ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ, ಹಾಗೆಯೇ ಸಾಧಕರ ತೊಂದರೆಗಳು ದೂರವಾಗಬೇಕೆಂದು ಇಲ್ಲಿಯವರೆಗೆ ೮ ಲಕ್ಷಕ್ಕಿಂತ ಹೆಚ್ಚು ಕಿಲೋಮೀಟರ್ ಪ್ರಯಾಣ ಮಾಡಿ ವಿವಿಧ ದೇವಸ್ಥಾನಗಳಲ್ಲಿ ಪ್ರಾರ್ಥನೆ, ಪೂಜೆ ಮುಂತಾದ ವಿಧಿಗಳನ್ನು ಮಾಡಿದ್ದಾರೆ. ಅದರಿಂದಲೇ ನಮಗೆ ಈ ಪೌರಾಣಿಕ ಮಹತ್ವವಿರುವ ಸ್ಥಾನಗಳ ದರ್ಶನವಾಗುತ್ತಿದೆ. ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
‘ಶ್ರೀ ವೈಷ್ಣೊದೇವಿಯ ದೇವಸ್ಥಾನ ಹಿಂದೂ ಧರ್ಮದವರ ಒಂದು ಪವಿತ್ರ ಸ್ಥಳವಾಗಿದೆ. ಶ್ರೀ ವೈಷ್ಣೊದೇವಿಗೆ ‘ಮಾತಾ ರಾಣಿ’ ಎಂದೂ ಹೇಳಲಾಗುತ್ತದೆ. ಶ್ರೀ ವೈಷ್ಣೊದೇವಿಯ ದೇವಸ್ಥಾನವು ಸಮುದ್ರತೀರದಿಂದ ೫ ಸಾವಿರ ೨೦೦ ಅಡಿ ಎತ್ತರದಲ್ಲಿದೆ. ಈ ದೇವಸ್ಥಾನ ಜಮ್ಮು ಜಿಲ್ಲೆಯ ಕಟರಾದಿಂದ ೧೪ ಕಿಲೋಮೀಟರ್ ಎತ್ತರದ ಒಂದು ಬೆಟ್ಟದ ಮೇಲಿದೆ. ಅತ್ಯಂತ ಜಾಗೃತ ದೇವಸ್ಥಾನವೆಂದು ಪ್ರಸಿದ್ಧವಾಗಿರುವ ಈ ಸ್ಥಳಕ್ಕೆ ದೇಶಾದ್ಯಂತದ ಲಕ್ಷಗಟ್ಟಲೆ ಭಕ್ತರು ದರ್ಶನಕ್ಕೆ ಬರುತ್ತಾರೆ.
ಅ. ಪುರಾಣಗಳಲ್ಲಿ ದೇವಿಯ ಮಹಾತ್ಮೆಯನ್ನು ವರ್ಣಿಸಲಾಗಿದೆ. ದಕ್ಷಿಣ ಭಾರತದಲ್ಲಿನ ರತ್ನಾಕರ ಸಾಗರ ಇವರ ಮನೆಯಲ್ಲಿ ವೈಷ್ಣೊದೇವಿಯು ಅವತರಿಸಿದ್ದಳು. ವೈಷ್ಣೊದೇವಿಗೆ ಬಾಲ್ಯದಲ್ಲಿ ‘ತ್ರಿಕುಟಾ’ ಎಂಬ ಹೆಸರಿನಿಂದ ಕರೆಯುತ್ತಿದ್ದರು; ಆದರೆ ಭಗವಾನ ಶ್ರೀವಿಷ್ಣುವಿನ ಕುಲದಲ್ಲಿ ಜನಿಸಿರುವುದರಿಂದ ಅವಳಿಗೆ ‘ವೈಷ್ಣವಿ’ ಎಂಬ ಹೆಸರು ಬಂದಿತು. ತ್ರಿಕುಟಾ ೯ ವರ್ಷದವಳಿದ್ದಾಗ ತಂದೆಯ ಬಳಿ ಸಮುದ್ರತೀರದಲ್ಲಿ ತಪಸ್ಸು ಮಾಡಲು ಅನುಮತಿ ಕೇಳಿದಳು.
