ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೂಲ್ಯ ವಿಚಾರ ಸಂಪತ್ತು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಸಚ್ಚಿದಾನಂದ ಪರಬ್ರಹ್ಮ ಗುರು ಡಾ. ಆಠವಲೆಯವರು ಗುರುಗಳಾಗಿ ಲಭಿಸುವುದರ ಮಹತ್ವ

‘ಅಧ್ಯಾತ್ಮದಲ್ಲಿನ ತಾತ್ತ್ವಿಕ ಭಾಗದೊಂದಿಗೆ ಪ್ರಾಯೋಗಿಕ ಭಾಗವನ್ನು ಕಲಿಸುವ ಗುರುಗಳು ಸಿಗುವುದು ಕಲಿಯುಗದಲ್ಲಿ ತುಂಬಾ ವಿರಳವಾಗಿದೆ. ಅಂತಹ ಗುರುಗಳು (ಸಚ್ಚಿದಾನಂದ ಪರಬ್ರಹ್ಮ ಗುರು ಡಾ. ಆಠವಲೆ) ನಮಗೆ ಲಭಿಸಿದ್ದಾರೆ’, ಇದು ಸಾಧಕರಾದ ನಮ್ಮೆಲ್ಲರ ಭಾಗ್ಯವಾಗಿದೆ.

೨. ಕಲಿಯುಗದಲ್ಲಿ ದೇವರು ‘ಗುರುಕೃಪಾಯೋಗಾನುಸಾರ ಸಾಧನೆ’ಯನ್ನು ಮಾಡಲು ಅವಶ್ಯಕವಾದ ಎಲ್ಲ ಸಾಧನಗಳನ್ನು ಒದಗಿಸಿದ್ದರೂ, ಅದರ ಲಾಭ ಪಡೆಯುವುದು, ಸಾಧಕರ ಪ್ರಯತ್ನಗಳ ಮೇಲೆ ಅವಲಂಬಿಸಿದೆ

ಪ.ಪೂ. ಭಕ್ತರಾಜ ಮಹಾರಾಜರ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರು ಡಾ. ಆಠವಲೆ ಇವರ ಕೃಪೆಯಿಂದ ಸಾಧಕರಿಗೆ ‘ಆಧ್ಯಾತ್ಮಿಕ ರಾಜಯೋಗ’ ಲಭಿಸಿದೆ. ಭಗವಂತನ ನಾಮವನ್ನು ತೆಗೆದುಕೊಳ್ಳಲು ಕಠಿಣವಾಗಿರುವ ಇಂತಹ ಕಲಿಯುಗದಲ್ಲಿಯೂ ದೇವರು ಸಾಧಕರಿಗೆ ‘ಗುರುಕೃಪಾಯೋಗ’ದ ಮಾಧ್ಯಮದಿಂದ ಸಾಧನೆಯನ್ನು ಮಾಡಲು ಅವಶ್ಯಕ ಎಲ್ಲ ಸಾಧನಗಳನ್ನು ಒದಗಿಸಿ ಕೊಟ್ಟಿದ್ದಾನೆ, ಇದು ‘ಆಧ್ಯಾತ್ಮಿಕ ರಾಜಯೋಗ’ವೇ ಎನ್ನಬಹುದು. ಇದರ ಲಾಭ ಪಡೆಯುವುದು ಸಾಧಕರ ಪ್ರಯತ್ನಗಳ ಮೇಲಾಧಾರಿತವಾಗಿದೆ.’

೩. ಸಚ್ಚಿದಾನಂದ ಪರಬ್ರಹ್ಮ ಗುರು ಡಾ. ಆಠವಲೆಯವರು ಸಾಧಕರನ್ನು ತಮ್ಮ ಸ್ಥೂಲದೇಹದಲ್ಲಿ ಸಿಲುಕಿಸದೇ ದೇವರ ಕಡೆಗೆ (ತತ್ತ್ವದ ಕಡೆಗೆ) ಮಾರ್ಗಕ್ರಮಣವನ್ನು ಮಾಡಲು ಕಲಿಸುವುದು

ಒಮ್ಮೆ ಸಚ್ಚಿದಾನಂದ ಪರಬ್ರಹ್ಮ ಗುರು ಡಾ. ಆಠವಲೆಯವರ ಜೊತೆಗೆ ಸನಾತನದ ಕೆಲವು ಸಂತರ ಸತ್ಸಂಗ ಇತ್ತು. ಆ ಸಮಯದಲ್ಲಿ ಓರ್ವ ಸಂತರು ಸಚ್ಚಿದಾನಂದ ಪರಬ್ರಹ್ಮ ಗುರುದೇವರಿಗೆ, “ಪ.ಪೂ. ಡಾಕ್ಟರ್, ಆಗುತ್ತಿರುವ ಒಳಿತೆಲ್ಲವೂ ಕೇವಲ ತಮ್ಮ ಕೃಪೆಯಿಂದಲೇ ಆಗುತ್ತಿದೆ,” ಎಂದರು. ಆಗ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಎಲ್ಲ ಸಂತರಿಗೆ, “ನೀವು ಸಹ ಎಲ್ಲ ಸಾಧಕರಂತೆಯೇ ಹೇಳುತ್ತಿರುವಿರಾ ? ನಾವು ಸಾಧಕರನ್ನು ದೇವರೆಡೆಗೆ ಹೊರಳಿಸಬೇಕಾಗಿದೆ. ಯಾವುದೇ ವ್ಯಕ್ತಿಯ ಸ್ಥೂಲದೇಹ ದಲ್ಲಿ ಸಿಲುಕಬಾರದು,” ಎಂದು ಹೇಳಿದರು.

