ಪಟಾಕಿಯನ್ನು ಸಿಡಿಸುವುದರಿಂದಾಗುವ ಆಧ್ಯಾತ್ಮಿಕ ಸ್ತರದ ದುಷ್ಪರಿಣಾಮಗಳನ್ನು ತಿಳಿದುಕೊಳ್ಳಿ !

ಕೆಲವೊಮ್ಮೆ ಅನೇಕ ಪುಣ್ಯಾತ್ಮಗಳು ಯಾವುದಾದರೊಂದು ಕ್ಷೇತ್ರದಲ್ಲಿ ಸೂಕ್ಷ್ಮದಿಂದ ತಪಸ್ಸು ಮಾಡುತ್ತಿರುತ್ತಾರೆ. ಪಟಾಕಿಗಳನ್ನು ಸಿಡಿಸುವುದರಿಂದ ವಾತಾವರಣದಲ್ಲಿನ ಚೈತನ್ಯವು ಕಡಿಮೆಯಾಗಿ ಅವರ ತಪಃಸಾಧನೆಗೆ ಅಡ್ಡಿಯಾಗುತ್ತದೆ. ಅವರೂ ಆ ವ್ಯಕ್ತಿಗೆ ಶಾಪವನ್ನು ಕೊಟ್ಟು ಬೇರೆ ಸ್ಥಾನವನ್ನು ಹುಡುಕಲು ಅಲ್ಲಿಂದ ಹೊರಟು ಹೋಗುತ್ತಾರೆ.

ಪರಾತ್ಪರ ಗುರು ಡಾ. ಆಠವಲೆಯವರ ಕೇವಲ ಛಾಯಾಚಿತ್ರವನ್ನು ನೋಡಿ ಅವರ ಅಸಾಮಾನ್ಯತೆಯ ಬಗ್ಗೆ ಗೌರವೋದ್ಗಾರ ನುಡಿದ ತಮಿಳುನಾಡಿನ ಕಾಂಚಿ ಕಾಮಾಕ್ಷಿ ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ. ನಟರಾಜ ಶಾಸ್ತ್ರೀ !

`ಶ್ರೀ. ನಟರಾಜ ಶಾಸ್ತ್ರೀ ಇವರು ಕಾಂಚಿಪುರಂನ ಕಾಂಚಿ ಕಾಮಾಕ್ಷೀ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾಗಿದ್ದಾರೆ. ಅವರು `ಶ್ರೀ ವಿದ್ಯಾ’ (ದೇವಿಯ) ಉಪಾಸಕರಾಗಿದ್ದಾರೆ. ಅವರು ಪ್ರತಿವರ್ಷ ನವರಾತ್ರೋತ್ಸವದ ಸಮಯದಲ್ಲಿ ಕಾಮಾಕ್ಷೀ ದೇವಸ್ಥಾನದಲ್ಲಿ `ದಶಮಹಾವಿದ್ಯಾ ಹೋಮ’ ಮಾಡುತ್ತಾರೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರ ಅಮೃತವಚನಗಳು

‘ಉನ್ನತರು ಒಂದೇ ಪ್ರಶ್ನೆಯನ್ನು ಅನೇಕ ಬಾರಿ ಕೇಳಿದರೂ ಶಿಷ್ಯನು ಪ್ರತಿಯೊಂದು ಸಮಯದಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಆಜ್ಞಾಪಾಲನೆ ಎಂದು ನಮ್ರತೆಯಿಂದ ಉತ್ತರ ಕೊಟ್ಟರೆ ಮಾತ್ರ ಅವನು ಉತ್ತಮ ಶಿಷ್ಯನು. ಇದರಿಂದ ಶಿಷ್ಯನ ಮನೋಲಯವಾಗಲು ಸಹಾಯವಾಗುತ್ತದೆ’.

ಕೋಲಕಾತಾದಲ್ಲಿರುವ (ಬಂಗಾಲ) ಶ್ರೀ ಕಾಲಿಘಾಟನ ಶ್ರೀ ಕಾಳಿಮಾತೆಯ ಜಾಗೃತ ದೇವಸ್ಥಾನ

ಪ್ರತಿವರ್ಷ ಸ್ನಾನಯಾತ್ರೆಯ ಸಮಯದಲ್ಲಿ ದೇವಿಯ ಮೂರ್ತಿಗೆ ಸ್ನಾನವನ್ನು ಮಾಡಿಸಲಾಗುತ್ತದೆ. ದೇವಿಗೆ ಸ್ನಾನವನ್ನು ಮಾಡಿಸುವಾಗ ಧಾರ್ಮಿಕ ಪರಂಪರೆಗನುಸಾರ ಮುಖ್ಯ ಪುರೋಹಿತರ ಕಣ್ಣುಗಳಿಗೆ ಬಟ್ಟೆಯ ಪಟ್ಟಿಯನ್ನು ಕಟ್ಟಲಾಗುತ್ತದೆ. ದೇವಸ್ಥಾನದಲ್ಲಿ ನವರಾತ್ರಿಯ ಅಷ್ಟಮಿಯಂದು ಪಶು ಬಲಿಯನ್ನು ಕೊಡಲಾಗುತ್ತದೆ.

ಭಾರತದ ಲಕ್ಷಗಟ್ಟಲೆ ಭಕ್ತರ ಶ್ರದ್ಧಾಸ್ಥಾನವಾಗಿರುವ ಕಟರಾದ (ಜಮ್ಮು) ಶ್ರೀ ವೈಷ್ಣೊದೇವಿ !

