ಕೋಲಕಾತಾದಲ್ಲಿರುವ (ಬಂಗಾಲ) ಶ್ರೀ ಕಾಲಿಘಾಟನ ಶ್ರೀ ಕಾಳಿಮಾತೆಯ ಜಾಗೃತ ದೇವಸ್ಥಾನ

ನವರಾತ್ರಿಯ ನಿಮಿತ್ತ ದೇವಿಯ ೫೧ ಶಕ್ತಿಪೀಠಗಳಲ್ಲಿನ ಕೆಲವು ದೇವಸ್ಥಾನಗಳ ಪರಿಚಯ ಮತ್ತು ಆದಿಶಕ್ತಿಯ ದರ್ಶನ

ದೇವಸ್ಥಾನದಲ್ಲಿ ಶ್ರೀ ಕಾಳಿದೇವಿಯ ಮೂರ್ತಿ

ನವರಾತ್ರ್ಯುತ್ಸವವು ದೇವಿಯ ಉತ್ಸವವಾಗಿದೆ ! ಈ ಕಾಲದಲ್ಲಿ ದೇವಿಯ ತತ್ತ್ವವು ಪೃಥ್ವಿಯ ಮೇಲೆ ಇತರ ದಿನಗಳಿಗಿಂತ ೧ ಸಾವಿರಪಟ್ಟು ಹೆಚ್ಚು ಪ್ರಮಾಣದಲ್ಲಿ ಬರುತ್ತಿರುತ್ತದೆ. ಅದರ ಲಾಭವಾಗಲು ಮನೆಮನೆಗಳಲ್ಲಿ ಘಟಸ್ಥಾಪನೆ ಮಾಡುವುದು, ದೇವಿಯ ಮುಂದೆ ನಂದಾದೀಪವನ್ನು ಹಚ್ಚುವುದು, ಕುಮಾರಿಕಾಪೂಜೆ, ಉಪವಾಸ ಮಾಡುವುದು ಈ ಮಾಧ್ಯಮದಿಂದ ದೇವಿಯ ಆರಾಧನೆಯನ್ನು ಮಾಡಲಾಗುತ್ತದೆ. ಅನೇಕ ಭಾವಿಕರು ದೇವಿಯ ಜಾಗೃತ ದೇವಸ್ಥಾನಗಳಿಗೆ ಹೋಗಿ ದರ್ಶನವನ್ನು ಪಡೆದು ಪೂಜೆಯನ್ನು ಮಾಡುತ್ತಾರೆ. ಈ ಲೇಖನದಲ್ಲಿ ನಾವು ವಾಚಕರಿಗೆ ೫೧ ಶಕ್ತಿಪೀಠಗಳ ಪೈಕಿ ಬಂಗಾಲದ ಶ್ರೀಕಾಲಿಘಾಟನ ಶ್ರೀಕಾಳಿಮಾತೆಯ ದರ್ಶನವನ್ನು ಒದಗಿಸುತ್ತಿದ್ದೇವೆ. ‘ಈ ಅತ್ಯಂತ ಜಾಗೃತ ತೀರ್ಥಕ್ಷೇತ್ರಗಳ ದರ್ಶನವನ್ನು ಪಡೆದು ಎಲ್ಲರ ಭಕ್ತಿಭಾವವು ಹೆಚ್ಚಳವಾಗಬೇಕು’, ಎಂದು ಆದಿಶಕ್ತಿ ಜಗದಂಬೆಯ ಚರಣಗಳಲ್ಲಿ ಪ್ರಾರ್ಥನೆ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಕಾಳಿದೇವಿಯ ದರ್ಶನವನ್ನು ಪಡೆದರು !

