ಆನಂದವರ್ಧಿನಿ ಮತ್ತು ಮುಕ್ತಿದಾಯಿನಿ ಆದಿಶಕ್ತಿಸ್ವರೂಪ, ಸಾಧಕರ ಆಧ್ಯಾತ್ಮಿಕ ಕವಚವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ಜನ್ಮದಿನದ ನಿಮಿತ್ತ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಮಹಾಲಯ ಅಮಾವಾಸ್ಯೆ (ಸಪ್ಟೆಂಬರ್ ೨೫) ಈ ತಿಥಿಯಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ಜನ್ಮದಿನ ಇದೆ. ಎಲ್ಲ ಅಮಾವಾಸ್ಯೆಗಳಲ್ಲಿ ‘ಮಹಾಲಯ ಅಮಾವಾಸ್ಯೆ’ ಎಲ್ಲಕ್ಕಿಂತ ಶ್ರೇಷ್ಠವಾಗಿದೆ; ಏಕೆಂದರೆ ಈ ಅಮಾವಾಸ್ಯೆಯ ದಿನ ಪಿತೃರಿಗೆ ಗತಿ ಸಿಗುತ್ತದೆ; ಆದುದರಿಂದ ಮಹಾಲಯ ಅಮಾವಾಸ್ಯೆಗೆ ‘ಸರ್ವಪಿತ್ರಿ ಅಮಾವಾಸ್ಯೆ’, ಎಂದೂ ಕರೆಯುತ್ತಾರೆ. ಸದ್ಯ ಪೃಥ್ವಿಯ ಮೇಲೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಎಲ್ಲರಿಗೂ ಪೂರ್ವಜರ ತೊಂದರೆಯಿದೆ. ನಮ್ಮೆಲ್ಲ ಸಾಧಕರ ಪಿತೃದೋಷಗಳನ್ನು ದೂರಗೊಳಿಸಲು ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಗುರು ಡಾ. ಆಠವಲೆಯವರು) ನಮ್ಮೆಲ್ಲ ಸಾಧಕರಿಂದ ಶ್ರೀ ದತ್ತಾತ್ರೇಯನ ಉಪಾಸನೆಯನ್ನು ಮಾಡಿಸಿಕೊಂಡಿದ್ದಾರೆ. ಯಾವ ರೀತಿ ಭಗವಾನ ದತ್ತಾತ್ರೇಯರು ನಮ್ಮ ಪಿತೃದೋಷಗಳನ್ನು ದೂರಗೊಳಿಸುತ್ತಾರೆಯೋ, ಅದೇರೀತಿ ಪರಾತ್ಪರ ಗುರು ಡಾ. ಆಠವಲೆಯವರ ಗುರುಪರಂಪರೆಯನ್ನು ಮುಂದೆ ನಡೆಸಿಕೊಂಡು ಹೋಗುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರ ಎಲ್ಲ ತೊಂದರೆಗಳನ್ನು ದೂರಗೊಳಿಸುವ ಮುಕ್ತಿಪ್ರದಾಯಿನಿಯಾಗಿದ್ದಾರೆ.

 

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

‘ಶ್ರೀಸತ್‌ಶಕ್ತಿ  (ಸೌ.) ಬಿಂದಾ ನೀಲೇಶ ಸಿಂಗಬಾಳರೆಂದರೆ ‘ಸಾಧಕರ ಮೇಲಾಗುವ ಎಲ್ಲ ರೀತಿಯ ಆಧ್ಯಾತ್ಮಿಕ ಆಕ್ರಮಣಗಳನ್ನು ತಮ್ಮ ಮೇಲೆ ತೆಗೆದುಕೊಳ್ಳುವ ಸಾಧಕರ ಆಧ್ಯಾತ್ಮಿಕ ಗುರಾಣಿಯಾಗಿದ್ದಾರೆ. ಅವರಂತಹವರು ಕೇವಲ ಅವರೇ ಆಗಿದ್ದಾರೆ !’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೨೮.೯.೨೦೨೧)

೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ವೈಶಿಷ್ಟ್ಯಗಳು

೧ ಅ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಚಿಕ್ಕದಿರಲಿ ದೊಡ್ಡ ಸಮಸ್ಯೆ ಇರಲಿ ಅದನ್ನು ಪರಿಹರಿಸಲು ಸಮಾನ ಮಹತ್ವ ಕೊಡುತ್ತಾರೆ.

