ಶ್ರೀ ಗುರುಗಳ ಐತಿಹಾಸಿಕ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಜವಾಬ್ದಾರಿ ವಹಿಸಿ ಸೇವೆ ಮಾಡಿ ! – ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರಿಂದ ಸಾಧಕರಿಗೆ ಸಂದೇಶ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ‘ಶ್ರೀ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಜ್ಞಾನಶಕ್ತಿಯ ಮೂಲಕ ಹಿಂದು ರಾಷ್ಟ್ರದ ಸ್ಥಾಪನೆಯ ದೃಷ್ಟಿಯನ್ನು ನೀಡಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆ, ಎಂದರೆ ಅಧ್ಯಾತ್ಮವನ್ನು ಆಧರಿಸಿದ ರಾಷ್ಟ್ರರಚನೆ (ಧರ್ಮಸಂಸ್ಥಾಪನೆ)ಯಾಗಿದೆ. ಕೇವಲ ಅವತಾರಗಳೇ ಇಂತಹ ಕಾರ್ಯವನ್ನು ಮಾಡಬಹುದು !