‘ಶ್ರೀ ವೈಷ್ಣೊದೇವಿಯ ದೇವಸ್ಥಾನ ಹಿಂದೂ ಧರ್ಮದವರ ಒಂದು ಪವಿತ್ರ ಸ್ಥಳವಾಗಿದೆ. ಶ್ರೀ ವೈಷ್ಣೊದೇವಿಗೆ ‘ಮಾತಾ ರಾಣಿ’ ಎಂದೂ ಹೇಳಲಾಗುತ್ತದೆ. ಶ್ರೀ ವೈಷ್ಣೊದೇವಿಯ ದೇವಸ್ಥಾನವು ಸಮುದ್ರತೀರದಿಂದ ೫ ಸಾವಿರ ೨೦೦ ಅಡಿ ಎತ್ತರದಲ್ಲಿದೆ

ಆನಂದವರ್ಧಿನಿ ಮತ್ತು ಮುಕ್ತಿದಾಯಿನಿ ಆದಿಶಕ್ತಿಸ್ವರೂಪ, ಸಾಧಕರ ಆಧ್ಯಾತ್ಮಿಕ ಕವಚವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ರಾಮನಾಥಿ ಆಶ್ರಮದಲ್ಲಿನ ಅಸ್ತಿತ್ವವು ಸಾಧಕರಿಗಾಗಿ ಕೇವಲ ಒಂದು ಆಧಾರ ಮಾತ್ರವಲ್ಲ, ಅದು ಚೈತನ್ಯದ ಒಂದು ಸ್ರೋತವಾಗಿದೆ.

ಪಿತೃಪೂಜೆ ಮತ್ತು ತರ್ಪಣವಿಧಿಯಿಂದ ಉತ್ಪನ್ನವಾದ ಚೈತನ್ಯದಿಂದ ವಿಧಿಯನ್ನು ಮಾಡುವ ಸಂತರ ಮೇಲಾದ ಸಕಾರಾತ್ಮಕ ಪರಿಣಾಮ

ಹಿಂದೂ ಧರ್ಮದ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ದೇವಋಣ, ಋಷಿಋಣ, ಸಮಾಜಋಣ ಮತ್ತು ಪಿತೃಋಣವನ್ನು ತೀರಿಸಬೇಕಾಗುತ್ತದೆ. ಶ್ರೀ ಗುರುಗಳ ಕೃಪೆಯಿಂದ ಈ ನಾಲ್ಕೂ ಋಣಗಳಿಂದ ಮುಕ್ತವಾಗಲು ಸಾಧ್ಯವಿದೆ.

ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದ ಕುಂಭಾಶಿಯ ಶ್ರೀ ಮಹಾಗಣಪತಿ !

ಶ್ರೀ ಗಣೇಶನು ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದನು. ಭೀಮನು ಆ ಖಡ್ಗದಿಂದ ಕುಂಭಾಸುರನನ್ನು ವಧಿಸಿ ಅಗಸ್ತಿಋಷಿಗಳ ಯಜ್ಞದಲ್ಲಿನ ವಿಘ್ನವನ್ನು ದೂರಗೊಳಿಸಿದನು. ‘ಕುಂಭಾಶಿ ಹೆಸರು ಕುಂಭಾಸುರನ ಹೆಸರಿನಿಂದ ಪ್ರಚಲಿತವಾಗಿರಬಹುದು’, ಎನ್ನುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೂಲ್ಯ ವಿಚಾರ ಸಂಪತ್ತು

ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ. ಅವನಿಗೆ ಜೀವನದಲ್ಲಿನ ಆಡಚಣೆಗಳ ಬಗ್ಗೆ ಏನೂ ಎನಿಸುವುದಿಲ್ಲ; ಏಕೆಂದರೆ, ಅವನಿಗೆ ಗುರುಗಳು ಮೃತ್ಯು ನಂತರವೂ ನಮ್ಮ ಜೊತೆಯಲ್ಲಿರುತ್ತಾರೆ, ಎಂಬ  ಶ್ರದ್ಧೆ ಗುರುಗಳ ಮೇಲಿರುತ್ತದೆ. ಈ ಬಿಡಿಸಲಾಗದ ಶ್ರದ್ಧೆಯ ಹಗ್ಗದ ಮೇಲೆಯೇ ಅವನ ಜೀವನವು ನಡೆಯುತ್ತಿರುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಮಲ್ಲಿಗೆ ಹೂವುಗಳ ದೈವೀ ಸಂಬಂಧ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಆಶ್ರಮಕ್ಕೆ ಹಿಂತಿರುಗುವ ಸಮಯದಲ್ಲಿಯೇ ಅಲ್ಲಿನ ಮಲ್ಲಿಗೆಯ ಗಿಡದಲ್ಲಿ ಅಪಾರ ಹೂವುಗಳು ಅರಳುವುದು

ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದಂತೆ ‘೨೦೧೫ ರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಾರತದಲ್ಲೆಲ್ಲ ಪ್ರವಾಸ ಮಾಡುತ್ತಿದ್ದಾರೆ. ಅವರು ಮಹರ್ಷಿಗಳು ಆಜ್ಞೆಯನ್ನು ನೀಡಿದ ನಂತರ ೫-೬ ತಿಂಗಳ ನಂತರ ೧೦-೧೨ ದಿನಗಳಿಗಾಗಿ ಗೋವಾದ ರಾಮನಾಥಿ ಆಶ್ರಮಕ್ಕೆ ಬರುತ್ತಾರೆ.