ಯಜ್ಞದಲ್ಲಿ ಆಹುತಿಯನ್ನು ಕೊಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಭೃಗು ಮಹರ್ಷಿಗಳ ಆಜ್ಞೆಯಂತೆ ೭.೧೨. ೨೦೧೮ ರ ದಿನದಂದು ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಕಾಳಿ ದೇವಿಯ ದರ್ಶನವನ್ನು ಪಡೆದರು. ಈ ಕುರಿತು ನಾಡಿವಾಚನದಲ್ಲಿ, ”ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಕಾಳಿಕಾದೇವಿಗೆ ೨೧ ನಿಂಬೆಹಣ್ಣಿನ ಮಾಲೆಯನ್ನು ಅರ್ಪಿಸಬೇಕು, ಹಾಗೆಯೇ ಕುಂಕುಮಾರ್ಚನೆಯನ್ನು ಮಾಡಬೇಕು, ತದನಂತರ ದೇವಸ್ಥಾನದ ಹತ್ತಿರವಿರುವ ನೀರಿನ ಸ್ಥಳದಲ್ಲಿ (ಕೆರೆ ಅಥವಾ ನದಿ ಇದ್ದರೆ ಅಲ್ಲಿ) ಬಾಳೆಹೂವು, ಕಣಗಲ ಹೂವುಗಳು ಮತ್ತು ಎಕ್ಕೆ ಹೂವು ಮುಂತಾದವುಗಳನ್ನು ಒಂದರ ನಂತರ ಒಂದು ಹೀಗೆ ೧೦೮ ಬಾರಿ ‘ಓಂ ಕ್ರೀಮ್ ಕಾಲೈ ನಮಃ’ ಈ ನಾಮಜಪವನ್ನು ಮಾಡುತ್ತ ಅರ್ಪಿಸಬೇಕು. ತದನಂತರ ನಿರ್ಮಾಲ್ಯವನ್ನು ವಿಸರ್ಜನೆ ಮಾಡಬೇಕು ಮತ್ತು ಉಳಿದಿರುವ ಬಾಳೆಹೂವುಗಳನ್ನು ಅಲ್ಲಿನ ಅರ್ಚಕರಿಗೆ ಅನ್ನದಾನಕ್ಕಾಗಿ ಬಳಸಲು ಕೊಡಬೇಕು. ಈ ಪೂಜೆ-ವಿಧಿಗಳ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನಾಮಜಪವನ್ನು ಮಾಡುವಾಗ’ ಎಲ್ಲ ಸಾಧಕರ ವತಿಯಿಂದ ಮಹಾಕಾಳಿದೇವಿಯ ಚರಣಗಳಲ್ಲಿ ಮೋಹ, ಮದ ಮತ್ತು ಕ್ರೋಧ ಇವುಗಳ ಮಾನಸಬಲಿ ಕೊಡುತ್ತಿದ್ದೇವೆ’, ಎಂಬ ಭಾವವನ್ನಿಡಬೇಕು”, ಎಂದು ಮಹರ್ಷಿಗಳು ಹೇಳಿದ್ದರು.

ಪುಷ್ಕರಣಿ ಕೆರೆಯ ಸ್ಥಳದಲ್ಲಿ ಪೂಜೆಯ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕರ್ಪೂರವನ್ನು ನಿವಾಳಿಸುವಾಗ ಜ್ಯೊತಿಗೆ ಬಂದಿರುವ ಹಂಸದ ಆಕಾರ (ವರ್ತುಲದಲ್ಲಿ ತೋರಿಸಿದೆ.)

ಮಹರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಕಾಳಿದೇವಿಯ ಚರಣಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆಯನ್ನು ಮಾಡುತ್ತಲೇ ಶ್ರೀ ಕಾಳಿದೇವಿಯ ಕೊರಳಲ್ಲಿನ ಒಂದು ದೊಡ್ಡ ದಾಸವಾಳದ ಹೂವಿನ ಮಾಲೆಯು ದೇವರ ಆಜ್ಞೆಯಾದಂತೆ ಕೆಳಗೆ ಬಂದಿತು. ಅನಂತರ ದೇವಸ್ಥಾನದಲ್ಲಿನ ಯಾಗಶಾಲೆಯಲ್ಲಿ ಒಂದು ಚಿಕ್ಕ ಯಾಗವನ್ನು ಮಾಡಲಾಯಿತು. ಅನಂತರ ಶ್ರೀ ಕಾಳಿದೇವಿಯ ದೇವಸ್ಥಾನದ ಪಶ್ಚಿಮಕ್ಕಿರುವ ಪುಷ್ಕರಣಿಯ ಬದಿಗೆ ಕುಳಿತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಮಹಾಕಾಳಿದೇವಿಯ ಪೂಜೆಯನ್ನು ಮಾಡಿದರು.’ (ಇದೇ ಪುಷ್ಕರಣಿಯಿಂದ ಶ್ರೀ ಮಹಾಕಾಳಿಯು ಪ್ರತ್ಯಕ್ಷವಾಗಿದ್ದಳು ಹಾಗೂ ನಂತರ ಅವಳ ಆಜ್ಞೆಯಂತೆ ಅವಳಿಗಾಗಿ ದೇವಸ್ಥಾನವನ್ನು ಕಟ್ಟಲಾಯಿತು. – ಸಂಕಲನಕಾರರು) – ಶ್ರೀ. ವಿನಾಯಕ ಶಾನಭಾಗ (೧೩.೧೦.೨೦೨೦)

‘೧೮ ನೇ ಶತಮಾನದಲ್ಲಿ ನಿರ್ಮಾಣವಾದ ಶ್ರೀ ಕಾಲಿಘಾಟವು ಶಕ್ತಿ ಉಪಾಸನೆಯ ಕೇಂದ್ರವಾಗಿದೆ. ಇಲ್ಲಿ ಹೂಗ್ಲಿ ನದಿಯ ತೀರದಲ್ಲಿ ಶ್ರೀ ಕಾಳಿಮಾತೆಯ ಪ್ರಸಿದ್ಧ ದೇವಸ್ಥಾನವಿದೆ. ಅದು ೫೧ ಶಕ್ತಿಪೀಠಗಳ ಪೈಕಿ ಒಂದಾಗಿದೆ. ಇಲ್ಲಿ ಸತಿಯ ಬಲ ಚರಣದ ೪ ಬೆರಳುಗಳು ಬಿದ್ದಿದ್ದವು. ಶ್ರೀ ಕಾಳಿಮಾತೆಯು ದಶಮಹಾವಿದ್ಯಾಗಳಲ್ಲಿನ ಮುಖ್ಯ ದೇವತೆಯಾಗಿರುವಳು.

೧. ವಿಶಾಲವಾದ ನಾಲಿಗೆಯನ್ನು ಹೊರಗೆ ತೆರೆದಿರುವ ಚತುರ್ಭುಜ ಶ್ರೀ ಕಾಳಿಮಾತಾ !

ಕಾಲಿಘಾಟನ ಶ್ರೀ ಕಾಳಿಮಾತೆಯ ಮೂರ್ತಿಯನ್ನು ಬಂಡೆಕಲ್ಲಿನಿಂದ ತಯಾರಿಸಲಾಗಿದ್ದು ಅವಳು ಚರ್ತುಭುಜಳಾಗಿರುವಳು. ಶ್ರೀ ಕಾಳಿಮಾತೆಯ ಮೂರ್ತಿಯು ಯಾವತ್ತೂ ಕೆಂಪು ವಸ್ತ್ರದಿಂದ ಮುಚ್ಚಿರುತ್ತದೆ ಮತ್ತು ಅವಳು ನಾಲಿಗೆಯನ್ನು ಹೊರಗೆ ಚಾಚಿದ್ದಾಳೆ. ಈ ವಿಶಾಲವಾದ ನಾಲಿಗೆಯು ದೇವಿಯು ಜಾಗೃತವಾಗಿರುವ ಲಕ್ಷಣವೆಂದು ನಂಬಲಾಗುತ್ತದೆ. ದೇವಿಯ ಕೈಯಲ್ಲಿ ಬೆಳ್ಳಿಯ ಖಡ್ಗವಿದೆ. ಅವಳ ಕೈಯಲ್ಲಿ ಬೆಳ್ಳಿಯ ರುಂಡವಿದ್ದೂ, ಕೊರಳಲ್ಲಿಯೂ ರುಂಡಮಾಲೆಯನ್ನು ಹೊಂದಿದ್ದಾಳೆ.

