ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದಂತೆ ‘೨೦೧೫ ರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಾರತದಲ್ಲೆಲ್ಲ ಪ್ರವಾಸ ಮಾಡುತ್ತಿದ್ದಾರೆ. ಅವರು ಮಹರ್ಷಿಗಳು ಆಜ್ಞೆಯನ್ನು ನೀಡಿದ ನಂತರ ೫-೬ ತಿಂಗಳ ನಂತರ ೧೦-೧೨ ದಿನಗಳಿಗಾಗಿ ಗೋವಾದ ರಾಮನಾಥಿ ಆಶ್ರಮಕ್ಕೆ ಬರುತ್ತಾರೆ. ಆಶ್ರಮದಲ್ಲಿ ನಾವು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ) ವಾಸ್ತವ್ಯದಲ್ಲಿರುವ ಕೋಣೆಯ ಬದಿಗೆ ತಾರಸಿ ಇದೆ. ಆ ತಾರಸಿಯಲ್ಲಿ ನಾವು ೨೦೧೫ ರಲ್ಲಿ ಕುಂಡದಲ್ಲಿ ಮಲ್ಲಿಗೆಯ ಗಿಡವನ್ನು ನೆಟ್ಟಿದ್ದೇವೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಅನೇಕ ತಿಂಗಳ ನಂತರ ರಾಮನಾಥಿ ಆಶ್ರಮಕ್ಕೆ ಬಂದಾಗ ತಾರಸಿಯಲ್ಲಿಟ್ಟಿರುವ ಮಲ್ಲಿಗೆಯ ಗಿಡದಲ್ಲಿ ಬಹಳಷ್ಟು ಮಲ್ಲಿಗೆಯ ಹೂವುಗಳು ಅರಳುತ್ತವೆ ಈ ಕುರಿತು ನನಗೆ ಮುಂದಿನಂತೆ ಅನುಭೂತಿಗಳು ಬಂದವು.
೧. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ರಾಮನಾಥಿ ಆಶ್ರಮಕ್ಕೆ ಬರುವ ದಿನಾಂಕ ನಿಗದಿಯಾದ ೪-೫ ದಿನಗಳ ಮೊದಲಿ ನಿಂದ ಮಲ್ಲಿಗೆಯ ಗಿಡಕ್ಕೆ ಮೊಗ್ಗುಗಳು ಬರ ತೊಡಗುತ್ತಿದ್ದವು. ಎಷ್ಟೊಂದು ಮೊಗ್ಗುಗಳು ಬರುತ್ತಿದ್ದವು ಎಂದರೆ, ಗಿಡದಲ್ಲಿ ಬರಿ ಮೊಗ್ಗುಗಳೇ ಕಾಣಿಸುತ್ತಿದ್ದವು. ಕುಂಡದಲ್ಲಿನ ಆ ಮಲ್ಲಿಗೆಯ ಸಣ್ಣ ಗಿಡವು ಮೊಗ್ಗುಗಳಿಂದ ತುಂಬಿರುತ್ತಿತ್ತು. ಆ ತುಂಬಿದ ಗಿಡದಲ್ಲಿ ೨೦೦ ರಿಂದ ೨೫೦ ಮೊಗ್ಗುಗಳಿರುತ್ತಿದ್ದವು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಆಶ್ರಮಕ್ಕೆ ಬರುವ ಸಮಯದಲ್ಲಿ ಪ್ರತಿಸಲ ಮಲ್ಲಿಗೆಯ ಮೊಗ್ಗುಗಳು ಬಂದಿರುತ್ತಿದ್ದವು. ಇದರಿಂದ ಸಾಧಕರಿಗೂ, ಈಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಆಶ್ರಮದಲ್ಲಿ ಬರಲಿದ್ದಾರೆ ಎಂದು ತಿಳಿಯುತ್ತಿತ್ತು.
