ಇದು ಲವ್ ಜಿಹಾದ್ ಪ್ರಕರಣ ಎಂದು ಸಂತ್ರಸ್ತೆಯ ಪೋಷಕರ ಆರೋಪ

ಉಡುಪಿ – ಉಡುಪಿಯಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿಯ ಕರಂಬಳ್ಳಿಯ ನಿವಾಸಿ ಮೊಹಮ್ಮದ್ ಅಕ್ರಮ್ ಇತ್ತೀಚೆಗೆ ಜಿನಾ ಎಂಬ ಯುವತಿಯನ್ನು ಅಪಹರಿಸಿದ್ದಾನೆ. ಆರೋಪಿ ಮುಸ್ಲಿಂ ಯುವಕ ಸಂತ್ರಸ್ತ ಯುವತಿಯನ್ನು ಬಲವಂತವಾಗಿ ಮದುವೆಯಾಗಲು ಯತ್ನಿಸುತ್ತಿದ್ದಾನೆ. ಈ ಅಪಹರಣವು ‘ಲವ್ ಜಿಹಾದ್’ ಸಂಚು ಎಂದು ಸಂತ್ರಸ್ತ ಯುವತಿಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
1. ಉಡುಪಿಯ ಕೋಡ್ವೂರ್‌ನ ಗಾಡ್ವಿನ್ ದೇವದಾಸ್ ಮತ್ತು ಮೇರೂಸ್ ಪುಷ್ಪಲತಾ ಅವರ ಪುತ್ರಿ ಜಿನಾ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಮೊಹಮ್ಮದ್ ಅಕ್ರಮ್ ಆಕೆಯನ್ನು ಕುಟ್ಟಿಕಟ್ಟೆಯಲ್ಲಿ ಬಸ್‌ನಿಂದ ಇಳಿಸಿ ಅಪಹರಿಸಿದ್ದಾನೆ.
2. ಜಿನಾ 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಅಕ್ರಮ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಚಯವಾಗಿತ್ತು. ಆ ಸಮಯದಲ್ಲಿ ಅಕ್ರಮ್ ವಿರುದ್ಧ ‘ಪೋಕ್ಸೊ’ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆತ ಸೇಡು ತೀರಿಸಿಕೊಳ್ಳುತ್ತಿದ್ದಾನೆ ಎಂದು ಸಂತ್ರಸ್ತ ಯುವತಿಯ ಪೋಷಕರು ಆರೋಪಿಸಿದ್ದಾರೆ.
3. ಪೊಲೀಸರು ಇಬ್ಬರೂ ಪ್ರೌಢರಾಗಿದ್ದಾರೆ ಎಂದು ಹೇಳಿ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ, ಎಂದು ಪೋಷಕರು ಆರೋಪಿಸಿದ್ದಾರೆ.
4. ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದುಕೊಂಡು ಇದರ ಹಿಂದಿನ ದೊಡ್ಡ ಷಡ್ಯಂತ್ರವನ್ನು ಕಂಡುಹಿಡಿಯಬೇಕು ಎಂದು ಸಂತ್ರಸ್ತ ಯುವತಿಯ ಕುಟುಂಬದವರು ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುರಾಜ್ಯದಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಪ್ರೇಮಿ ಸರಕಾರ ಇರುವುದರಿಂದ ಮತಾಂಧರು ಇಂತಹ ಸಾಹಸ ಮಾಡುತ್ತಾರೆ ಎಂದು ಯಾರಾದರೂ ಭಾವಿಸಿದರೆ ತಪ್ಪೇನು? |