ಈ ಸ್ಥಳದಲ್ಲಿ ಕಾಳಿಮಾತೆಯ ಜೊತೆ ಶೀತಲಾ, ಷಷ್ಠಿ ಮತ್ತು ಮಂಗಲಾಚಂಡಿ ಈ ದೇವಿಯರ ಸ್ಥಾನಗಳಿವೆ. ದೇವಸ್ಥಾನದ ಪರಿಸರದಲ್ಲಿ ಒಂದು ಪ್ರಾಚೀನ ಶ್ರೀ ರಾಧಾಕೃಷ್ಣನ ದೇವಸ್ಥಾನವಿದೆ. ಇಲ್ಲಿ ‘ಕುಡೂಪುಕೂರ’ ಎಂಬ ಹೆಸರಿನ ಪರಿಚಿತವಿರುವ ಒಂದು ಪ್ರಾಚೀನ ಹಳ್ಳವೂ ಇದೆ. ಈ ಕೆರೆಯ ನೀರು ಗಂಗೆಯ ನೀರಿನಂತೆ ಪವಿತ್ರವಾಗಿರುವುದೆಂದು ತಿಳಿಯಲಾಗುತ್ತದೆ.

೨. ಕಾಲಿಘಾಟದಲ್ಲಿ ಶ್ರೀ ಕಾಳಿ ದೇವಸ್ಥಾನದ ವೈಶಿಷ್ಟ್ಯಪೂರ್ಣ ಪರಂಪರೆ

ಬಂಗಾಲದಲ್ಲಿ ದುರ್ಗಾಪೂಜೆಯ ದಿನದಂದು ಮನೆಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೇವಿ ಕಾಳಿಯ ಆರಾಧನೆಯನ್ನು ಮಾಡಲಾಗುತ್ತದೆ. ಹಾಗೆಯೇ ಶಕ್ತಿಪೀಠದಲ್ಲಿ ಲಕ್ಷ್ಮಿಸ್ವರೂಪ ದೇವಿಯ ವಿಶೇಷ ಪೂಜೆಯಾಗುತ್ತದೆ. ದುರ್ಗೋತ್ಸವದ ಸಮಯದಲ್ಲಿ ದಶಮಿಗೆ ‘ಸಿಂದೂರ ಖೇಲಾ’ ಇರುತ್ತದೆ. ಇದಕ್ಕಾಗಿ ಮಧ್ಯಾಹ್ನ ೨ ರಿಂದ ಸಾಯಂಕಾಲ ೫ ರವರೆಗೆ ದೇವಸ್ಥಾನದಲ್ಲಿ ಕೇವಲ ಮಹಿಳೆಯರಿಗೆ ಪ್ರವೇಶವಿರುತ್ತದೆ. ಇಲ್ಲಿ ದಿನನಿತ್ಯವು ಶ್ರೀ ಮಹಾಕಾಳಿದೇವಿಗಾಗಿ ೫೬ ಭೋಗ (ನೈವೇದ್ಯ)ಗಳಿರುತ್ತವೆ.

ಪ್ರತಿವರ್ಷ ಸ್ನಾನಯಾತ್ರೆಯ ಸಮಯದಲ್ಲಿ ದೇವಿಯ ಮೂರ್ತಿಗೆ ಸ್ನಾನವನ್ನು ಮಾಡಿಸಲಾಗುತ್ತದೆ. ದೇವಿಗೆ ಸ್ನಾನವನ್ನು ಮಾಡಿಸುವಾಗ ಧಾರ್ಮಿಕ ಪರಂಪರೆಗನುಸಾರ ಮುಖ್ಯ ಪುರೋಹಿತರ ಕಣ್ಣುಗಳಿಗೆ ಬಟ್ಟೆಯ ಪಟ್ಟಿಯನ್ನು ಕಟ್ಟಲಾಗುತ್ತದೆ. ದೇವಸ್ಥಾನದಲ್ಲಿ ನವರಾತ್ರಿಯ ಅಷ್ಟಮಿಯಂದು ಪಶು ಬಲಿಯನ್ನು ಕೊಡಲಾಗುತ್ತದೆ. ದೇವಿಯು ಭಕ್ತರ ಎಲ್ಲ ಮನೋಕಾಮನೆಗಳನ್ನು ಪೂರೈಸುತ್ತಾಳೆ, ಎಂಬ ಶ್ರದ್ಧೆಯಿದೆ. ಕಾಲಿಘಾಟದಲ್ಲಿನ ದೇವಸ್ಥಾನವು ತಾಂತ್ರಿಕ ಸಾಧನೆಗಾಗಿ ಪ್ರಸಿದ್ಧವಾಗಿದೆ.’ (ಆಧಾರ : ಜಾಲತಾಣ)