೨. ೨೦೧೬ ರಲ್ಲಿ ಗುರುಪೂರ್ಣಿಮೆಯ ದಿನದಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ಆಧ್ಯಾತ್ಮಿಕ ಉನ್ನತಿಯಾಗಿ ‘ಸದ್ಗುರು ಪದವಿ’ಯಲ್ಲಿ (ಶೇ. ೮೧ ರಷ್ಟು ಆಧ್ಯಾತ್ಮಿಕ ಮಟ್ಟ) ವಿರಾಜಮಾನರಾದರು. ಅನಂತರ ಮುಂದಿನ ೨-೩ ವರ್ಷಗಳು ಅವರು ರಾಮನಾಥಿ ಆಶ್ರಮಕ್ಕೆ ೧೦ ದಿನಗಳಿಗಾಗಿ ಬಂದಾಗಲೆಲ್ಲ ಮಲ್ಲಿಗೆಯ ಗಿಡಕ್ಕೆ ಮೊಗ್ಗುಗಳು ಬಂದಿದ್ದವು; ಆದರೆ ಆಗ ಅವುಗಳು ಅರಳಲಿಲ್ಲ, ಆದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಆಶ್ರಮದಿಂದ ಪುನಃ ಪ್ರವಾಸಕ್ಕೆ ಹೋದ ನಂತರ ಅವು ಅರಳಿದವು.
೩. ೨೦೧೯ ರ ಗುರುಪೂರ್ಣಿಮೆಯ ವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ಆಧ್ಯಾತ್ಮಿಕ ಉನ್ನತಿ ಇನ್ನೂ ಹೆಚ್ಚಾಗಿ ಅವರ ಆಧ್ಯಾತ್ಮಿಕ ಮಟ್ಟವು ಶೇ. ೮೭ ರಷ್ಟಾಯಿತು. ಆ ವರ್ಷ ಮಹರ್ಷಿಗಳು ಅವರಿಗೆ ‘ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ’ ಎಂದು ಘೋಷಿಸಿದರು. ಹಾಗೆಯೇ ಮುಂದಿನ ವರ್ಷ (೨೦೨೦ ರಲ್ಲಿ) ಮಹರ್ಷಿಗಳು ಅವರಿಗೆ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ’, ಎಂದು ಕರೆದು ಅವರು ಪರಾತ್ಪರ ಗುರು ಡಾ. ಆಠವಲೆ ಇವರಂತೆ ಅವತಾರಿ ಜೀವವಾಗಿದ್ದಾರೆಂದು ಹೇಳಿದರು. ೨೦೧೯ ರಿಂದ ಅವರು ಯಾವಾಗ ಪ್ರವಾಸದಿಂದ ಆಶ್ರಮಕ್ಕೆ ವಾಪಾಸು ಬರುತ್ತಿದ್ದರೋ, ಆಗ ಆಶ್ರಮದಲ್ಲಿನ ಅವರ ಕೋಣೆಯ ತಾರಸಿಯಲ್ಲಿರುವ ಮಲ್ಲಿಗೆಯ ಗಿಡದಲ್ಲಿ ೧೦-೧೨ ದಿನಗಳಲ್ಲಿ ಬಹಳಷ್ಟು ಮಲ್ಲಿಗೆಯ ಹೂವುಗಳು ಬರುತ್ತಿದ್ದವು.
೪. ಅನಂತರ ೨೦೨೧ ರಿಂದ ಇದುವರೆಗೆ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಆಶ್ರಮಕ್ಕೆ ಬರುವ ಕೆಲವು ದಿನಗಳ ಮೊದಲೇ ಮಲ್ಲಿಗೆಯ ಗಿಡವು ಹೂವುಗಳಿಂದ ತುಂಬಿರುತ್ತಿತ್ತು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಆಶ್ರಮದಲ್ಲಿ ಬರುವಾಗ ಎಲ್ಲ ಹೂವುಗಳು ಅರಳಿ ಕೇವಲ ೫-೧೦ ಹೂವುಗಳಷ್ಟೇ ಗಿಡದಲ್ಲಿ ಉಳಿಯುತ್ತಿದ್ದವು.’ ಎಂಬುದು ಗಮನಕ್ಕೆ ಬಂದಿತು.
