ಪಿತೃಪೂಜೆ ಮತ್ತು ತರ್ಪಣವಿಧಿಯಿಂದ ಉತ್ಪನ್ನವಾದ ಚೈತನ್ಯದಿಂದ ವಿಧಿಯನ್ನು ಮಾಡುವ ಸಂತರ ಮೇಲಾದ ಸಕಾರಾತ್ಮಕ ಪರಿಣಾಮ

#Datta Datta, #ShriDatta ShriDatta #mahalaya mahalaya, #pitrupaksha pitrupaksha, #shraddha shraddha, #ShraddhaRituals Shraddha rituals, #Shraddhavidhi Shraddha vidhi

ಶ್ರಾದ್ಧವಿಧಿಗಳ ವಿಷಯದಲ್ಲಿ ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

‘ಇಡೀ ಪೃಥ್ವಿಯ ಮೇಲಿನ ದೇವಪಿತೃರು (ಮನುಷ್ಯಜನ್ಮಕ್ಕೆ ಬಂದು ಮರಣದ ನಂತರ ಸಾಧನೆಯ ಮೂಲಕ ಋಷಿಲೋಕದಲ್ಲಿ ಸ್ಥಾನ ಪ್ರಾಪ್ತಿ ಮಾಡಿರುವ ಜೀವ) ಮತ್ತು ಮನುಷ್ಯಪಿತೃರು, ಸನಾತನದ ದಿವಂಗತ ಸಾಧಕರು ಹಾಗೂ ಎಲ್ಲ ಸಾಧಕರ ಪೂರ್ವಜರಿಗೆ ಮುಕ್ತಿ ಲಭಿಸಬೇಕೆಂದು, ಸದ್ಗುರು (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಮುಕುಲ ಗಾಡಗೀಳರು ಪಿತೃಪೂಜೆಯನ್ನು ಮಾಡಬೇಕು’, ಎಂದು ಭೃಗು ಮಹರ್ಷಿಗಳು ಚೆನ್ನೈಯಲ್ಲಿ ನಾಡಿಪಟ್ಟಿ ವಾಚನದ ಮೂಲಕ ಹೇಳಿದ್ದರು. ಅದಕ್ಕನುಸಾರ ೧೯.೨.೨೦೧೯ ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಸದ್ಗುರುದ್ವಯರು ಪಿತೃಪೂಜೆಯ ಸಂಕಲ್ಪ ಮಾಡಿದರು. ಅನಂತರ ಸಪ್ತನದಿಗಳ ಜಲವನ್ನು ಕಳಶದಲ್ಲಿ ತುಂಬಿಸಿ ಅದರಲ್ಲಿ ದೇವಪಿತೃರು, ಋಷಿತೃರು ಮತ್ತು ಮನುಷ್ಯಪಿತೃರ ಆವಾಹನೆ ಮತ್ತು ಷೋಡಶೋಪಚಾರ ಪೂಜೆಯನ್ನು ಮಾಡಿದರು. ಸನಾತನದ ಸಂತರಾದ ಪೂ. ಪೃಥ್ವಿರಾಜ ಹಜಾರೆಯವರು ತರ್ಪಣ ವಿಧಿಯನ್ನು ಮಾಡಿದರು. ‘ಪಿತೃಪೂಜಾವಿಧಿಯಿಂದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರ ಮೇಲೆ ಹಾಗೂ ಪೂ. ಪೃಥ್ವಿರಾಜ ಹಜಾರೆ ಇವರ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರಿಶೀಲನೆಯ ನಿರೀಕ್ಷಣೆಯ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಟಿಪ್ಪಣಿ – ಈ ಲೇಖನವು ಮಹರ್ಷಿಗಳು ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರನ್ನು ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ’ ಮತ್ತು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ’ ಎಂದು ನಾಮಕರಣ ಮಾಡುವ ಮೊದಲಿನದ್ದಾಗಿದೆ. ಹಾಗಾಗಿ ಲೇಖನದಲ್ಲಿ ಅವರನ್ನು ‘ಸದ್ಗುರು (ಸೌ.) ಬಿಂದಾ ಸಿಂಗಬಾಳ’ ಮತ್ತು ‘ಸದ್ಗುರು (ಸೌ.) ಅಂಜಲಿ ಗಾಡಗೀಳ’ ಎಂದೇ ಉಲ್ಲೇಖಿಸಲಾಗಿದೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ
ಪೂ. ಪೃಥ್ವಿರಾಜ ಹಜಾರೆ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಈ ಪರೀಕ್ಷಣೆಯಲ್ಲಿ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ಪಿತೃಪೂಜೆ ಮಾಡುವ ಮೊದಲು, ಮಾಡಿದ ನಂತರ, ಹಾಗೂ ಪೂ. ಪೃಥ್ವಿರಾಜ ಹಜಾರೆ ಇವರನ್ನು ವಿಧಿಯ ಮೊದಲು, ವಿಧಿಯ ನಂತರ ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಈ ನಿರೀಕ್ಷಣೆಯ ತುಲಾನಾತ್ಮಕ ಅಭ್ಯಾಸ ಮಾಡಲಾಯಿತು.

ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ

೧ ಅ. ಸದ್ಗುರು (ಸೌ.) ಬಿಂದಾ ಸಿಂಗಬಾಳ, ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಪೂ. ಪೃಥ್ವಿರಾಜ ಹಜಾರೆ ಇವರಲ್ಲಿ ನಕಾರಾತ್ಮಕ ಉರ್ಜೆ ಕಂಡು ಬರಲಿಲ್ಲ.

೧ ಆ. ಪಿತೃ ಪೂಜೆಯ ನಂತರ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಸಕಾರಾತ್ಮಕ ಉರ್ಜೆಯಲ್ಲಿ ಬಹಳ ಹೆಚ್ಚಳವಾಗುವುದು : ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತು ಇವುಗಳಲ್ಲಿ ಸಕಾರಾತ್ಮಕ ಉರ್ಜೆ ಇದ್ದೇ ಇರುತ್ತದೆ, ಎಂದೇನಿಲ್ಲ. ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಲ್ಲಿ ಆರಂಭದಲ್ಲಿಯೇ ಬಹಳ ಸಕಾರಾತ್ಮಕ ಉರ್ಜೆಯಿತ್ತು. ಪಿತೃಪೂಜೆಯ ನಂತರ ಅವರಲ್ಲಿನ ಸಕಾರಾತ್ಮಕ ಉರ್ಜೆ ಇನ್ನೂ ಹೆಚ್ಚಾಯಿತು. ಇದು ಮುಂದಿನ ಕೋಷ್ಟಕದಿಂದ ಅರಿವಾಗುತ್ತದೆ.

೧ ಇ. ತರ್ಪಣ ವಿಧಿಯ ನಂತರ ಪೂ. ಪೃಥ್ವಿರಾಜ ಹಜಾರೆ ಇವರಲ್ಲಿನ ಸಕಾರಾತ್ಮಕ ಉರ್ಜೆಯ ಪ್ರಭಾವಲಯದಲ್ಲಿ ಬಹಳ ಹೆಚ್ಚಳವಾಗುವುದು : ಪೂ. ಪೃಥ್ವಿರಾಜ ಹಜಾರೆ ಇವರಲ್ಲಿ ಆರಂಭದಲ್ಲಿಯೇ (ತರ್ಪಣ ವಿಧಿಯ ಮೊದಲು) ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯಿತ್ತು. ಅದರ ಪ್ರಭಾವಲಯವು ೩೨.೦೨ ಮೀಟರ್ ಇತ್ತು. ತರ್ಪಣ ವಿಧಿಯ ನಂತರ ಅವರಲ್ಲಿನ ಸಕಾರಾತ್ಮಕ ಉರ್ಜೆಯ ಪ್ರಭಾವಲಯದಲ್ಲಿ ೩೦.೯೮ ರಷ್ಟು ಹೆಚ್ಚಾಗಿ ೬೩ ಮೀಟರ್ ಆಯಿತು.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮ ಶಾಸ್ತ್ರೀಯ ವಿಶ್ಲೇಷಣೆ

ಪಿತೃಗಳಿಗೆ ತರ್ಪಣ ನೀಡುತ್ತಿರುವ ಪೂ.ಪೃಥ್ವಿರಾಜ ಹಜಾರೆ

೨ ಅ. ಮಾಘ ಹುಣ್ಣಿಮೆಯಂದು ಬಂದಿರುವ ಮಘಾ ನಕ್ಷತ್ರದಲ್ಲಿ ಪಿತೃಪೂಜೆ ಮಾಡುವ ಅಪರೂಪದ ಯೋಗ ! : ಪಿತೃಪೂಜೆಯ ಸಮಯದಲ್ಲಿ ಮಘಾ ನಕ್ಷತ್ರವಿತ್ತು. ಮಘಾ ನಕ್ಷತ್ರದಲ್ಲಿ ಶ್ರಾದ್ಧ ವಿಧಿಯನ್ನು ಮಾಡುತ್ತಾರೆ. ಮಾಘ ಹುಣ್ಣಿಮೆಯಂದು ಮಘಾ ನಕ್ಷತ್ರ ಇರುವುದು ಅಪರೂಪ. ಈ ಸಲ ಈ ಅಪರೂಪದ ಯೋಗವು ಕೂಡಿಬಂದಿತ್ತು. ಆದ್ದರಿಂದ ಇಂದಿನ ತಿಥಿಯು ಪಿತೃ ಪೂಜೆಗೆ ಯೋಗ್ಯವಾಗಿದ್ದು ಇದನ್ನು ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆಯೆ ಬರೆದಿಟ್ಟಿದ್ದಾರೆ, ಇದರಿಂದ ಮಹರ್ಷಿಗಳ ಶ್ರೇಷ್ಠತೆಯ ಅರಿವಾಗುತ್ತದೆ. ‘ಅವತಾರಗಳು ಅನೇಕ ಜೀವಗಳನ್ನು ಉದ್ಧರಿಸುತ್ತವೆ. ಶ್ರೀರಾಮಾವತಾರದಲ್ಲಿ ಮತ್ತು ಶ್ರೀಕೃಷ್ಣಾವತಾರದಲ್ಲಿ ಭಗವಂತನು ವಿಭಿನ್ನ ಯೋನಿಗಳಲ್ಲಿ ಸಿಲುಕಿರುವ ದೇವಗಣ, ಋಷಿಗಣಗಳನ್ನು ಮುಕ್ತಗೊಳಿಸಿದರು. ೧೯ ಫೆಬ್ರವರಿಯ ಮಾಘ ಹುಣ್ಣಿಮೆಯ ದಿನವೂ ಹಾಗೆಯೆ ಇದೆ’, ಎಂದು ಪಿತೃಪೂಜೆಯ ವಿಷಯದಲ್ಲಿ ಭೃಗು ಮಹರ್ಷಿಗಳು ಹೇಳಿದ್ದಾರೆ.