ಕಾಳಿಮಾತೆಯ ದೇವಸ್ಥಾನದ ಕಥೆ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಕಾಳಿಮಾತೆಯ ದೇವಸ್ಥಾನದಲ್ಲಿನ ಅರ್ಚಕರು, ಇಲ್ಲಿ ಒಂದು ಮರದ ಕೆಳಗೆ ಆತ್ಮಾರಾಮ ಬ್ರಹ್ಮಚಾರಿ ಮತ್ತು ಬ್ರಹ್ಮಾನಂದ ಗಿರಿ ಈ ಇಬ್ಬರು ಸಾಧುಗಳು ತಪಸ್ಸು ಮಾಡುತ್ತಾ ಕುಳಿತಿದ್ದರು. ‘ನಮಗೆ ಕಾಣಿಸುತ್ತಿರುವ ಮೂರ್ತಿಯು ಕಪ್ಪು ಕಲ್ಲಾಗಿದೆ. ಇಬ್ಬರು ಸಾಧುಗಳ ಪೈಕಿ ಆತ್ಮಾರಾಮ ಇವರಿಗೆ ಅಲ್ಲಿನ ಕುಂಡದಿಂದ ಒಂದು ಜ್ಯೋತಿಯು ಬರುತ್ತಿರುವುದು ಕಂಡಿತು. ದೇವಿಯು ಅವರಿಗೆ, ‘ನನ್ನನ್ನು ಒಳಗೆ ಸ್ಥಾಪಿಸು,’ ಎಂದಳು. ಆಗ ಇಬ್ಬರು ಸಾಧುಗಳು ದೇವಿಯ ಮೂರ್ತಿಯನ್ನು ತಯಾರಿಸಿ ಅವಳನ್ನು ಒಳಗೆ ಸ್ಥಾಪಿಸಿದರು. ದೇವಿಯ ದರ್ಶನಕ್ಕಾಗಿ ಅನೇಕ ಮಹಾನ ಸಂತರು ಬಂದು ಹೋದರು. ಶ್ರೀ ರಾಮಕೃಷ್ಣ ಪರಮಹಂಸರೂ ದೇವಿಯ ದರ್ಶನಕ್ಕಾಗಿ ಬಂದು ಹೋದರು,’ ಎಂದು ಹೇಳಿದರು.

ಶ್ರೀ ಕಾಳಿದೇವಿಯ ನಾಲಿಗೆ ಹೊರಗಿರುವ ಭಾವಾರ್ಥ

‘ಮಹಿಷಾಸುರನನ್ನು ವಧಿಸಲು ನಿರ್ಮಾಣವಾದ ಶಕ್ತಿಯು (ಕಾಳಿ) ಅವನನ್ನು ವಧಿಸಿದ ನಂತರ ಎದುರು ಬಂದವರೆಲ್ಲರನ್ನೂ ವಧಿಸತೊಡಗಿದಳು. ಅವಳನ್ನು ಶಾಂತ ಮಾಡಲು ಶಿವನು ಮುಂದೆ ಬಂದನು. ಆಗ ಅವನನ್ನೂ ಅವಳು ಕೆಳಗೆ ಬೀಳಿಸಿದಳು ಮತ್ತು ಅವನ ಎದೆಯ ಮೇಲೆ ಕಾಲಿಟ್ಟು ನಿಂತಳು. ಹೀಗೆ ಮಾಡಿದ ನಂತರ ‘ನಾನು ಇದೇನು ಮಾಡಿದೆ !’ ಎಂಬ ಅರ್ಥದಿಂದ ಅವಳು ಬಾಯಿಯಿಂದ ನಾಲಿಗೆಯನ್ನು ಹೊರಗೆ ತೆಗೆದಳು ! ಶ್ರೀ ಕಾಳಿದೇವಿಯ ಈ ರೂಪದ ಭಾವಾರ್ಥವು ಮುಂದಿನಂತಿದೆ.

