ಉಡುಪಿ ಜಿಲ್ಲೆಯ ಕುಂಭಾಶಿಯಲ್ಲಿ ಶ್ರೀ ಆನೆಗುಡ್ಡೆ ಮಹಾಗಣಪತಿ ದೇವಸ್ಥಾನವಿದೆ. ಇಲ್ಲಿನ ಶ್ರೀ ಮಹಾಗಣಪತಿ ಮೂರ್ತಿಯು ಅಖಂಡ ಕಲ್ಲುಬಂಡೆಯಿಂದ ಸಿದ್ಧಪಡಿಸಿದ ೧೨ ಅಡಿಗಳಷ್ಟು ಎತ್ತರವಿದೆ. ಶ್ರೀ ಗಣೇಶನಿಗೆ ೫ ಕೆಜಿಯ ಶುದ್ಧ ಬಂಗಾರದ ಮುಖವಾಡವಿದೆ. ಮೂರ್ತಿಯ ಮೇಲಿನ ಇತರ ಕವಚಗಳು ಶುದ್ಧ ಬೆಳ್ಳಿಯಿಂದ ಸಿದ್ಧ ಪಡಿಸಲಾಗಿದೆ.
ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗ ನೀಡಿದ ಸ್ಥಳ !
ದ್ವಾಪರಯುಗದ ಈ ಪ್ರಸಂಗವಿದೆ. ಆ ಸಮಯದಲ್ಲಿ ಈ ಪರಿಸರದಲ್ಲಿ ದೊಡ್ಡ ಬರಗಾಲ ಬಿದ್ದಿತ್ತು. ವರುಣದೇವನ ಕೃಪೆಯಿಂದ ಬರಗಾಲದ ನಿವಾರಣೆಯಾಗಬೇಕು ಮತ್ತು ಪರ್ಜನ್ಯ ವೃಷ್ಟಿಯಾಗಬೇಕೆಂದು ಅಗಸ್ತಿಋಷಿಗಳು ಈ ಸ್ಥಳದಲ್ಲಿ ಯಜ್ಞವನ್ನು ಆರಂಭಿಸಿದಾಗ ಕುಂಭಾಸುರನೆಂಬ ರಾಕ್ಷಸನು ವಿಘ್ನಗಳನ್ನು ತರಲು ಪ್ರಯತ್ನಿಸಿದನು. ಆ ಕಾಲದಲ್ಲಿ ಆ ಭಾಗದಲ್ಲಿ ಪಾಂಡವರು ವಾಸಿಸುತ್ತಿದ್ದರು. ಭೀಮನು ಆ ರಾಕ್ಷಸನನ್ನು ವಧಿಸಲು ಮುಂದೆ ಬಂದನು. ಶ್ರೀ ಗಣೇಶನು ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದನು. ಭೀಮನು ಆ ಖಡ್ಗದಿಂದ ಕುಂಭಾಸುರನನ್ನು ವಧಿಸಿ ಅಗಸ್ತಿಋಷಿಗಳ ಯಜ್ಞದಲ್ಲಿನ ವಿಘ್ನವನ್ನು ದೂರಗೊಳಿಸಿದನು. ‘ಕುಂಭಾಶಿ ಹೆಸರು ಕುಂಭಾಸುರನ ಹೆಸರಿನಿಂದ ಪ್ರಚಲಿತವಾಗಿರಬಹುದು’, ಎನ್ನುತ್ತಾರೆ.
ಶ್ರೀ ಮಹಾಗಣಪತಿ ದೇವಸ್ಥಾನದ ಸ್ಥಾನಮಹಾತ್ಮೆ
ಪ್ರಾಚೀನ ಕಾಲದಲ್ಲಿ ವಿಶ್ವೇಶ್ವರ ಉಪಾಧ್ಯಾಯ ಎಂಬ ಓರ್ವ ಭಕ್ತನು ನಿಯಮಿತವಾಗಿ ಗಣಪತಿಯ ಉಪಾಸನೆ ಮಾಡುತ್ತಿದ್ದನು. ಒಂದು ದಿನ ಉಪಾಧ್ಯಾಯರ ಕನಸಿನಲ್ಲಿ ಒಬ್ಬ ಬ್ರಾಹ್ಮಣ ವಟು ಬಂದನು ಮತ್ತು ‘ನನಗೆ ಹಸಿವಾಗಿದೆ,’ ಎನ್ನುತ್ತ ಆ ಕನಸಿನಲ್ಲಿ ಆ ವಟು ಒಂದು ಕಲ್ಲುಬಂಡೆಯ ಹತ್ತಿರ ಅದೃಶ್ಯನಾದನು. ಈ ಅಸಾಮಾನ್ಯ ಕನಸಿನಿಂದ ಆಶ್ಚರ್ಯಗೊಂಡು ಉಪಾಧ್ಯಾಯರು ಮರುದಿನ ಆ ಸ್ಥಳವನ್ನು ಹುಡುಕಿದರು. ಉಪಾಧ್ಯಾಯರು ಈ ಸ್ಥಳದಲ್ಲಿ ಯಾವಾಗಲೂ ಹೋಗುತ್ತಿದ್ದರು ಒಂದು ದಿನ ಅವರಿಗೆ ಕನಸಿನಲ್ಲಿ ಕಾಣಿಸಿದ ದೃಶ್ಯವೇ ಕಲ್ಲುಬಂಡೆಯು ಆ ಕೆರೆಯ ಹತ್ತಿರ ಕಾಣಿಸಿತು. ಆ ಕಲ್ಲುಬಂಡೆಯಿದ್ದ ಆ ಸ್ಥಳಕ್ಕೆ ಒಂದು ದಿವ್ಯ ಸ್ವರೂಪವು ಪ್ರಾಪ್ತವಾಗಿತ್ತು. ಈ ದೃಶ್ಯದಿಂದ ಪ್ರಭಾವಿತಗೊಂಡು ಉಪಾಧ್ಯಾಯರು ಅದರ ಪೂಜೆ ಮಾಡಲು ಆರಂಭಿಸಿದರು. ಒಂದು ದಿನ ಅವರಿಗೆ ಒಂದು ಆಕಳು ಆ ಕಲ್ಲುಬಂಡೆಯ ಮೇಲೆ ಹಾಲಿನ ಅಭಿಷೇಕ ಮಾಡುವುದು ಕಾಣಿಸಿತು. ಈ ಘಟನೆಯ ನಂತರ, ಅವರ ಭಕ್ತಿಯು ಇನ್ನೂ ಹೆಚ್ಚಾಯಿತು. ಉಪಾಧ್ಯಾಯರಿಗೆ ಅವರ ಉಪಾಸನೆ ಮುಂದುವರಿಸಲು ಸ್ಥಳೀಯರು ಅವರಿಗೆ ಆ ಭೂಮಿ ದಾನ ಮಾಡಿ ಈ ದೇವಸ್ಥಾನವನ್ನು ಕಟ್ಟಿದರು. (ಆಧಾರ : ಜಾಲತಾಣ)
ಸಪ್ತರ್ಷಿಗಳ ಆಜ್ಞೆಯಂತೆ ಶ್ರೀ ಮಹಾಗಣಪತಿಯ ದರ್ಶನ ಪಡೆದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘೪.೧೦. ೨೦೧೯ ರಂದು ಚೆನ್ನೈಯಿಂದ ಗೋವಾದ ರಾಮನಾಥಿ ಆಶ್ರಮಕ್ಕೆ ಹೋಗುವರಿದ್ದರು. ಅಕ್ಟೋಬರ ೩ ರಂದು ಸಪ್ತರ್ಷಿಗಳು, ಚೆನ್ನೈಯಿಂದ ಗೋವಾದಲ್ಲಿನ ಆಶ್ರಮಕ್ಕೆ ಹೋಗುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಕರ್ನಾಟಕದಲ್ಲಿನ ತೀರದಲ್ಲಿರುವ ಒಂದು ದೇವಸ್ಥಾನಕ್ಕೆ ಹೋಗಿ ಮುಂದಿನ ಪ್ರಯಾಣವನ್ನು ಮಾಡಬೇಕು’ ಎಂದಿದ್ದರು. ಈ ದೇವಸ್ಥಾನದ ಬಗ್ಗೆ ಹೇಳುವಾಗ ಸಪ್ತರ್ಷಿಗಳು, ಈ ದೇವಸ್ಥಾನವು ಕುಂದಾಪುರದ ಹತ್ತಿರವಿದೆ, ಎಂದು ಹೇಳಿದರು. ಅದರಂತೆ ಸಾಧಕರಿಗೆ ‘ಕುಂದಾಪುರದ ಹತ್ತಿರ ಕುಂಭಾಶಿ ಹೆಸರಿನ ಗ್ರಾಮವಿದೆ. ಅಲ್ಲಿ ಪ್ರಸಿದ್ಧವಾದ ಶ್ರೀ ಗಣೇಶನ ದೇವಸ್ಥಾನವಿದೆ’, ಎಂದು ತಿಳಿಯಿತು. ಸಪ್ತರ್ಷಿಗಳು ಹೇಳಿದಂತೆ ೪.೧೦.೨೦೧೯ ರಂದು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕುಂಭಾಶಿ ದೇವಸ್ಥಾನಕ್ಕೆ ಹೋಗಿ ಶ್ರೀ ಗಣೇಶ ದೇವರ ದರ್ಶನವನ್ನು ಪಡೆದರು. ಆ ಸಮಯದಲ್ಲಿ ಸನಾತನ ಸಂಸ್ಥೆಯ ಕರ್ನಾಟಕ ರಾಜ್ಯದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡರು ಸಹ ಉಪಸ್ಥಿತರಿದ್ದರು. – ಶ್ರೀ. ವಿನಾಯಕ ಶಾನಭಾಗ (೨೪.೮.೨೦೨೦) |