ವಿಶ್ವದ ಅತ್ಯಂತ ಸುರಕ್ಷಿತ ರಾಷ್ಟ್ರಗಳ ಪಟ್ಟಿ ಪ್ರಕಟ; ಪಾಕಿಸ್ತಾನ ಭಾರತಕ್ಕಿಂತ ಅಧಿಕ ಸುರಕ್ಷಿತವಂತೆ !

ಅಮೆರಿಕ ಮತ್ತು ಬ್ರಿಟನ್ ಮಾತ್ರ ಭಾರತಕ್ಕಿಂತ ಹಿಂದೆ !

ಲಂಡನ್ (ಬ್ರಿಟನ್) – ವಿಶ್ವದಲ್ಲಿನ ಅತ್ಯಂತ ಸುರಕ್ಷಿತ ರಾಷ್ಟ್ರಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಯುರೋಪ್ ನ ಅಂಡೋರಾ ವಿಶ್ವದ ಅತ್ಯಂತ ಸುರಕ್ಷಿತ ದೇಶವೆಂದು ಹೇಳಲಾಗಿದೆ. ಸುರಕ್ಷಿತ ದೇಶಗಳ ಕ್ರಮಾನುಸಾರ ಆ ದೇಶದ ಜೀವನ ಮಟ್ಟ ಮತ್ತು ಅಪರಾಧದ ಪ್ರಮಾಣವನ್ನು ಆಧರಿಸಿ ಸಿದ್ದಪಡಿಸಲಾಗಿದೆ. ಕುತೂಹಲಕಾರಿ ಅಂಶವೆಂದರೆ ಈ ಪಟ್ಟಿಯಲ್ಲಿ ಪಾಕಿಸ್ತಾನ 65 ನೇ ಸ್ಥಾನದಲ್ಲಿದ್ದರೆ, ಭಾರತ 66 ನೇ ಸ್ಥಾನದಲ್ಲಿದೆ. ಅಂದರೆ ಪಾಕಿಸ್ತಾನ ಭಾರತಕ್ಕಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ! ಇನ್ನು ವಿಶ್ವದ ಅತ್ಯಂತ ಸುರಕ್ಷಿತ ರಾಷ್ಟ್ರಗಳಲ್ಲಿ ಅಮೇರಿಕ 89 ನೇ ಸ್ಥಾನದಲ್ಲಿದ್ದರೆ, ಬ್ರಿಟನ್ 87 ನೇ ಸ್ಥಾನದಲ್ಲಿದೆ. ಈ ಉಭಯ ದೇಶಗಳನ್ನು ಹೋಲಿಸಿದಾಗ ಭಾರತ ಉತ್ತಮ ಸ್ಥಾನವನ್ನು ಗಳಿಸಿದೆ. ಭಾರತದ ಮತ್ತೊಂದು ನೆರೆಯ ರಾಷ್ಟ್ರವಾದ ಚೀನಾ ಈ ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಸೇರಿಸಲಾದ ಒಟ್ಟು 147 ದೇಶಗಳಲ್ಲಿ, ಅಮೇರಿಕಾದ ನೆರೆ ರಾಷ್ಟ್ರವಾದ ವೆನೆಜುವೆಲಾ ದೇಶ ಎಲ್ಲಕ್ಕಿಂತ ಕೊನೆಯ ಸ್ಥಾನದಲ್ಲಿದೆ.

ಸಂಪಾದಕೀಯ ನಿಲುವು

‘ಈ ಪಟ್ಟಿಯ ಮೇಲೆ ಎಷ್ಟು ನಂಬಿಕೆ ಇಡಬೇಕು?’, ಎಂಬುದು ಪ್ರಶ್ನೆಯಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿನ ಸಂಸ್ಥೆಗಳಿಂದ ಸಿದ್ಧಪಡಿಸಿದ ಇಂತಹ ಪಟ್ಟಿಗಳು ನಕಲಿಯಾಗಿದ್ದು ವಾಸ್ತವ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ, ಇದನ್ನು ಸಹಜವಾಗಿ ಗಮನದಲ್ಲಿಡಿ!