ಅ. ಕಾಳಿಮಾತೆಯು ನಾಲಿಗೆಯನ್ನು ಹೊರ ಚಾಚಿ ನಿರ್ಮಾಣವಾದ ರುದ್ರ ರೂಪವು ತಮೋಗುಣದಿಂದ ರಾಕ್ಷಸರಧ್ವಂಸವನ್ನು ಮಾಡುವುದಾಗಿರುವುದು : ಯಾವಾಗ ಬ್ರಹ್ಮಾಂಡದಲ್ಲಿ ತಮೋಗುಣದ ಪ್ರಕೋಪದಿಂದ ಅಸುರರ ಪ್ರಾಬಲ್ಯ ಹೆಚ್ಚಾಗುತ್ತದೆಯೋ ಆಗ ದೇವಿಯು ತಮೋಗುಣದ ಸಹಾಯದಿಂದ ಆದಿಶಕ್ತಿಯ ಭಯಂಕರ ಉಗ್ರರೂಪವು ಪ್ರಕಟವಾಗಿ ಅದು ಅಸುರರನ್ನು ಕ್ಷಣದಲ್ಲಿ ಭಸ್ಮ ಮಾಡುತ್ತದೆ. ಆ ತಮೋಗುಣದ ಒಂದು ಪ್ರತೀಕವೆಂದು ಕಾಳಿಮಾತೆಯ ವರ್ಣನೆಯನ್ನು ಮಾಡಬಹುದು.

ಆ. ನಾಲಿಗೆಯನ್ನು ಹೊರಗೆ ತೆಗೆದಿರುವ ದೇವಿಯ ರೂಪವು ಭಯಂಕರವಾದ ಮಾರಕ ಲಹರಿಗಳ ಪ್ರಕ್ಷೇಪಣೆಯನ್ನು ಮಾಡುವಂತಹದಾಗಿರುವುದು : ಮಹಾಭಯಂಕರವಾಗಿರುವ ತಮೋಗುಣದ ಮೂಲಕ ಕಾರ್ಯ ಮಾಡುವ ಮಾರಕ ರೂಪದ ಲಹರಿಗಳನ್ನು ಬ್ರಹ್ಮಾಂಡಮಂಡಲದಲ್ಲಿ ಪ್ರಕ್ಷೇಪಿತವಾಗಲು ದೇವಿಯು ನಾಲಿಗೆಯನ್ನು ಹೊರಚಾಚಿ ಭಯಂಕರ ಈ ರುದ್ರ ರೂಪದ ನಿರ್ಮಾಣವನ್ನು ಮಾಡಿದ್ದಳು.

ಇ. ದೇವಿಯು ನಾಲಿಗೆಯನ್ನು ಹೊರಚಾಚಿ ‘ಆ’ ಎಂದು ಬಾಯಿ ತೆರೆಯುವ ಕಾರಣ : ನಾಭಿಯೊಂದಿಗೆ ಕೇಂದ್ರಿತಗೊಂಡ ಮತ್ತು ಪರಾವಾಣಿಯಿಂದ ಆವಶ್ಯಕತೆಯಂತೆ ಕಾರ್ಯ ಮಾಡುವ ಮಹಾಮಾರಕವಾದ ತಮೋಗುಣ ಶಕ್ತಿಯು ವೇಗದಿಂದ ಸಗುಣ ರೂಪದಲ್ಲಿ, ಪಿಂಡದ ಟೊಳ್ಳಿನಿಂದ ಹೊರಗೆ ಬೀಳಲು ಹೆಚ್ಚೆಚ್ಚು ನಾಲಿಗೆಯನ್ನು ಹೊರತೆಗೆದು ‘ಆ’ ಎಂದು ಬಾಯಿ ತೆರೆಯಲಾಗುತ್ತದೆ.

