ಮ್ಯಾನ್ಮಾರ್ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2 ಸಾವಿರ ಗಡಿ ದಾಟಿದೆ

ನಾಯ್ಪಿಯ್ಡಾವ್(ಮ್ಯಾನ್ಮಾರ್) – ಮ್ಯಾನ್ಮಾರ್‍‌ ನಲ್ಲಿ ಸಂಭವಿಸಿದ ಪ್ರಭಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2 ಸಾವಿರದ 56ಕ್ಕೆ ಏರಿದೆ ಎಂದು ಅಲ್ಲಿನ ಸರಕಾರ ಮಾಹಿತಿ ನೀಡಿದೆ. ಭೂಕಂಪದಲ್ಲಿ ಗಾಯಗೊಂಡವರ ಸಂಖ್ಯೆ 3 ಸಾವಿರದ 900 ಮೀರಿದೆ. ಭೂಕಂಪದ ನಂತರ 270 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಈ ದುರಂತದ ನಂತರ ಮಾರ್ಚ್ 31 ರಂದು 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಭೂಕಂಪದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಏಪ್ರಿಲ್ 6 ರವರೆಗೆ ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗುವುದು ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ. ಮಾರ್ಚ್ 28 ರಂದು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು 200 ವರ್ಷಗಳಲ್ಲೇ ಅತಿದೊಡ್ಡ ಭೂಕಂಪವಾಗಿತ್ತು. ಅಮೇರಿಕದ ‘ಜಿಯೋಲಾಜಿಕಲ್ ಸರ್ವೆ’ (ಭೂವೈಜ್ಞಾನಿಕ ಸಮೀಕ್ಷೆ)ಮೃತರ ಸಂಖ್ಯೆ 10 ಸಾವಿರಕ್ಕಿಂತ ಹೆಚ್ಚಿರಬಹುದು’ ಎಂದು ಆತಂಕ ವ್ಯಕ್ತಪಡಿಸಿದೆ.

1. ಮ್ಯಾನ್ಮಾರ್ನ ಮಂಡಾಲೆ ಪ್ರಾಂತ್ಯವು ಭೂಕಂಪದಿಂದ ಹೆಚ್ಚು ಹಾನಿಗೊಳಗಾಗಿದೆ. 17 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಇದು ದೇಶದ ಎರಡನೇ ಅತಿದೊಡ್ಡ ನಗರವಾಗಿದೆ.

2. ಹೆಚ್ಚಿನ ಜನರ ಮನೆಗಳು ನಾಶವಾಗಿದ್ದರಿಂದ ಸತತ ಮೂರನೇ ರಾತ್ರಿ ಅವರು ಬೀದಿಗಳಲ್ಲಿ ಮಲಗಿದರು. ಭೂಕಂಪದ ನಂತರದ ಕಂಪನಗಳಿಂದ ಜನರು ಭಯಭೀತರಾಗಿದ್ದಾರೆ.

3. ಮ್ಯಾನ್ಮಾರ್‍‌ನ ಹೆಚ್ಚಿನ ಭಾಗಗಳಲ್ಲಿ ಇನ್ನೂ ಸಂಪರ್ಕ ಕಡಿತಗೊಂಡಿರುವುದರಿಂದ ಹಾನಿಯ ಸಂಪೂರ್ಣ ಪ್ರಮಾಣ ಇನ್ನೂ ತಿಳಿದಿಲ್ಲ.

ಭಾರತದಿಂದ ಸಹಾಯ ಹಸ್ತ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು, ಭಾರತೀಯ ನೌಕಾಪಡೆಯ ಹಡಗುಗಳಾದ ಐ.ಎನ್.ಎಸ್. ಸಾತಪುರಾ ಮತ್ತು ಐ.ಎನ್.ಎಸ್. ಸಾವಿತ್ರಿ ಇವು ‘ಆಪರೇಷನ್ ಬ್ರಹ್ಮ’ನ ಅಡಿಯಲ್ಲಿ ಮ್ಯಾನ್ಮಾರ್‍‌ನ ಯಾಂಗೋನ್ ಬಂದರಿಗೆ 30 ಟನ್ ಸಾಮಗ್ರಿಗಳನ್ನು ಕಳುಹಿಸಿದರು. ಇದರೊಂದಿಗೆ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಲು ಭಾರತದಿಂದ 118 ಜನರ ವೈದ್ಯಕೀಯ ತಂಡ ಮ್ಯಾನ್ಮಾರ್ ತಲುಪಿದೆ.