೧ ಆ. ಅವರು ಎಲ್ಲ ಸೇವೆಗಳನ್ನು ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಮಾಡುತ್ತಾರೆ ಯಾವುದೇ ಸೇವೆಯಿರಲಿ, ಆ ಸೇವೆಯನ್ನು ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಮತ್ತು ಮನಃಪೂರ್ವಕವಾಗಿ ಮಾಡುತ್ತಾರೆ ಗುರುದೇವರಿಗೆ ಅಪೇಕ್ಷಿತವಿರುವ ಸೇವೆಗಳನ್ನು ಮಾಡಲು ಅವರು ನಿರಂತರ ಪ್ರಯತ್ನಿಸುತ್ತಾರೆ.

೧ ಇ. ‘ಸಾಧಕರ ಆದಷ್ಟು ಕಡಿಮೆ ಸಮಯ ಮತ್ತು ಊರ್ಜೆಯನ್ನು (ಶಕ್ತಿಯನ್ನು) ಉಪಯೋಗಿಸಿ ಅವರ ಸಾಧನೆಯಲ್ಲಿನ ಸಮಸ್ಯೆಗಳನ್ನು ದೂರಗೊಳಿಸುವುದು’, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ವೈಶಿಷ್ಟ್ಯವಾಗಿದೆ.

೧ ಈ. ಆಶ್ರಮದಲ್ಲಿನ ಪ್ರತಿಯೊಬ್ಬ ಸಾಧಕನು ಆಶ್ರಮದ ಒಂದು ಘಟಕವಾಗಿದ್ದಾನೆ ಮತ್ತು ಅವನು ಮಹತ್ವಪೂರ್ಣವೂ ಆಗಿದ್ದಾನೆ; ಏಕೆಂದರೆ ಅವರಿಗೆ, ಆಶ್ರಮದಲ್ಲಿನ ಸಾಧಕರ ಮತ್ತು ಆಶ್ರಮದ ಕೇಂದ್ರ ಬಿಂದುವಾಗಿರುವ ಗುರುದೇವರ ಜನ್ಮಜನ್ಮಾಂತರಗಳ ಸಂಬಂಧವಿದೆ. ಆ ಸಂಬಂಧವು ಅಧ್ಯಾತ್ಮದ ಸಂಬಂಧವಾಗಿರುವುದರಿಂದ ಅದು ಸೂಕ್ಷ್ಮವಾಗಿದೆ. ಆಶ್ರಮದಲ್ಲಿನ ಎಲ್ಲ ಸಾಧಕರ ಮನಸ್ಸನ್ನು ಸಂಭಾಳಿಸುವುದು ಮತ್ತು ಅವರನ್ನು ಭಗವಂತನ ಪ್ರೇಮದ ಮಾಲೆಯಲ್ಲಿ ಪೋಣಿಸುವುದು ಈ ಕಾರ್ಯವನ್ನು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿರುವುದರಿಂದಲೇ ನಾವೆಲ್ಲ ಸಾಧಕರು ಇಂದಿಗೂ ಸಾಧನೆಯಲ್ಲಿ ಉಳಿದುಕೊಂಡಿದ್ದೇವೆ. ಈಗ ಗುರುದೇವರ ಈ ಕಾರ್ಯವನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳರು ಮಾಡುತ್ತಿದ್ದಾರೆ.

ಶ್ರೀ. ವಿನಾಯಕ ಶಾನಭಾಗ

೧ ಉ. ಸಾಧಕರ ಸಮಸ್ಯೆಗಳನ್ನು ಸೂಕ್ಷ್ಮದಿಂದ ಅರಿತು ಅವರಿಗೆ ಸಹಾಯ ಮಾಡುವುದು : ಒಮ್ಮೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಒಂದು ಪೂಜೆಗೆ ಕುಳಿತಿದ್ದರು. ಸ್ವಲ್ಪ ಹೊತ್ತಿನ ನಂತರ ಅವರು ಓರ್ವ ಸಾಧಕನನ್ನು ಕರೆದರು ಮತ್ತು ‘ಓರ್ವ ಸಾಧಕನಿಗೆ ದೂರವಾಣಿ ಕರೆ ಮಾಡಿ ಅವರ ಮನೆಯಲ್ಲಿ ಎಲ್ಲವೂ ಸರಿಯಿದೆಯೇ ಎಂದು ಕೇಳಿಕೊಳ್ಳಿ ಮತ್ತು ಗುರುದೇವರು ನಿಮ್ಮನ್ನು ನೆನಪಿಸುತ್ತಿದ್ದರು ಎಂದು ಹೇಳಿ’ ಎಂದರು. ಆ ಸಾಧಕನನ್ನು ಸಂಪರ್ಕ ಮಾಡಿದ ನಂತರ, ಅವನಿಗೆ ಸ್ವಲ್ಪ ಸಮಯದ ಮೊದಲು ಒಂದು ದೊಡ್ಡ ಕೌಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಆದುದರಿಂದ ಆ ಸಾಧಕನು ಸನಾತನದ ಮೂವರು ಗುರುಗಳನ್ನು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರಿಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರನ್ನು) ಸ್ಮರಿಸುತ್ತಿದ್ದನು ಮತ್ತು ಆ ಸಮಯದಲ್ಲಿ ಅವನಿಗೆ ಆಶ್ರಮದಿಂದ ಸಂಚಾರವಾಣಿ ಕರೆ ಬಂದಿರುವುದರಿಂದ ಅವನ ಭಾವಜಾಗೃತವಾಯಿತು. ‘ಶ್ರೀ ಗುರುಗಳು ನನ್ನ ಜೊತೆಗಿದ್ದಾರೆ’, ಎಂಬ ಶ್ರದ್ಧೆಯು ಅವನಲ್ಲಿ ಹೆಚ್ಚಾಯಿತು.

೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರೆಂದರೆ, ಚೈತನ್ಯದ ಒಂದು ಸ್ರೋತರಾಗಿದ್ದಾರೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ರಾಮನಾಥಿ ಆಶ್ರಮದಲ್ಲಿನ ಅಸ್ತಿತ್ವವು ಸಾಧಕರಿಗಾಗಿ ಕೇವಲ ಒಂದು ಆಧಾರ ಮಾತ್ರವಲ್ಲ, ಅದು ಚೈತನ್ಯದ ಒಂದು ಸ್ರೋತವಾಗಿದೆ. ರಾಮನಾಥಿ ಆಶ್ರಮದಲ್ಲಿನ ಅವರ ಈ ಅಸ್ತಿತ್ವವು ಎಲ್ಲ ಸಾಧಕರಿಗಾಗಿ ಉತ್ಸಾಹವರ್ಧಕ, ಆನಂದ ಮತ್ತು ಸಮಾಧಾನವನ್ನು ನೀಡುವುದಾಗಿದೆ.

೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರೆಂದರೆ, ಶ್ರೀ ಗುರುಗಳು ಸಾಧಕರಿಗೆ ನೀಡಿದ ಆಧ್ಯಾತ್ಮಿಕ ಕವಚವಾಗಿದೆ

ಯಾವುದಾದರೊಂದು ಕೋಟೆಯಿರಲಿ ಅಥವಾ ರಾಜ್ಯವಿರಲಿ ಅಥವಾ ರಾಜಧಾನಿಯಾಗಿರಲಿ ಅಥವಾ ನಮ್ಮ ಶರೀರವೇ ಆಗಿರಲಿ, ಅದರ ಪ್ರವೇಶದ್ವಾರ ಎಲ್ಲಕ್ಕಿಂತ ಮಹತ್ವದ್ದಾಗಿರುತ್ತದೆ, ಹಾಗೆಯೇ ಅದರ ರಕ್ಷಣೆಯೂ ತುಂಬಾ ಮಹತ್ವದ್ದಾಗಿರುತ್ತದೆ. ರಕ್ಷಣೆ ಕಡಿಮೆಯಾದರೆ, ಶತ್ರುಗಳಿಂದ ಆಕ್ರಮಣದ ಭಯವಿರುತ್ತದೆ. ಅನಿಷ್ಟ ಶಕ್ತಿಗಳು ಸನಾತನದ ಸಾತ್ತ್ವಿಕ ಆಶ್ರಮ ಮತ್ತು ಸಾಧಕರ ಮೆಲೆ ಸೂಕ್ಷ್ಮದಿಂದ ಆಕ್ರಮಣ ಮಾಡಲು ಸದಾ ಕಾರ್ಯನಿರತವಾಗಿರುತ್ತವೆ. ಇದುವರೆಗೆ ಅನೇಕಬಾರಿ ರಾಮನಾಥಿ ಆಶ್ರಮ ಮತ್ತು ಆಶ್ರಮದಲ್ಲಿನ ಸಾಧಕರ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿವೆ. ಆ ಆಕ್ರಮಣಗಳ ಬಿಸಿ ಸಾಧಕರಿಗೆ ತಾಗದಂತೆ ನೋಡಿಕೊಳ್ಳುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಎಂದರೆ ಶ್ರೀ ಗುರುಗಳು ಸಾಧಕರಿಗೆ ನೀಡಿದ ಆಧ್ಯಾತ್ಮಿಕ ಕವಚವಾಗಿದ್ದಾರೆೆ !

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭), ಬೆಂಗಳೂರು.

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.