ಈ. ನಾಲಿಗೆಯನ್ನು ಹೊರಗೆ ತೆಗೆದಿರುವ ಬಾಯಿಯ ಟೊಳ್ಳಿನಿಂದ ಹೊರಗೆ ಬೀಳುವ ರುದ್ರ ಜ್ವಾಲೆಯು ಬಿಸಿಯಾದ ಲಾವಾರಸದಂತೆ ಇರುವುದು : ಈ ರುದ್ರ ರೂಪದ ದರ್ಶನದಿಂದ ಅಸುರರೂ ಭಯಭೀತರಾಗುತ್ತಾರೆ; ಏಕೆಂದರೆ ‘ನಾಲಿಗೆ’ಯನ್ನು ಹೊರಗೆ ತೆಗೆದು ‘ಆ’ ಯೆಂದು ತೆರೆದ ಬಾಯಿಯ ಟೊಳ್ಳಿನಿಂದ ಅಸುರರಿಗೆ ಭಸ್ಮ ಮಾಡುವ ಬಿಸಿಯಾದ ಲಾವಾರಸದಂತೆ ಹೊರಗೆ ಬೀಳುವ ರುದ್ರ ಜ್ವಾಲೆಯು ಬ್ರಹ್ಮಾಂಡದಲ್ಲಿನ ಎಲ್ಲ ಅಸುರರನ್ನು ನುಂಗುವುದಕ್ಕಾಗಿಯೇ ಆಗಿರುತ್ತದೆ; ಆದುದರಿಂದ ಯಾವಾಗ ನಾಲಿಗೆಯನ್ನು ಹೊರಚಾಚಿ ಉಗ್ರ ಮಹಾಭಯಂಕರ ರೂಪವು ದೇವಿತತ್ತ್ವದಿಂದ ನಿರ್ಮಿತಿಯಾಗುತ್ತದೋ, ಆಗ ಅಸುರರ ವಿನಾಶಕಾಲವು ಆರಂಭವಾಗಿರುತ್ತದೆ. ಇದು ಅದರ ನಿದರ್ಶಕವಾಗಿದೆ.’

– ಓರ್ವ ವಿದ್ವಾಂಸರು (ಸದ್ಗುರು) ಸೌ. ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ, ೮.೩.೨೦೧೨, ಮಧ್ಯಾಹ್ನ ೨.೧೭

