತರಿಸಿದರು. ‘ಎಸ್.ಎ.ಹಿಂದೂಸ್’ ಸಂಘಟನೆಯ ಸದಸ್ಯರು ಇತ್ತೀಚಿಗೆ ಗೌತಂಗ ಪ್ರದೇಶದಲ್ಲಿ ವಿತರಣಾ ಅಭಿಯಾನ ನಡೆಸಿದರು ಮತ್ತು ಅಗತ್ಯವಿರುವವರಿಗೆ ಎರಡು ಟನ್ ಆಹಾರ ಸಾಮಗ್ರಿಗಳ ವಿತರಣೆ ಕೂಡ ಮಾಡಿದರು. ಆಗಸ್ಟ್ ೨೪, ೨೦೨೪ ರಂದು ಭಕ್ತಿ ಉತ್ಸವದ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಹಿಂದುಗಳು ‘ಶೇರೆನೋ ಪ್ರಿಂಟರ್ಸ್’ ಮತ್ತು ‘ಎಲೆಕ್ಟ್ರೋ ಆನ್ ಲೈನ್ ಮೀಡಿಯಾ’ ಇವರ ಪಾಲುದಾರಿಕೆಯಲ್ಲಿ ಮೊಟ್ಟ ಮೊದಲಬಾರಿ ಹನುಮಾನ ಚಾಲಿಸಾದ ೧೦ ಲಕ್ಷ ಪ್ರತಿಗಳನ್ನು ವಿತರಣೆಯ ಉಪಕ್ರಮ ಆರಂಭಿಸಿದ್ದರು. ೨೦೨೯ ವರೆಗೆ ಅವರು ಹನುಮಾನ ಚಾಲಿಸಾದ ೧೦ ಲಕ್ಷ ಪ್ರತಿಗಳ ವಿತರಣೆಯ ಯೋಜನೆ ರೂಪಿಸಿದ್ದಾರೆ.