ಪರಾತ್ಪರ ಗುರು ಡಾ. ಆಠವಲೆಯವರ ಕೇವಲ ಛಾಯಾಚಿತ್ರವನ್ನು ನೋಡಿ ಅವರ ಅಸಾಮಾನ್ಯತೆಯ ಬಗ್ಗೆ ಗೌರವೋದ್ಗಾರ ನುಡಿದ ತಮಿಳುನಾಡಿನ ಕಾಂಚಿ ಕಾಮಾಕ್ಷಿ ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ. ನಟರಾಜ ಶಾಸ್ತ್ರೀ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದೇವಿಯ ಸೀರೆಯನ್ನು ಕೊಟ್ಟು ಸನ್ಮಾನಿಸುತ್ತಿರುವ ಶ್ರೀ. ನಟರಾಜ ಶಾಸ್ತ್ರೀ
ಶ್ರೀ. ನಟರಾಜ ಶಾಸ್ತ್ರೀ ಇವರ ಪರಿಚಯ

`ಶ್ರೀ. ನಟರಾಜ ಶಾಸ್ತ್ರೀ ಇವರು ಕಾಂಚಿಪುರಂನ ಕಾಂಚಿ ಕಾಮಾಕ್ಷೀ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾಗಿದ್ದಾರೆ. ಅವರು `ಶ್ರೀ ವಿದ್ಯಾ’ (ದೇವಿಯ) ಉಪಾಸಕರಾಗಿದ್ದಾರೆ. ಅವರು ಪ್ರತಿವರ್ಷ ನವರಾತ್ರೋತ್ಸವದ ಸಮಯದಲ್ಲಿ ಕಾಮಾಕ್ಷೀ ದೇವಸ್ಥಾನದಲ್ಲಿ `ದಶಮಹಾವಿದ್ಯಾ ಹೋಮ’ ಮಾಡುತ್ತಾರೆ. ಅವರು ಇದು ವರೆಗೆ ಅನೇಕ ಪ್ರಸಿದ್ಧ ರಾಜಕಾರಣಿಗಳು, ಮಠಾಧಿಪತಿಗಳಿಗಾಗಿ ಹೋಮ ಮಾಡಿದ್ದಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

೧. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಕಾಂಚೀಪುರಂನ ಶ್ರೀ ಕಾಮಾಕ್ಷೀದೇವಿಯ ದೇವಸ್ಥಾನಕ್ಕೆ ಹೋದಾಗ ಓರ್ವ ಹಿತಚಿಂತಕರು ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ. ನಟರಾಜ ಶಾಸ್ತ್ರೀ ಇವರನ್ನು ಭೇಟಿಯಾಗಲು ಸೂಚಿಸುವುದು

`೧೧.೩.೨೦೨೧ ರಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಕಾಂಚೀಪುರಂನ ಕಾಮಾಕ್ಷೀದೇವಿಯ ದೇವಸ್ಥಾನಕ್ಕೆ ಹೋಗಿದ್ದರು. ಆಗ ಓರ್ವ ಹಿತಚಿಂತಕರಾದ ಶ್ರೀ. ಸುಭಾಷ ಇವರು ಶ್ರೀ ಕಾಮಾಕ್ಷೀ ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ. ನಟರಾಜ ಶಾಸ್ತ್ರೀ  ಇವರನ್ನು ಭೇಟಿಯಾಗಲು ಸೂಚಿಸಿದರು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ದೇವಿಯ ದೇವಸ್ಥಾನದ ಹತ್ತಿರದಲ್ಲೇ ಇರುವ ಅರ್ಚಕರ ಮನೆಗೆ ಹೋದಾಗ ಶ್ರೀ. ನಟರಾಜ ಶಾಸ್ತ್ರೀಯವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಶಾಲು ಮತ್ತು ದೇವಿಯ ಸೀರೆ ನೀಡಿ ಸನ್ಮಾನಿಸಿದರು.

ಶ್ರೀ. ವಿನಾಯಕ ಶಾನಭಾಗ

೨. ಶ್ರೀ. ನಟರಾಜ ಶಾಸ್ತ್ರೀಗಳು ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ತೆಗೆದ ಉದ್ಗಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಶ್ರೀ. ಶಾಸ್ತ್ರೀ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವನ್ನು ತೋರಿಸಿದಾಗ ಅವರು ಮುಂದಿನ ಅಂಶಗಳನ್ನು ಹೇಳಿದರು.