೫೧ ಶಕ್ತಿಪೀಠಗಳು ಉತ್ಪತ್ತಿಯಾದ ಕಥೆ

‘ದೇವಿ ಪುರಾಣದಲ್ಲಿ ೫೧ ಶಕ್ತಿಪೀಠಗಳ ನಿರ್ಮಾಣವು ಹೇಗಾದವು, ಎಂಬ ವರ್ಣನೆ ಇದೆ. ಈ ಹಿಂದೆ ದಕ್ಷ ಪ್ರಜಾಪತಿ ರಾಜನು ಕನಖಲ (ಹರಿದ್ವಾರ) ದಲ್ಲಿ ಬೃಹಸ್ಪತಿ ಯಜ್ಞವನ್ನು ಮಾಡಿದ್ದನು. ಅ ಯಜ್ಞಕ್ಕಾಗಿ ರಾಜನು ಬ್ರಹ್ಮ, ವಿಷ್ಣು, ಇಂದ್ರ ಮತ್ತು ಇತರ ಎಲ್ಲ ದೇವತೆಗಳಿಗೆ ಆಮಂತ್ರಣ ನೀಡಿದ್ದನು. ದಕ್ಷ ಪ್ರಜಾಪತಿ ರಾಜನು ಕೇವಲ ಅವನ ಅಳಿಯನಿಗೆ ಎಂದರೆ ಭಗವಾನ ಶಿವನಿಗೆ ಯಜ್ಞಕ್ಕಾಗಿ ಆಮಂತ್ರಣವನ್ನು ನೀಡಿರಲಿಲ್ಲ. ಆದುದರಿಂದ ಭಗವಾನ ಶಿವನು ಕ್ರೋಧಿತನಾದನು. ಆ ಸಮಯದಲ್ಲಿ ಭಗವಾನ ಶಿವನ ಪತ್ನಿಯಾದ ಮತ್ತು ದಕ್ಷ ರಾಜನ ಕನ್ಯೆಯಾದ ಸತಿಯು ಭಗವಾನ ಶಿವನು ಬೇಡವೆಂದರೂ ತಡೆದರೂ ಕೇಳದೇ ಯಜ್ಞಕ್ಕಾಗಿ ತಂದೆಯ ಮನೆಗೆ ಹೋದಳು. ಅವಳು ತಂದೆಗೆ ಕುರಿತು ಭಗವಾನ ಶಿವನಿಗೆ ಯಜ್ಞಕ್ಕೆ ಕರೆಯದಿರುವ ಕಾರಣವನ್ನು ಕೇಳಿದಳು, ಆಗ ದಕ್ಷರಾಜನು ಭಗವಾನ ಶಿವನನ್ನು ನಿಂದಿಸಿದನು. ಪತಿಯ ಬಗ್ಗೆ ಇಂತಹ ಮಾತುಗಳನ್ನು ಕೇಳಿ ಸತಿಯು ಯಜ್ಞಕುಂಡದಲ್ಲಿ ಹಾರಿ ತನ್ನ ಪ್ರಾಣವನ್ನು ತ್ಯಜಿಸಿದಳು. ಭಗವಾನ ಶಿವನಿಗೆ ಈ ವಿಷಯವನ್ನು ತಿಳಿದಾಗ, ಕ್ರೋಧಿತನಾಗಿ ತಾಂಡವನೃತ್ಯವನ್ನು ಆರಂಭಿಸಿದನು. ಭಗವಾನ ಶಿವನು ಸತಿಯ ಶವವನ್ನು ತೆಗೆದುಕೊಂಡು ಮೂರು ಲೋಕದಲ್ಲಿ ಸಂಚರಿಸತೊಡಗಿದನು. ಆ ಸಮಯದಲ್ಲಿ ಭಗವಾನ ಶಿವನ ತಾಂಡವದಿಂದಾಗುವ ವಿನಾಶದಿಂದ ಸಂಪೂರ್ಣ ಸೃಷ್ಟಿಯ ರಕ್ಷಣೆಯಾಗಲು ಭಗವಾನ ಶ್ರೀವಿಷ್ಣು ಸುದರ್ಶನಚಕ್ರದಿಂದ ಸತಿಯ ಶವವನ್ನು ಛಿದ್ರಗೊಳಿಸಿದನು. ಆ ಅವಯವಗಳು ಪೃಥ್ವಿಯಲ್ಲಿ ಯಾವ ಸ್ಥಳದಲ್ಲಿ ಬಿದ್ದವೋ, ಆ ಸ್ಥಳಗಳು ಶಕ್ತಿಪೀಠಗಳೆಂದು ಪ್ರಚಲಿತವಾದವು. ದೇವಿ ಭಾಗವತ ಪುರಾಣಕ್ಕನುಸಾರ ೧೦೮, ಕಾಲಿಕಾ ಪುರಾಣಗನುಸಾರ ೨೬, ಶಿವಚರಿತ್ರದಲ್ಲಿ ೫೧, ದುರ್ಗಾಸಪ್ತಶತಿ ಮತ್ತು ತಂತ್ರ ಚೂಡಾಮಣಿಗನುಸಾರ ೫೨ ಶಕ್ತಿಪೀಠಗಳಿವೆ.’ (ಆಧಾರ : ಜಾಲತಾಣ)