೨ ಆ. ಹಿಂದೂ ಧರ್ಮದ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ದೇವಋಣ, ಋಷಿಋಣ, ಸಮಾಜಋಣ ಮತ್ತು ಪಿತೃಋಣವನ್ನು ತೀರಿಸಬೇಕಾಗುತ್ತದೆ. ಶ್ರೀ ಗುರುಗಳ ಕೃಪೆಯಿಂದ ಈ ನಾಲ್ಕೂ ಋಣಗಳಿಂದ ಮುಕ್ತವಾಗಲು ಸಾಧ್ಯವಿದೆ.

೨ ಇ. ಪಿತೃಪೂಜೆ ಮತ್ತು ತರ್ಪಣವಿಧಿ ಇವೆರಡೂ ವಿಧಿಗಳ ಸಮಯದಲ್ಲಿ ವಾತಾವರಣದಲ್ಲಿ ತುಂಬಾ ಚೈತನ್ಯವು ಉತ್ಪನ್ನವಾಗುವುದು : ಭೃಗು ಮಹರ್ಷಿಗಳ ಆಜ್ಞೆಗನುಸಾರ ಪಿತೃಪೂಜೆ ಮತ್ತು ತರ್ಪಣ ವಿಧಿಯನ್ನು ಮಾಡಲಾಯಿತು. ಈ ವಿಧಿಯ ಹಿಂದೆ ಅವರ ಸಂಕಲ್ಪ ಕಾರ್ಯನಿರತವಾಗಿತ್ತು. ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ಪಿತೃಪೂಜೆ ಮತ್ತು ಪೂ. ಪೃಥ್ವಿರಾಜ ಹಜಾರೆ ಇವರು ತರ್ಪಣ ವಿಧಿಯನ್ನು ಭಾವಪೂರ್ಣವಾಗಿ ಮಾಡಿದುದರಿಂದ ಎರಡೂ ವಿಧಿಗಳನ್ನು ಮಾಡುವ ಸಮಯದಲ್ಲಿ ವಾತಾವರಣದಲ್ಲಿ ಅಪಾರ ಪ್ರಮಾಣದಲ್ಲಿ ಚೈತನ್ಯವು ಉತ್ಪನ್ನವಾಯಿತು.

೨ ಈ. ಮೂರೂ ಸಂತರು ಕಾರ್ಯದ ಅವಶ್ಯಕತೆಗನುಸಾರ ಆಯಾಯ ವಿಧಿಯಲ್ಲಿನ ಚೈತನ್ಯವನ್ನು ಗ್ರಹಣ ಮಾಡುವುದು : ಪಿತೃಪೂಜೆ ಮತ್ತು ತರ್ಪಣವಿಧಿ ಈ ವಿಧಿಗಳಿಂದ ಉತ್ಪನ್ನವಾದ ಚೈತನ್ಯವನ್ನು ಸಂತರು ಅವರ ಕಾರ್ಯದ ಅವಶ್ಯಕತೆಗನುಸಾರ ಗ್ರಹಣ ಮಾಡಿದರು. ಆದ್ದರಿಂದ ಪಿತೃಪೂಜೆಯ ವಿಧಿಯ ನಂತರ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.)ಅಂಜಲಿ ಗಾಡಗೀಳ ಇವರಲ್ಲಿನ ಮತ್ತು ತರ್ಪಣವಿಧಿಯ ನಂತರ ಪೂ. ಪೃಥ್ವಿರಾಜ ಹಜಾರೆ ಇವರಲ್ಲಿನ ಸಕಾರಾತ್ಮಕ ಉರ್ಜೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡು ಬಂದಿತು.’

– ಆಧುನಿಕ ವೈದ್ಯೆ (ಸೌ.) ನಂದಿನಿ ದುರ್ಗೇಶ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೩.೨೦೧೯)

ವಿ-ಅಂಚೆ : mav.research೨೦೧೪@gmail.com