ಅ. ಈ ಮಹಾನ ಜೀವವು ಕೆಲವೊಮ್ಮೆ ಶರೀರದಲ್ಲಿರುತ್ತದೆ, ಕೆಲವೊಮ್ಮೆ ಇರುವುದಿಲ್ಲ. ಅದು ಸೂಕ್ಷ್ಮದಿಂದ ಶರೀರದ ಹೊರಗೆ ಹೋಗಿ ಅನೇಕ ಕಡೆಗಳಲ್ಲಿ ಕಾರ್ಯ ಮಾಡುತ್ತಿರುತ್ತದೆ. ಕೆಲವೊಮ್ಮೆ ಈ ಜೀವವು ಮಾನಸರೀತಿಯಲ್ಲಿ ಅನೇಕ ತೀರ್ಥಕ್ಷೇತ್ರದ ಸ್ಥಳಗಳಿಗೆ ಹೋಗಿ ಬರುತ್ತದೆ. `ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗೆ ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮದಿಂದ ಶ್ರೀ ಕಾಮಾಕ್ಷಿದೇವಿಯ ದೇವಸ್ಥಾನಕ್ಕೆ ಬಂದು ದೇವಿಯ ಜೊತೆಗೆ ಚರ್ಚೆ ಮಾಡಿ ಹೋಗುತ್ತಾರೆ’, ಹೀಗೆ ದೇವಿಯು ನನಗೆ ಹೇಳುತ್ತಿದ್ದಾಳೆ. (`ಕೆಲವು ದಿನಗಳ ಹಿಂದೆ ಆದ ಸಪ್ತರ್ಷಿ ಜೀವನಾಡಿಪಟ್ಟಿ ವಾಚನದಲ್ಲಿ ಸಪ್ತರ್ಷಿಗಳು ಮುಂದಿನಂತೆ ಹೇಳಿದ್ದರು, `ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಿಂದ ಶರೀರದ ಹೊರಗೆ ಹೋಗುವುದು-ಬರುವುದು ಮಾಡುತ್ತಿರುತ್ತಾರೆ.’- ಸಂಕಲನಕಾರರು)

ಆ. `ಸೂಕ್ಷ್ಮದಿಂದ ಶರೀರದ ಹೊರಗೆ ಹೋಗಿ ಪುನಃ ಒಳಗೆ ಬರಬಹುದು’, ಇಂತಹ ಒಂದೂ ಅವತಾರಿ ಜೀವವು ಸದ್ಯ ಪೃಥ್ವಿಯ ಮೇಲಿಲ್ಲ. ಗುರುದೇವ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ) ಇವರೊಬ್ಬರೆ ಇಂತಹ ಏಕಮೇವರಾಗಿದ್ದಾರೆ’, ಎಂದು ನನಗೆ ಶ್ರೀ ಕಾಮಾಕ್ಷೀದೇವಿಯು ಹೇಳುತ್ತಿದ್ದಾಳೆ.

೩. ಶ್ರೀ. ನಟರಾಜ ಶಾಸ್ತ್ರೀ ಯವರು `ದೇವಿಯ ಆಜ್ಞೆಯಿಂದ ದೇವಿಯ ಪ್ರಸಾದ ತೆಗೆದುಕೊಂಡು (ಪರಾತ್ಪರ ಗುರು ಡಾ. ಆಠವಲೆಯವರ) ದರ್ಶನಕ್ಕಾಗಿ ಆಶ್ರಮಕ್ಕೆ ಬರುವೆನು’, ಎಂದು ಹೇಳುವುದು

ನಾವು ಶ್ರೀ. ನಟರಾಜ ಶಾಸ್ತ್ರೀಯವರಿಗೆ, “ಭವಿಷ್ಯದಲ್ಲಿ ನೀವು ರಾಮನಾಥಿ ಆಶ್ರಮಕ್ಕೆ ಖಂಡಿತ ಬರಬೇಕು’’ ಎಂದು ಹೇಳಿದಾಗ, “ಮುಂದೆ ಸಾಧ್ಯವಾದಾಗ ನಾನು ದೇವಿಯ ಆಜ್ಞೆಯಿಂದ ದೇವಿಯ ಪ್ರಸಾದ ತೆಗೆದುಕೊಂಡು ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ದರ್ಶನಕ್ಕಾಗಿ ಆಶ್ರಮಕ್ಕೆ ಬರುತ್ತೇನೆ’’, ಎಂದರು. ಶ್ರೀ. ನಟರಾಜ ಶಾಸ್ತ್ರೀ ಇವರ ಮಾಧ್ಯಮದಿಂದ ಸನಾತನ ಸಂಸ್ಥೆಗೆ ಕಾಂಚಿಯ ಶ್ರೀ ಕಾಮಾಕ್ಷೀದೇವಿಯ ಆಶೀರ್ವಾದ ಸಿಕ್ಕಿದ್ದಕ್ಕಾಗಿ ನಾವೆಲ್ಲ ಸಾಧಕರು ದೇವಿಯ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞರಾಗಿದ್ದೇವೆ.’

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ.೬೭), ಚೆನ್ನೈ (೬.೪.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.