ಆ. ಸಮುದ್ರತೀರದಲ್ಲಿ ತಪಸ್ಸು ಮಾಡುವಾಗ ತ್ರಿಕುಟಾ ರಾಮರೂಪಿ ಶ್ರೀವಿಷ್ಣುವಿಗೆ ಪ್ರಾರ್ಥನೆ ಮಾಡಿದಳು. ಸೀತೆಯನ್ನು ಹುಡುಕುತ್ತಾ ಶ್ರೀರಾಮನು ತನ್ನ ಸೈನ್ಯದೊಂದಿಗೆ ಸಮುದ್ರತೀರ ತಲುಪಿದನು. ಆಗ ಧ್ಯಾನಮಗ್ನವಾಗಿರುವ ದಿವ್ಯ ಬಾಲಕಿಯು ಅವನ ಗಮನವನ್ನು ಸೆಳೆದಳು. ತ್ರಿಕುಟಾ ಕಣ್ಣುಗಳನ್ನು ತೆರೆದಳು. ಅವಳು ಶ್ರೀರಾಮನಿಗೆ, ‘ನಾನು ನಿಮ್ಮನ್ನು ನನ್ನ ಪತಿಯೆಂದು ಸ್ವೀಕರಿಸಿದ್ದೇನೆ,’ ಎಂದಳು. ಶ್ರೀರಾಮನು ಅವಳಿಗೆ, ‘ಈ ಅವತಾರಕಾಲದಲ್ಲಿ ನಾನು ಕೇವಲ ಸೀತೆಯೊಂದಿಗೆ ಏಕನಿಷ್ಠವಿರುವ ವಚನ ತೆಗೆದುಕೊಂಡಿದ್ದೇನೆ,’ ಎಂದು ಹೇಳಿದನು. ತದ ನಂತರ ಭಗವಂತನು ಅವಳಿಗೆ, ‘ಕಲಿಯುಗದಲ್ಲಿ ನಾನು ಕಲ್ಕಿ ರೂಪದಲ್ಲಿ ಅವತಾರ ತಾಳುವೆನು, ಆಗ ನಿನ್ನ ಈ ಇಚ್ಛೆಯು ಪೂರ್ಣವಾಗುವುದು,’ ಎಂಬ ಆಶ್ವಾಸನೆಯನ್ನು ನೀಡಿದನು.
ಇ. ಶ್ರೀರಾಮನು ತ್ರಿಕುಟಾಳಿಗೆ ಉತ್ತರ ಭಾರತದಲ್ಲಿನ ಮಾಣಿಕ ಬೆಟ್ಟದ ಮೇಲಿನ ತ್ರಿಕುಟ ಸಾಲಿನಲ್ಲಿರುವ ಗುಹೆಯಲ್ಲಿ ಧ್ಯಾನಸ್ಥಳಾಗಿರಲು ಹೇಳಿದನು. ಅನಂತರ ಶ್ರೀರಾಮನು ‘ರಾವಣನ ವಿರುದ್ಧ ಜಯಗಳಿಸಲು ತ್ರಿಕುಟಾ ‘ನವರಾತ್ರಿ’ಯ ಉಪಾಸನೆ ಮಾಡಿದಳು.
ಶ್ರೀರಾಮನು ಅವಳಿಗೆ, ‘ತ್ರಿಕುಟಾ ಶ್ರೀ ವೈಷ್ಣೊದೇವಿಯ ರೂಪದಲ್ಲಿ ಪ್ರಸಿದ್ಧಳಾಗುವಳು ಮತ್ತು ಅಮರಳಾಗುವಳು. ಎಲ್ಲ ಜಗತ್ತು ಶ್ರೀ ವೈಷ್ಣೊದೇವಿಯ ಸ್ತುತಿಯನ್ನು ಮಾಡುವುದು,’ ಎಂಬ ವಚನವನ್ನು ಕೊಟ್ಟಿದ್ದನು. (ಆಧಾರ : ಜಾಲತಾಣ)