೪. ಕನಿಷ್ಠ ದೇವತೆಗಳ ಮತ್ತು ಉಚ್ಚ ದೇವತೆಗಳ ಕಾರ್ಯದಲ್ಲಿ ವ್ಯತ್ಯಾಸ

ಕನಿಷ್ಠ ದೇವತೆಗಳು ಕರ್ಮದ ಸ್ತರದಲ್ಲಿ, ಎಂದರೆ ಸಕಾಮ ಸ್ತರದಲ್ಲಿ ತಾತ್ಕಾಲಿಕ ಮಾರ್ಗದರ್ಶನವನ್ನು ನೀಡುತ್ತಿದ್ದರೆ, ಉಚ್ಚ ದೇವತೆಗಳು ಸಾಧಕನಿಗೆ ಕರ್ಮದ ಆಚೆಗೆ ಹೋಗಿ ಶಾಶ್ವತವಾದ ಆನಂದಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತಾರೆ.

೫. ಸಾಧಕರ ಮತ್ತು ಶಿಷ್ಯರ ಆಯೋಜನೆಯಲ್ಲಿನ ವ್ಯತ್ಯಾಸ

‘ತನ್ನ ಆಯೋಜನೆಯನ್ನು ಸಾಧಕನು ಸ್ವತಃ ತಾನೇ ಮಾಡಬೇಕಾಗುತ್ತದೆ. ಆದರೆ ಶಿಷ್ಯನ ಆಯೋಜನೆ ಮಾತ್ರ ಗುರುಗಳೇ ಮಾಡುತ್ತಾರೆ. ಒಂದು ಸಲ ದೇವರ ಭಕ್ತನಾದ ಮೇಲೆ, ಅವನ ಜೀವನದಲ್ಲಿನ ಎಲ್ಲ ಆಯೋಜನೆಯನ್ನು ದೇವರೇ ಮಾಡುತ್ತಾನೆ; ಆದುದರಿಂದಲೇ ದೇವರ ಭಕ್ತರಾಗಿರುವ ಸಂತರು, “ನಮ್ಮ ಆಯೋಜನೆಯನ್ನು ನಾವು ಮಾಡುವುದೇ ಇಲ್ಲ. ನಮ್ಮದೆಲ್ಲವನ್ನು ದೇವರೇ ನೋಡಿಕೊಳ್ಳುತ್ತಾನೆ”, ಎಂದು ಹೇಳುತ್ತಾರೆ.

೬. ಸಾಧಕನ ಸಾಧನೆಯ ಪ್ರಯಾಣದಲ್ಲಿ ಗುರುಗಳ ಸಾಂಗತ್ಯವು ಅತ್ಯಂತ ಮಹತ್ವದ್ದಾಗಿದೆ

ಸಾಧಕನು ಸಾಧನೆಯ ಪ್ರಯಾಣದಲ್ಲಿ ಹಂತಹಂತಗಳಿಂದ ಮುಂದೆ-ಮುಂದೆ ಪ್ರಯಾಣ ಮಾಡುತ್ತಿರುತ್ತಾನೆ. ಇದರಲ್ಲಿ ಅವನಿಗೆ ಅನಂತ ಅಡಚಣೆಗಳು ಬರುತ್ತವೆ; ಆದರೆ ಅವನಿಗೆ ಇದರಲ್ಲಿ ಗುರುಗಳೇ ಮಾರ್ಗವನ್ನು ತೋರಿಸುತ್ತಾರೆ. ಗುರುಗಳು ಅವನ ಮೃತ್ಯುವಿನ ಭಯವನ್ನು ದೂರಗೊಳಿಸುತ್ತಾರೆ ಮತ್ತು ಅವನನ್ನು ಜನ್ಮ-ಮೃತ್ಯುವಿನ ರೇಖೆಯ ಆಚೆಗೆ ಒಯ್ಯುತ್ತಾರೆ. ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ. ಅವನಿಗೆ ಜೀವನದಲ್ಲಿನ ಆಡಚಣೆಗಳ ಬಗ್ಗೆ ಏನೂ ಎನಿಸುವುದಿಲ್ಲ; ಏಕೆಂದರೆ, ಅವನಿಗೆ ಗುರುಗಳು ಮೃತ್ಯು ನಂತರವೂ ನಮ್ಮ ಜೊತೆಯಲ್ಲಿರುತ್ತಾರೆ, ಎಂಬ  ಶ್ರದ್ಧೆ ಗುರುಗಳ ಮೇಲಿರುತ್ತದೆ. ಈ ಬಿಡಿಸಲಾಗದ ಶ್ರದ್ಧೆಯ ಹಗ್ಗದ ಮೇಲೆಯೇ ಅವನ ಜೀವನವು ನಡೆಯುತ್ತಿರುತ್ತದೆ; ಆದುದರಿಂದ ಜೀವನದಲ್ಲಿ ಗುರುಗಳ ಸಾಂಗತ್ಯ ಅತ್ಯಂತ ಮಹತ್ವದ್ದಾಗಿರುತ್ತದೆ.

– (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ (೧೨.೪.೨೦೨೦)