ಇದರಿಂದ ‘೨೦೧೬ ರಿಂದ ೨೦೨೨ ರವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ಆಧ್ಯಾತ್ಮಿಕ ಉನ್ನತಿಯು ಹೆಚ್ಚಾಗಿ ಅವರ ಪ್ರವಾಸವು ಸಗುಣದಿಂದ ನಿರ್ಗುಣದ ಕಡೆಗೆ ಹೇಗೆ ಆಗುತ್ತಾ ಹೋಯಿತು. ಅದರಂತೆ ಮಲ್ಲಿಗೆಯ ಹೂವುಗಳು ಅರಳುವುದರಲ್ಲಿಯೂ ಬದಲಾವಣೆ ಆಯಿತು. ಈ ಮೊದಲು ಶ್ರಿಚಿತ್‌ಶಕ್ತಿ (ಸೌ.) ಅಂಜಲಿ ಇವರ ಅಸ್ತಿತ್ವದಿಂದ ಮಲ್ಲಿಗೆಯ ಹೂವುಗಳು ಅರಳುತ್ತಿದ್ದವು. ಹಾಗೆಯೇ ಅವರ ಆಗಮನಕ್ಕಾಗಿ ಅವು ಗಿಡದಲ್ಲಿ ಬರುತ್ತಿದ್ದವು. ಯಾವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಹೆಚ್ಚು ನಿರ್ಗುಣಸ್ತರಕ್ಕೆ ಹೋದರೋ, ಆಗ ಅವರು ಆಶ್ರಮದಲ್ಲಿ ಬರುವ ದಿನ ನಿಗದಿಯಾದ ನಂತರ ಅವರ ಸೂಕ್ಷ್ಮ ಅಸ್ತಿತ್ವದಿಂದಲೇ ಮಲ್ಲಿಗೆಯ ಹೂವುಗಳು ಅರಳುತ್ತಿದ್ದವು. ಮಹರ್ಷಿಗಳು ನಾಡಿಪಟ್ಟಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರಲ್ಲಿ ‘ದೇವಿತತ್ತ್ವ’ ಇದೆಯೆಂದು ಹೇಳಿದ್ದಾರೆ. ದೇವಿಗೆ ಮಲ್ಲಿಗೆ ಹೂವು ಪ್ರಿಯವಾಗಿದೆ. ಹಾಗೆಯೇ ಜ್ಞಾನೇಶ್ವರ ಮಹಾರಾಜರು ಮುಕ್ತಾಬಾಯಿಯವರಿಗೆ ಒಂದು ಮರಾಠಿ ಭಾವ ಗೀತೆಯ ಭಾವಾರ್ಥವನ್ನು ಹೇಳುವಾಗ, ‘ಮಲ್ಲಿಗೆ ಹೂವು ‘ಶ್ರೀಚಿತ್‌ಶಕ್ತಿ’ಯ ಪ್ರತೀಕವಾಗಿದೆ ಎಂದು ಹೇಳಿದ್ದರು.’ ಮಹರ್ಷಿಗಳು ಸಾಧಕರಿಗೆ ಸೌ. ಅಂಜಲಿ ಇವರಿಗೆ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ’, ಎಂದು ಕರೆಯಲು ಹೇಳಿದರು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮತ್ತು ಮಲ್ಲಿಗೆ ಹೂವುಗಳ ಸಂಬಂಧ ಹೀಗಿದೆ; ಆದುದರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಆಶ್ರಮದಲ್ಲಿ ಬರುವ ಅವಧಿಯಲ್ಲಿಯೇ ಮಲ್ಲಿಗೆಯ ಗಿಡಕ್ಕೆ ಬಹಳಷ್ಟು ಹೂವುಗಳು ಬರುತ್ತವೆ !’ – ಸದ್ಗುರು ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೭.೨೦೨೨)
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೃತವಚನಗಳು !
ಮೃತ್ಯುನಂತರ ಸೂಕ್ಷ್ಮ ಜಗತ್ತಿನ ಪ್ರಯಾಣದಲ್ಲಿ ಅಡಚಣೆ ಬರಬಾರದು ಮತ್ತು ಮನುಷ್ಯ ಜನ್ಮದ ನಿಜವಾದ ಲಾಭವನ್ನು ಪಡೆಯಲು, ಅಂತರ್ಬಾಹ್ಯ ಸಾಧನೆಯ ಬೋಧನೆಯಿಂದ ಸಂಸ್ಕಾರ ಮಾಡುವುದು, ಇದು ಸದಕ್ಕೆ ಅವಶ್ಯಕವಾಗಿದೆ !
‘ಅನೇಕ ಜನ್ಮಗಳ ನಂತರ ಮನುಷ್ಯಜನ್ಮವು ಲಭಿಸುತ್ತದೆ ಮತ್ತು ‘ಅನೇಕ ಜನ್ಮದಲ್ಲಿ ಮಾಡಿದ ಸಾಧನೆಯ ಫಲ’ವೆಂದು ಪರಾತ್ಪರ ಗುರು ಡಾ. ಆಠವಲೆಯವರಂತಹ ‘ಗುರುಗಳು’ ಆ ಮನುಷ್ಯಜೀವದ ಜೀವನದಲ್ಲಿ ಬರುತ್ತಾರೆ. ಮನುಷ್ಯನ ಆಯುಷ್ಯವು ತುಂಬಾ ಕಡಿಮೆಯಿದೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸತತವಾಗಿ ಇದರ ಅರಿವು ಮಾಡಿ ಕೊಟ್ಟು ಜನ್ಮ-ಮರಣದ ಚಕ್ರದಿಂದ ಮುಕ್ತರಾಗಲು ಅವರು ಸಾಧಕ ರಿಗೆ ಸಾಧನೆ ಮಾಡಲು ಕಲಿಸುತ್ತಾರೆ. ನಾವು ಎಲ್ಲಿಯವರೆಗೆ ಮನುಷ್ಯ ದೇಹದಲ್ಲಿರುತ್ತೇವೆಯೋ, ಅಲ್ಲಿಯವರೆಗೆ ಸಾಧನೆಯನ್ನು ಕಲಿಯಲು ಸಾಧಕರಿಗೆ ಸರ್ವೋತ್ತಮ ಅವಕಾಶವಿದೆ. ಮೃತ್ಯುವಿನ ನಂತರದ ಎಲ್ಲ ಜಗತ್ತು ‘ಸೂಕ್ಷ್ಮ’ವಾಗಿರುತ್ತವೆ. ಆ ಸೂಕ್ಷ್ಮ ಜಗತ್ತಿನಲ್ಲಿನ ಪ್ರಯಾಣದಲ್ಲಿ ಅಡಚಣೆ ಬರಬಾರದು ಮತ್ತು ಮನುಷ್ಯಜನ್ಮದ ನಿಜವಾದ ಲಾಭವನ್ನು ಪಡೆಯಲು ಮನುಷ್ಯ ದೇಹಕ್ಕೆ ಅಂತರ್ಬಾಹ್ಯ ಸಾಧನೆಯ ಬೋಧನೆಯಿಂದ ಸಂಸ್ಕಾರ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರ ಮನಸ್ಸಿ ನಲ್ಲಿ, ‘ಈಶ್ವರನು ಈ ಮನುಷ್ಯಜನ್ಮವು ಕೇವಲ ಸಾಧನೆಯನ್ನು ಮಾಡಲು ಕೊಟ್ಟಿದ್ದಾನೆ’, ಎಂಬ ಧೃಢ ಶ್ರದ್ಧೆಯು ನಿರ್ಮಾಣ ವಾಗುವುದು ಅವಶ್ಯಕವಾಗಿದೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೮.೫.೨೦೨೦)
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |